More

  ಶೃಂಗೇರಿಯಲ್ಲಿ ಭಕ್ತರ ದಂಡು

  ಶೃಂಗೇರಿ: ಬ್ಯಾಂಕ್, ಕಚೇರಿಗಳಿಗೆ ರಜೆ ಹಿನ್ನೆಲೆಯಲ್ಲಿ ಶೃಂಗೇರಿ ಶ್ರೀ ಶಾರದಾಂಬಾ ದೇವಾಲಯ ಶುಕ್ರವಾರ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಶ್ರೀಶಾರದೆ, ಶ್ರೀತೋರಣಗಣಪತಿ, ಶ್ರೀವಿದ್ಯಾಶಂಕರ,ಶ್ರೀ ಶಂಕರಾಚಾರ್ಯ, ಶ್ರೀ ಈಶ್ವರಗಿರಿ ಇತ್ಯಾದಿ ದೇವಾಲಯಗಳನ್ನು ಸಂದರ್ಶಿಸಿ ವಿಶೇಷ ಪೂಜೆ ಸಲ್ಲಿಸಿದರು. ನರಸಿಂಹವನದ ಗುರು ನಿವಾಸದಲ್ಲಿ ಜಗದ್ಗುರುಗಳನ್ನು ಸಂದರ್ಶಿಸಿ ಆಶೀರ್ವಾದ ಪಡೆದರು. ಶ್ರೀ ಮಠದ ಸಮೀಪದ ಹೋಟೇಲ್‌ಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ವಸತಿ ಗೃಹಗಳು ಭರ್ತಿಯಾಗಿದ್ದವು. ಶ್ರೀ ಶಾರದಾ ಪ್ರಸಾದವನ್ನು ಸ್ವೀಕರಿಸಿ ಹೊರನಾಡು, ಕೊಲ್ಲೂರು,ಧರ್ಮಸ್ಥಳ,ಉಡುಪಿ ಇತ್ಯಾದಿ ಕಡೆ ಪ್ರವಾಸಿಗರು ತೆರಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts