ತಪ್ಪನ್ನು ಪೋಷಿಸಿದರೆ ಅನರ್ಥ ಸೃಷ್ಟಿ

blank

ಶಿವಮೊಗ್ಗ: ಮೃತ್ಯು, ನರಕ ಮತ್ತು ತಮಸ್ಸಿಗೆ ಕಾರಣವಾಗುವ ಮಾರ್ಗದಲ್ಲಿ ನಾವಿದ್ದಾಗ ಯಾರು ಅದನ್ನು ತಪ್ಪಿಸುವುದಿಲ್ಲವೋ ಅಥವಾ ತಿಳಿವಳಿಕೆ ಹೇಳುವುದಿಲ್ಲವೋ ಆತ ತಂದೆ, ಗುರು ಅಥವಾ ರಾಜ ಎನಿಸಿಕೊಳ್ಳಲು ಅರ್ಹನಲ್ಲ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳು ಹೇಳಿದರು.

ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ವಿದ್ವತ್ ಸಭೆಯಲ್ಲಿ ಶ್ರೀಗಳು, ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನ ಆಧಾರಿತ ಅನುಗ್ರಹ ಸಂದೇಶ ನೀಡಿದರು. ನಾವು ತಪ್ಪು ದಾರಿಯಲ್ಲಿದ್ದಾಗ ನಮಗೆ ಸನ್ಮಾರ್ಗದ ಬೋಧನೆ ಮಾಡಬೇಕು. ಅದು ಬಿಟ್ಟು ನೀನು ಮಾಡಿದ್ದೇ ಸರಿ. ನಿನ್ನ ಇಷ್ಟಕ್ಕೆ ಬಂದAತೆ ಇರು. ಬಂದ ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇನೆ. ನನ್ನ ಬಳಿ ಬೇಕಾದಷ್ಟು ಸಂಪತ್ತಿದೆ ಎಂದು ಪೋಷಿಸಿದರೆ ಅದು ಅನರ್ಥಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ವ್ಯಕ್ತಿಯನ್ನು ಮೆಚ್ಚಿಸಲು ಆತ ಮಾಡಿದ್ದನ್ನೆಲ್ಲ ಸರಿ ಎನ್ನಬಾರದು. ನಾವು ತಪ್ಪು ಮಾಡಿದಾಗ ತಿದ್ದುವ ಮತ್ತು ಶಾಸ್ತçವಿಹಿತವಾಗಿ ಬದುಕಿದಾಗ ಪೊರೆವ ಭಗವಂತನೇ ನಮಗೆ ಸರಿಯಾದ ಗುರು ಎನಿಸಿದ್ದಾನೆ. ಇಂತಹ ಭಗವಂತ ಎಲ್ಲರ ಹೃದಯದಲ್ಲಿದ್ದಾನೆ. ಹೀಗಿರುವಾಗ ಯಾರೂ ಬಡವರಲ್ಲ, ದುರ್ಬಲರಲ್ಲ. ಕಷ್ಟ ಬಂದಾಗ ಒಳಗಿರುವ ಪರಮಾತ್ಮನನ್ನು ಎಬ್ಬಿಸಿ ಅವನಿಗೆ ಶರಣು ಹೋಗಿ. ಅನಂತ ಜೀವರಾಶಿಯಲ್ಲಿದ್ದೂ ಅವರ ಯೋಗಕ್ಷೇಮ ನೋಡುವಾತ ಭಗವಂತನೊಬ್ಬನೇ ಎಂದು ತಿಳಿಸಿದರು.
ಪಂಡಿತ ಜೀವೇಶಾಚಾರ್ಯ ಪ್ರವಚನ ನೀಡಿದರು. ಉತ್ತರಾದಿ ಮಠದ ದಿವಾನ ಶಶಿ ಆಚಾರ್ಯ, ಪಂಡಿತರಾದ ವಿದ್ಯಾಽÃಶಾಚಾರ್ಯ ಗುತ್ತಲ, ಬಾಳಗಾರು ಜಯತೀರ್ಥಾಚಾರ್ಯ, ನವರತ್ನ ಶ್ರೀನಿವಾಸಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ ಇತರರಿದ್ದರು.

ದಂಡ ಸ್ನಾನ ಸಂಪನ್ನ
ಕ್ಷಿಣಾಯನ ಪರ್ವ ಪುಣ್ಯಕಾಲವಿದ್ದ ಕಾರಣ ಶ್ರೀಗಳು ಹೊಳೆಹೊನ್ನೂರಿನ ಭದ್ರಾ ನದಿಯಲ್ಲಿ ಸೋಮವಾರ ದಂಡ ಸ್ನಾನ ಮಾಡಿದರು. ಈ ವೇಳೆ ನೆರೆದಿದ್ದ ನೂರಾರು ಭಕ್ತರಿಗೆ ದಂಡೋದಕ ಮತ್ತು ತಮ್ಮ ಗುರುಗಳಾದ ಶ್ರೀ ಸತ್ಯಪ್ರಮೋದ ತೀರ್ಥರ ಪಾದುಕೆಗಳ ಪಾದೋದಕವನ್ನು ಪ್ರೋಕ್ಷಣೆ ಮಾಡಿದರು. ಪರ್ವಕಾಲದ ನಿಮಿತ್ತ ಸಂಸ್ಥಾನ ದೇವರ ಪೂಜೆಯನ್ನು ಸಂಜೆ ನೆರವೇರಿಸಲಾಯಿತು. ಶ್ರೀ ಸತ್ಯಧರ್ಮ ತೀರ್ಥ ಶ್ರೀಪಾದರ ಮೂಲ ವ್ರಂದಾವನದ ಎದುರು ಶ್ರೀಗಳು ಸ್ವಯಂ ಪಂಚ ತಪ್ತ ಮುದ್ರಾಧಾರಣೆ ಮಾಡಿಕೊಂಡರು.
Share This Article

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…

honeymoon destinations : 2024 ರಲ್ಲಿ ನವವಿವಾಹಿತರನ್ನು ಆಕರ್ಷಿಸಿದ ನೆಚ್ಚಿನ ಹನಿಮೂನ್ ತಾಣಗಳು ಇವು..!

 honeymoon destinations  : ವ್ಯಕ್ತಿಯ ಆದ್ಯತೆಗಳು ಮತ್ತು ಆಯ್ಕೆಗಳು ವರ್ಷಗಳಲ್ಲಿ ಬದಲಾಗುತ್ತವೆ. ಈಗ ನಾವು 2024…