More

    ಸಂಸ್ಕಾರವುಳ್ಳ ಶಿಕ್ಷಣದಿಂದ ಬದುಕು ಬಂಗಾರ

    ಬೈಲಹೊಂಗಲ: ತಂದೆ-ತಾಯಿ, ಗುರು ಹಾಗೂ ಕಲಿತ ಸಂಸ್ಥೆಯನ್ನು ಎಂದಿಗೂ ಮರೆಯಬಾರದು ಎಂದು ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮಿಜಿ ಹೇಳಿದರು.

    ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿ ಈಶಪ್ರಭು ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಂಸ್ಕಾರ ಹೊಂದಿದ ಉತ್ತಮ ಶಿಕ್ಷಣ ಮನುಷ್ಯನ ಬದುಕು ಬಂಗಾರವಾಗುತ್ತದೆ ಎಂದರು.

    ಬೈಲಹೊಂಗಲ-ಹುಬ್ಬಳ್ಳಿ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಏಣಗಿ ಬಂಗಾರಜ್ಜನ ಮಠದ ವಿರೂಪಾಕ್ಷ ಶ್ರೀ ಸಾನ್ನಿಧ್ಯ ವಹಿಸಿದ್ದರು. ವಿಮರ್ಶಕ ಡಾ.ಎ್.ಟಿ.ಸೊರಟೂರ ಉಪನ್ಯಾಸ ನೀಡಿದರು.

    ಶ್ರೀಗಳು, ಆಡಳಿತ ಮಂಡಳಿ ನಿರ್ದೇಶಕರು, ಸಂಸ್ಥೆಯ ಸಿಬ್ಬಂದಿ, ನಿವೃತ್ತರು, ಉನ್ನತ ಸ್ಥಾನದಲ್ಲಿರುವ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ವಿವಿಧ ಕ್ರೀಡೆ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರನ್ನು ಸನ್ಮಾನಿಸಲಾಯಿತು.

    ಸಂಸ್ಥೆಯ ಚೇರ್ಮನ್ ಡಾ.ವಿ.ಐ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿ.ಎಸ್.ಬಳಿಗಾರ, ನಿರ್ದೇಶಕರಾದ ಎಂ.ಜಿ.ರೊಟ್ಟಯ್ಯನವರ, ಎನ್.ಎಂ.ಕರೀಕಟ್ಟಿ, ಬಿ.ಆರ್.ಭೋಜಯ್ಯನವರ, ಎ.ಆರ್.ಮಾರಿಹಾಳ, ಎಂ.ಬಿ.ಕಟ್ಟಿ, ಎಸ್.ಡಿ.ಗುರುಪುತ್ರನವರ, ಎಂ.ಬಿ.ಹೊಂಗಲ, ಕಾರ್ಯದರ್ಶಿ ಎಂ.ಎಂ.ಕಾಡೇಶನವರ, ಉಪನ್ಯಾಸಕರಾದ ಎಂ.ಎಪಿ.ಉಪ್ಪಿನ, ಎಸ್.ಎಂ.ಕರೀಕಟ್ಟಿ, ಜಿ.ಬಿ.ಜೀರಿಗವಾಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts