More

    ಐಪಿಎಲ್ ಹರಾಜಿಗಾಗಿ ಆಟಗಾರರ ನೋಂದಣಿಗೆ ಗಡುವು ನಿಗದಿಪಡಿಸಿದ ಬಿಸಿಸಿಐ

    ನವದೆಹಲಿ: ಮುಂಬರುವ ಐಪಿಎಲ್ 14ನೇ ಆವೃತ್ತಿಗೆ ಮುನ್ನ ನಡೆಯಲಿರುವ ಆಟಗಾರರ ಮಿನಿ ಹರಾಜು ಪ್ರಕ್ರಿಯೆಗೆ ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಲು ಕ್ರಿಕೆಟಿಗರಿಗೆ ಫೆಬ್ರವರಿ 4ರವರೆಗೆ ಗುಡುವು ನೀಡಲಾಗಿದೆ. ಅಲ್ಲದೆ ಈ ಸಂಬಂಧ ಸಹಿ ಹಾಕಿದ ಮೂಲದಾಖಲೆ ಪತ್ರಗಳನ್ನು ಅಂಚೆಯ ಮೂಲಕ ಸಲ್ಲಿಸಲು ಫೆಬ್ರವರಿ 12ರವರೆಗೆ ಗಡುವು ನೀಡಲಾಗಿದೆ.

    ಹರಾಜಿನಲ್ಲಿ ಪಾಲ್ಗೊಳ್ಳಲು ಬಯಸುವ ಕ್ರಿಕೆಟಿಗರ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಜತೆಗೆ ತಾನೇ ನೇರವಾಗಿ ಸಂವಹನ ನಡೆಸಲು ಬಯಸಿರುವ ಬಿಸಿಸಿಐ, ಯಾವುದೇ ಆಟಗಾರರ ಏಜೆಂಟ್ ಅಥವಾ ಮ್ಯಾನೇಜರ್‌ಗಳ ಜತೆಗೆ ವ್ಯವಹರಿಸದಿರಲು ನಿರ್ಧರಿಸಿದೆ. ಇದನ್ನು ಮೀರಿ ಯಾರಾದರೂ ಏಜೆಂಟ್-ಮ್ಯಾನೇಜರ್ ಮಂಡಳಿಯನ್ನು ಸಂಪರ್ಕಿಸಲು ಮುಂದಾದರೆ ಆ ಆಟಗಾರರನ್ನು ಹರಾಜು ಪಟ್ಟಿಯಿಂದ ಕೈಬಿಡಲಾಗುವುದು ಎಂದು ಬಿಸಿಸಿಐ ಎಚ್ಚರಿಸಿದೆ.

    ಇದನ್ನೂ ಓದಿ: ಕರ್ನಾಟಕಕ್ಕೆ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ತಂದ ಅನಿರುದ್ಧ ಜೋಶಿ

    ಹರಾಜು ಪ್ರಕ್ರಿಯೆ ಫೆಬ್ರವರಿ 16ರಂದು ನಡೆಯುವ ನಿರೀಕ್ಷೆ ಇದೆ. ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸುವ 19 ವಯೋಮಿತಿಯ ಆಟಗಾರರು, ರಾಜ್ಯ ಕ್ರಿಕೆಟ್ ಸಂಸ್ಥೆಯ ನೋಂದಾಯಿತ ಆಟಗಾರರಾಗಿರಬೇಕು ಮತ್ತು ಕನಿಷ್ಠ 1 ಪ್ರಥಮ ದರ್ಜೆ ಅಥವಾ ಲಿಸ್ಟ್ ಎ ಪಂದ್ಯವನ್ನು ಆಡಿರಬೇಕು. ಹರಾಜು ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಐಪಿಎಲ್‌ನ ಎಲ್ಲ 8 ತಂಡಗಳಿಗೆ ಈ ಬಾರಿ ಉಳಿಸಿಕೊಳ್ಳಲು ಬಯಸುವ ಆಟಗಾರರ ಪಟ್ಟಿಯನ್ನು ಜನವರಿ 20ರೊಳಗೆ ಸಲ್ಲಿಸಲು ಬಿಸಿಸಿಐ ಈಗಾಗಲೆ ಸೂಚನೆ ನೀಡಿದೆ. ತಂಡಗಳು ಉಳಿಸಿಕೊಳ್ಳದ ಆಟಗಾರರು ಮತ್ತೆ ಹರಾಜಿಗೆ ಹೋಗಬಹುದಾಗಿದೆ.

    VIDEO: ನೆಟ್ ಬೌಲರ್ ಕೋಟಾದಲ್ಲಿ ಆಸೀಸ್‌ಗೆ ಹೋದವ…ಈಗ ಟೀಮ್ ಇಂಡಿಯಾದ ಭರವಸೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts