More

    ಛಬ್ಬಿಯಲ್ಲಿ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ

    ಹುಬ್ಬಳ್ಳಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಹಾನಿ ಪರಿಹಾರ, ಕನಿಷ್ಠ ಬೆಂಬಲ ಬೆಲೆ ಹಾಗೂ ಬೆಳೆ ಸಾಲ ಮುಂತಾದ ಯೋಜನೆಗಳಿಗೆ ಬೆಳೆ ಸಮೀಕ್ಷೆಯು ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನ ಛಬ್ಬಿಯಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಯಿತು.

    ಛಬ್ಬಿಯ ದೇವೇಂದ್ರಪ್ಪ ಕಾಗೇನವರ ಅವರ ಜಮೀನಿನಲ್ಲಿ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ ನೀಡಲಾಯಿತು.
    ಸರ್ಕಾರದ ಮಹತ್ತರ ಯೋಜನೆಯನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಛಬ್ಬಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಂಜುಳಾ ಸೂರಗೊಂಡ ಮನವಿ ಮಾಡಿದರು.

    ರೈತರು ತಮ್ಮ ಜಮೀನಿನ ಸಮೀಕ್ಷೆಯನ್ನು ತಾವೇ ಸ್ವತಃ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ತಮ್ಮ ಮೊಬೈಲ್‌ನ ಪ್ಲೇ ಸ್ಟೋರ್‌ನಲ್ಲಿ ಾರ್ಮರ್ ಕ್ರಾಪ್ ಸರ್ವೇ ಆ್ಯಪ್ 2023 ಎಂದು ಟೈಪ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಕು.

    ಇದರಲ್ಲಿ ರೈತರು ಆಧಾರ್ ನಂಬರ್ ಅನ್ನು ನಮೂದಿಸಬೇಕು. ಆಗ ಆಧಾರ್‌ಗೆ ನೋಂದಣಿ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದ್ದು, ಅದನ್ನು ಪಡೆದು ಇ-ಕೆವೈಸಿ ಮಾಡಿಕೊಳ್ಳಬೇಕು. ನಂತರ ಮೊಬೈಲ್ ಸಂಖ್ಯೆ ನಮೂದಿಸಬೇಕು. ಈ ಸಂಖ್ಯೆಗೆ ಬರುವ ಒಟಿಪಿ ಪಡೆದು ರೈತರು ಬೆಳೆ ಸಮೀಕ್ಷೆ ಆರಂಭಿಸಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

    ರೈತರು ತಮ್ಮ ಎ್ಐಡಿಗೆ ನೋಂದಣಿ ಆಗಿರುವ ಎಲ್ಲ ಸರ್ವೇ ನಂಬರ್‌ನ ಹೊಲಗಳು ಮತ್ತು ಎಲ್ಲ ವಿವಿಧ ಬೆಳೆಗಳ ಸಮೀಕ್ಷೆಯನ್ನು ಹಾಗೂ ಬೆಳೆ ಇ್ಲದ ಸಂದರ್ಭದಲ್ಲಿ ಪಾಳು ಎಂದು ನಮೂದಿಸಬೇಕು.

    ಸ್ಮಾರ್ಟ್ ೆನ್ ಇಲ್ಲದ ರೈತರು ತಮ್ಮ ಗ್ರಾಮದಲ್ಲಿನ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಗಳಿಂದ ನೇಮಿಸಲ್ಪಟ್ಟ ಖಾಸಗಿ ರಹವಾಸಿಗಳ (ಪ್ರೈವೇಟ್ ರೆಸಿಡೆಂಟ್ಸ್) ಸಹಾಯ ಪಡೆದು ಸರ್ವೇ ಕೈಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

    ರೈತ ಪ್ರಮುಖರಾದ ಪದ್ಮರಾಜ ಕಲಟಗಿ, ನಾಗಪ್ಪ ಸುಂಕದ, ಯ್ಲಪ್ಪ ಕಾಗೇನವರ, ಗದಿಗೆಪ್ಪ ಮಡಿವಾಳರ, ಗದಿಗೆಪ್ಪ ಬಂಡಿವಾಡ, ಉದಯ ಕಾಗೇನವರ, ಈರಪ್ಪ ಕಂಬಾರ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts