More

    ಕೃಷಿ ಮಾಡುವ ಪದ್ಧತಿ ಸುಧಾರಿಸಲಿ

    ಮೂಡಲಗಿ: ರೈತರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿಕೊಳ್ಳುವ ಜತೆಗೆ ಕೃಷಿ ಪದ್ಧತಿಯಲ್ಲಿ ಬದಲಾವಣೆ ಅಳವಡಿಸಿಕೊಂಡರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

    ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನವರಾತ್ರಿ ಉತ್ಸವ ಕಮಿಟಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಬರ್ಡ್ಸ್ ತುಕ್ಕಾನಟ್ಟಿ ಹಾಗೂ ಶಿವಬೋಧರಂಗ ಪಿಕೆಪಿಎಸ್ ಮೂಡಲಗಿ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕೃಷಿ ಮೇಳವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಿದ್ದು, ಕೃಷಿಮೇಳದಲ್ಲಿ ಪ್ರದರ್ಶನಕ್ಕಿಟ್ಟಿರುವ ಸಿರಿಧಾನ್ಯ ಗಮನಿಸಿ ಆಸಕ್ತರು ಕೃಷಿ ಮಾಡಬೇಕು ಎಂದರು.

    ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ರೈತರು ಏಕಬೇಳೆ ಪದ್ಧತಿ ಕೈಬಿಟ್ಟು ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಕೃಷಿಮೇಳ ಏರ್ಪಡಿಸಿರುವುದು ಶ್ಲಾಘನೀಯ ಎಂದರು. ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಶಶಿಕಾಂತ ಮಹಾರಾಜರು ಮಾತನಾಡಿ, ಅತಿಯಾದ ರಾಸಾಯನಿಕ ಗೊಬ್ಬರ ಬಳಸಿ ಭೂಮಿತಾಯಿಯನ್ನು ಹಾಳು ಮಾಡುತ್ತಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಸಾವಯವ ಬೇಸಾಯ ಪದ್ಧತಿ ಅನುಸರಿಸಿದರೆ ರೈತನ ಬಾಳು ಹಸನಾಗುತ್ತಿದೆ ಎಂದರು.

    ಬೆಳಗಾವಿ ಜಂಟಿ ಕೃಷಿ ನಿರ್ದೇಶಕ ಶಿವಾನಂದ ಪಾಟೀಲ ಮಾತನಾಡಿ, ಕೃಷಿ ಇಲಾಖೆ ರೈತರ ಒಡನಾಡಿಯಾಗಿ ಮತ್ತು ಜ್ಞಾನವನ್ನು ಹೆಚ್ಚಿಸುವುದಗೋಸ್ಕರ ಸಾಕಷ್ಟು ಯೋಜನೆಗಳೊಂದಿಗೆ ವಿಚಾರ ಮಿನಿಮಯ ಮಾಡಿಕೊಳ್ಳುತ್ತಿದೆ. ಕಲ್ಲೋಳಿಯ ಪ್ರಗತಿಪರ ರೈತ ಬಿ.ಬಿ.ಬೆಳಕೂಡ ಒಂದು ಎಕರೆಯಲ್ಲಿ 125 ಟನ್ ಕಬ್ಬು ಬೆಳೆದಿದ್ದಾರೆ. ಮನಸ್ಸು ಮಾಡಿದರೆ ಕೃಷಿಯಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.

    ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸುಣಧೋಳಿಯ ಶಿವಾನಂದ ಶ್ರೀ, ಮುನ್ಯಾಳ-ಬಾಗೋಜಿಕೊಪ್ಪದ ಡಾ.ಮುರುಘರಾಜೇಂದ್ರ ಶಿವಾಚಾರ್ಯರು, ಶಿವಾಪುರದ ಅಡವಿಸಿದ್ದರಾಮ ಶ್ರೀ ಆಶೀರ್ವಚನ ನೀಡಿದರು. ಪ್ರಗತಿಪರ ರೈತ ಬಿ.ಬಿ.ಬೆಳಕೂಡ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ನಿರ್ದೇಶಕರಾದ ರವೀಂದ್ರ ಸೋನವಾಲಕರ, ಎಸ್.ಆರ್.ಸೋನವಾಲಕರ, ಬಿ.ಎಚ್.ಸೋನವಾಲಕರ, ಸುನೀಲ ಸತರಡ್ಡಿ, ತಹಸೀಲ್ದಾರ್ ಶಿವಾನಂದ ಬಬಲಿ, ಬಿಇಒ ಅಜಿತ ಮನ್ನಿಕೇರಿ, ಕೃಷಿ ಇಲಾಖೆಯ ಉಪ ನಿರ್ದೇಶಕ ರಂಗಣ್ಣ ನಾಗನ್ನವರ, ಕೃಷಿ ಅಧಿಕಾರಿ ಎಂ.ಎನ್.ನದಾಫ್, ಎಸ್.ಆರ್.ಸೋನವಾಲಕರ, ಬಿ.ಬಿ.ಹಂದಿಗುಂದ, ಸದಾಶಿವ ತಲಬಟ್ಟಿ, ಚೂನಪ್ಪ ಪೂಜೇರಿ, ಪ್ರಕಾಶ ಮಾದರ, ಆನಂದ ಗಿರಡ್ಡಿ, ಮಲ್ಲಪ್ಪ ನೇಮಗೌಡರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts