More

    1.28 ಕೋಟಿ ಜನರಿಗೆ ಗೃಹ ಲಕ್ಷ್ಮೀ ನೆರವು

    ಹರಪನಹಳ್ಳಿ: ಮಹಿಳೆಯರು ಆರ್ಥಿಕವಾಗಿ ಸಧೃಢವಾಗಲು ರಾಜ್ಯ ಸರ್ಕಾರ ಗೃಹ ಲಕ್ಷ್ಮೀ ಯೋಜನೆಯ ಮೂಲಕ ಅವಕಾಶ ಮಾಡಿಕೊಟ್ಟಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

    ಇದನ್ನೂ ಓದಿ: ಐಪಿಎಲ್ ಹರಾಜಿಗಾಗಿ ಆಟಗಾರರ ನೋಂದಣಿಗೆ ಗಡುವು ನಿಗದಿಪಡಿಸಿದ ಬಿಸಿಸಿಐ

    ಪಟ್ಟಣದ ತಾಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ಅಯೋಜಿಸಿದ್ದ ಗೃಹ ಲಕ್ಷ್ಮೀ ಯೋಜನೆ ಉದ್ಘಾಟಿಸಿ ಸೋಮವಾರ ಮಾತನಾಡಿದರು.
    ಸರ್ಕಾರಕ್ಕೆ ತೆರಿಗೆ ಪಾವತಿಸುವವರು ಈ ಯೋಜನೆಗೆ ಅರ್ಹರಲ್ಲ. ರಾಜ್ಯದಲ್ಲಿ 1.28 ಕೋಟಿ ಪಲಾನುಭವಿಗಳಿದ್ದು 36 ಸಾವಿರ ಕೋಟಿ ರೂ. ಅನುದಾನ ಈ ವರ್ಷ ತೆಗೆದಿಡಲಾಗಿದೆ. ಕೆಲವರು ನೋಂದಣಿ ಮಾಡಿಸಲು ಹಣ ಕೇಳುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದ್ದು ಯಾರಿಗೂ ಯಾವ ಕಾರಣಕ್ಕೂ ಹಣ ನೀಡಬಾರದು. ಈ ಯೋಜನೆಯಲ್ಲಿ ಅರ್ಜಿ ಹಾಕಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಆಗತ್ಯವಿದ್ದು ನೋಂದಣಿಗೆ ಯಾವುದೇ ಗಡುವು ಇಲ್ಲ ಎಂದರು.

    ಯುವ ನಿಧಿಯನ್ನು ಅಕ್ಟೋಬರ್‌ನಲ್ಲಿ ಜಾರಿ


    ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಅನುಷ್ಠಾನಗೊಳಿಸಿದ್ದು, ಇನ್ನೊಂದು ಯುವ ನಿಧಿಯನ್ನು ಅಕ್ಟೋಬರ್‌ನಲ್ಲಿ ಜಾರಿಗೊಳಿಸಲಾಗುತ್ತದೆ ಎಂದರು.


    ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಮಾತನಾಡಿ, ಪಟ್ಟಣದಲ್ಲಿ ಪುರಸಭೆ ವತಿಯಿಂದ ತಾಲೂಕು ಪಂಚಾಯತಿ ಸಾಮರ್ಥ್ಯಸೌಧ, ಪುರಸಭಾ ಕಚೇರಿ, ಹಾಗು ಹುಲ್ಲುಗರಡಿಕೇರಿಯ ಸಮುದಾಯ ಭವನದಲ್ಲಿ ನೋಂದಣಿ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.
    ಮುಖಂಡರಾದ ಗುಡಿ ನಾಗರಾಜ, ಚಿಕ್ಕೇರಿ ಬಸಪ್ಪ, ಆರೋಗ್ಯ ನೀರಿಕ್ಷಕ ಮಂಜುನಾಥ್ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts