More

    ಸರ್ಕಾರ ಆದೇಶಿಸಿದರೆ ರಾಮಮಂದಿರಕ್ಕೆ ಸೂಕ್ತ ಭದ್ರತೆ ಒದಗಿಸಲು ಸಿದ್ಧ: ಸಿಆರ್​ಪಿಎಫ್ ಡಿಜಿ

    ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಭದ್ರತೆಗೆ ಸಂಬಂಧಿಸಿದಂತೆ ಸರ್ಕಾರ ಹೊಸದಾಗಿ ಯಾವುದೇ ಆದೇಶ ನೀಡಿಲ್ಲ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಹಾನಿರ್ದೇಶಕ ಎ ಪಿ ಮಹೇಶ್ವರಿ ಸೋಮವಾರ ತಿಳಿಸಿದ್ದಾರೆ.
    ಸಿಆರ್​ಪಿಎಫ್ ನ 82ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಹಾಜರಿದ್ದ ಅವರು ‘ರಾಮ ಮಂದಿರಕ್ಕೆ ಸಿಆರ್​ಪಿಎಫ್ ಭದ್ರತೆ ಒದಗಿಸುತ್ತದೆಯೇ’ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
    ರಾಮ ಮಂದಿರದ ಭದ್ರತೆಯ ಬಗ್ಗೆ ಯಾವುದೇ ಹೊಸ ಆದೇಶವನ್ನು ಹೊರಡಿಸಲಾಗಿಲ್ಲ. ಸರ್ಕಾರವು ಅಂತಹ ಸೂಚನೆಗಳನ್ನು ಅಥವಾ ನಿರ್ದೇಶನಗಳನ್ನು ನೀಡಿದರೆ, ಸಿಆರ್​​​ಪಿಎಫ್ ತನ್ನ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ ಎಂದು ಅವರು ಹೇಳಿದರು.

    ಇದನ್ನೂ ಓದಿ: ಅಯೋಧ್ಯೆ ಪಟ್ಟಣ ಸೌಂದರ್ಯೀಕರಣಕ್ಕೆ 55 ಕೋಟಿ ರೂ.ಯೋಜನೆಗೆ ಎನ್​ಎಚ್​ಎಐ ಗ್ರೀನ್ ಸಿಗ್ನಲ್


    ರಾಮ್ ಮಂದಿರದ ಸುರಕ್ಷತೆಯ ಬಗ್ಗೆ ಸರ್ಕಾರ ಶೀಘ್ರದಲ್ಲೇ ತೀರ್ಮಾನಿಸಲಿದೆ ಮತ್ತು ಸಿಆರ್​​ಪಿಎಫ್ ಗೆ ಈ ಜವಾಬ್ದಾರಿ ಒದಗಿಬರುವ ಸಾಧ್ಯತೆಯಿದೆ. ಸದ್ಯ ಇದು ವೈಷ್ಣೋ ದೇವಿ ದೇವಸ್ಥಾನಕ್ಕೂ ಭದ್ರತೆ ಒದಗಿಸುತ್ತಿದೆ. ಸಿಆರ್​​ಪಿಎಫ್ ನಂತರ, ಕೇಂದ್ರ ಗೃಹ ಸಚಿವಾಲಯದ ಕಟ್ಟಡ ಸೇರಿದಂತೆ ಎಲ್ಲಾ ಪ್ರಮುಖ ಸರ್ಕಾರಿ ಸಂಸ್ಥೆಗಳಿಗೆ ಭದ್ರತೆ ಒದಗಿಸಿರುವ ಸಿಐಎಸ್ಎಫ್ ಗೆ ಮಂದಿರದ ಭದ್ರತಾ ಜವಾಬ್ದಾರಿ ಒದಗಿಬರುವ ಸಾಧ್ಯತೆಯೂ ಇದೆ. 

    ಶ್ರೀರಾಮ ದೇವರ ವಸ್ತ್ರ ವಿನ್ಯಾಸದ ಜವಾಬ್ದಾರಿ ಪ್ರಸಿದ್ಧ ದರ್ಜಿ ಲಾಲ್ ಕುಟುಂಬದ ಹೆಗಲಿಗೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts