More

    ಸಂಸ್ಕಾರವಂತ ಮಕ್ಕಳೇ ದೇಶದ ಆಸ್ತಿ

    ಹೊಳೆಆಲೂರ: ಬದುಕು ಬಂಗಾರವಾಗಿಸಲು ತ್ಯಾಗ ಮಾಡುವ ತಂದೆ-ತಾಯಿ, ಗುರು-ಹಿರಿಯರ ಬಗ್ಗೆ ಗೌರವ ಭಾವನೆ ಹೊಂದಿರುವ ಸಂಸ್ಕಾರವಂತ ಮಕ್ಕಳೇ ದೇಶದ ಆಸ್ತಿ ಎಂದು ಬೇಲೂರು ಬಸವೇಶ್ವರ ಮಠದ ಡಾ. ಮಹಾಂತ ಬಸವಲಿಂಗ ಸ್ವಾಮೀಜಿ ಹೇಳಿದರು.


    ಗ್ರಾಮದ ಯಚ್ಚರೇಶ್ವರ ಮಠದ ವತಿಯಿಂದ ಶನಿವಾರ ಜರುಗಿದ ಭಗವತ್ ಚಿಂತನ, ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 20 ವರ್ಷಗಳಿಂದ ದೇಶದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿನ ದೊಡ್ಡ ಹಗರಣಗಳ ರೂವಾರಿ ಐಎಎಸ್, ಐಪಿಎಸ್ ಅಧಿಕಾರಿಗಳೇ ಆಗಿದ್ದಾರೆ. ರಾಜಕೀಯ ನಾಯಕರು, ಕೆಲವು ಧಾರ್ವಿುಕ ಸಂತರು ಹೀನ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ನೈತಿಕ ಮೌಲ್ಯ, ದೇಶಪ್ರೇಮ ಬೆಳೆಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.


    ನರಗುಂದ ಲಯನ್ಸ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿ ರ್ಯಾಂಕ್ ಪಡೆದು ಅಹಂಭಾವ ತೋರಬಾರದು. ವಿದ್ಯೆಯ ಜತೆಗೆ ವಿನಯವೂ ಇರಬೇಕು. ಗ್ರಾಮೀಣ ಭಾಗದಲ್ಲಿ ಸುಪ್ತವಾಗಿರುವ ಪ್ರತಿಭೆಗಳಿಗೆ ಸ್ಪೂರ್ತಿ ತುಂಬುವ ಕಾಯಕ ಮಾಡುತ್ತಿರುವ ಯಚ್ಚರೇಶ್ವರ ಸ್ವಾಮೀಜಿಗಳ ಕಾರ್ಯ ಶ್ಲಾಘನೀಯ ಎಂದರು.


    ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಯಚ್ಚರಸ್ವಾಮೀಜಿ ನೇತೃತ್ವ ವಹಿಸಿದ್ದರು. ವರ್ತಕ ಬಸವರಾಜ ಬೀರನೂರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಪ್ರವೀಣ ಶಲ್ಲಿಕೇರಿ, ಪಿಡಿಒ ಬಸವರಾಜ ಗಿರಿತಮ್ಮನ್ನವರ, ಬಿಜೆಪಿ ಒಬಿಸಿ ಮೊರ್ಚಾ ಜಿಲ್ಲಾಧ್ಯಕ್ಷ ಅಶೋಕ ಹೆಬ್ಬಳ್ಳಿ, ಜಿಪಂ ಮಾಜಿ ಸದಸ್ಯ ಶಿವಕುಮಾರ ನೀಲಗುಂದ, ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಸೋಮನಗೌಡ ಹುಡೇದಮನಿ, ಸುರೇಶ ಗಾಣಿಗೇರ, ವೆಂಕಟೇಶ ಗಾಣಿಗೇರ, ಸಂಗಪ್ಪ ಅಂಗಡಿ, ಬಸವಂತಪ್ಪ ತಳವಾರ, ಶಂಕರಗೌಡ್ರ ಗಿರಡ್ಡಿ, ಶಿವಾನಂದ ಹೂಗಾರ, ಪಾಂಡುರಂಗ ಪತ್ತಾರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts