More

    ಕಾಡಾನೆಗಳ ದಾಳಿಗೆ ಬೆಳೆ ನಾಶ

    ಹನಗೋಡು: ಸಮೀಪದ ಕಚುವಿನಹಳ್ಳಿಯಲ್ಲಿ ಕಾಡಾನೆಗಳ ದಾಳಿಗೆ ಬೆಳೆ ನಾಶವಾಗಿದೆ.

    ನಾಗರಹೊಳೆ ಉದ್ಯಾನವನದ ಕೊಳುವಿಗೆ ಭಾಗದಿಂದ ತನ್ನ ಮರಿ ಸಹಿತ ಬಂದಿರುವ ಕಾಡಾನೆ ಕಚುವಿನಹಳ್ಳಿಯ ಕೆ.ಎಸ್.ಆನಂದ ಅವರ ಭತ್ತದ ಗದ್ದೆ, ಬಾಳೆ ತೋಟ ಸೇರಿದಂತೆ ಅಕ್ಕಪಕ್ಕದ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ತಿಂದು-ತುಳಿದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿವೆೆ. ಬಳಿಕ ಜನರ ಕೂಗಾಟಕ್ಕೆ ಬೆದರಿದ ಆನೆಗಳು ಹನಗೋಡು ಸಮೀಪದ ಬೀರತಮ್ಮನಹಳ್ಳಿ ಅರಣ್ಯ ಪ್ರದೇಶದಲ್ಲಿ ಸೇರಿಕೊಂಡವು. ನಂತರ ಬಿ.ಆರ್.ಕಾವಲಿನ ಸ್ಯಾನ್‌ಸಿಟಿಯ ಕುರುಚಲು ಕಾಡಿಗೆ ಸೇರಿಕೊಂಡವು.

    ವಿಷಯ ತಿಳಿದ ಹುಣಸೂರು ವನ್ಯಜೀವಿ ವಲಯದ ಆರ್‌ಎಫ್‌ಒ. ಸುಬ್ರಹ್ಮಣ್ಯ, ಡಿಆರ್‌ಎಫ್‌ಗಳಾದ ಚಂದ್ರೇಶ್, ಮನೋಹರ್ ನೇತೃತ್ವದ ಅರಣ್ಯ ಸಿಬ್ಬಂದಿ ವಸಂತ, ಕೃಷ್ಣಮಾದರ್, ಮಹೇಶ, ಎಲಿಫೆಂಟ್-ಟೈಗರ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts