More

    ಉಪನಿಷತ್ತಿನಲ್ಲಿ ಸ್ಫಟಿಕ ಚಿಕಿತ್ಸೆಯ ಉಲ್ಲೇಖವಿದೆ

    ಚಿತ್ರದುರ್ಗ: ಸ್ಫಟಿಕ ಚಿಕಿತ್ಸಾ ಪದ್ಧತಿ ದೀರ್ಘ ಕಾಲದ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿದೆ ಎಂದು ನಾಯಕನಹಟ್ಟಿ ಪಪಂ ಮಾಜಿ ಸದಸ್ಯ ಎನ್.ಐ. ಮಹ ಮ್ಮದ್ ಮನ್ಸೂರ್ ಹೇಳಿದರು.

    ನಗರದ ರಿದ್ಧಿ ಫೌಂಡೇಷನ್ ಸಂಸ್ಥೆಯಲ್ಲಿ ಶುಕ್ರವಾರ ಸ್ಫಟಿಕ ಚಿಕಿತ್ಸೆ ಹಾಗೂ ಸಂಗೀತ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,ಈ ಚಿಕಿತ್ಸೆ ಪದ್ಧತಿ ಉಪನಿಷತ್ತಿನಲ್ಲೂ ಉಲ್ಲೇಖವಿದೆ.ರಾಮಾಯಣ,ಮಹಾಭಾರತ ಹಾಗೂ ರಾಜಮಹಾರಾಜರ ಕಾಲದಲ್ಲಿ ಚಾಲ್ತಿಯಲ್ಲಿದ್ದ ಈ ಚಿಕಿತ್ಸೆಯನ್ನು ಫೌಂಡೇಶನ್ ಸಂಸ್ಥೆ ಅಳವಡಿಸಿಕೊಂಡಿರುವುದು ಸ್ವಾಗತಾರ್ಹವೆಂದರು.

    ಪತ್ರಕರ್ತ ಟಿ.ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿ,ಸನಾತನ ಔಷಧ ಪದ್ಧತಿಗಳು ಅಮೂಲ್ಯವಾದದ್ದಾಗಿವೆ. ಯೋಗ, ಧ್ಯಾನಗಳಿಂದ ಅನೇಕ ಕಾಯಿಲೆಗಳನ್ನು ವಾಸಿ ಮಾಡಲು ಸಾಧ್ಯವಿದೆ ಎಂದರು. ಸಂಸ್ಥೆಯ ಖಜಾಂಚಿ ಶೋಭಾ ಮಾತನಾಡಿದರು. ಈ ವೇಳೆ ಕರ್ನಾಟಕ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಟಿ.ತಿಪ್ಪೇಸ್ವಾಮಿ ಸಂಪಿಗೆ ಅವರನ್ನು ಗೌರವಿಸಲಾಯಿತು. ನೃತ್ಯ ತರಬೇತಿ ಶಿಕ್ಷಕ ಜಮದಗ್ನಿ ಇದ್ದರು. ಮಮತಾ ನಿರೂಪಿಸಿದರು. ಪ್ರಿಯದರ್ಶಿನಿ ಸ್ವಾಗತಿಸಿ, ಟಿ.ಶಿವರುದ್ರಮ್ಮ ವಂದಿಸಿದರು.

    ——

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts