More

    ನರಕಲದಿನ್ನಿ ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷ

    ರಾಯಚೂರು: ಕೃಷ್ಣಾ ನದಿಯ ತಟದಲ್ಲಿನ ಗ್ರಾಮವೊಂದರಲ್ಲಿ ಮೊಸಳೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಸೃಷ್ಠಿಸಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.

    ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನರಕಲದಿನ್ನಿ ಗ್ರಾಮದಲ್ಲಿ ಬೃಹತ್ ಆಕಾರದ ಮೊಸಳೆ ಪತ್ಯಕ್ಷವಾಗಿದ್ದು, ತಡ ರಾತ್ರಿ ಗ್ರಾಮದೊಳಗೆ ಮೊಸಳೆ ನುಗ್ಗಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಗ್ರಾಮ ಕೃಷ್ಣಾ ನದಿ ಹತ್ತಿರವಿರುವದುದರಿಂದ ಮೊಸಳೆ ಗ್ರಾಮದೊಳಗೆ ನುಗ್ಗಿದೆ.

    ಇದುವರೆಗೆ ಮೊಸಳೆಯಿಂದ ಯಾರಿಗೆ ಯಾವುದೇ ಜೀವಕ್ಕೆ ತೊಂದರೆ ನೀಡಿಲ್ಲವಾದರೂ, ಬೃಹತ್ ಆಕಾರದಲ್ಲಿರುವ ಮೊಸಳೆ ಏನಾದರೂ ಮಾಡಬಹುದು ಎನ್ನುವ ಆತಂಕವಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮೊಸಳೆಯನ್ನ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರು. ಇದಕ್ಕೆ ಪೂರಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಮೊಸಳೆಯನ್ನು ಹಿಡಿದರು. ದನದ ಕೊಟ್ಟಿಗೆ ಹೊಕ್ಕ ಮೊಸಳೆಯನ್ನು ಹಸು, ಕರುವನ್ನು ಕಟ್ಟಿಹಾಕಿಯೇ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಲೆಗೆ ಬೀಳಿಸಿ ಸುರಕ್ಷಿತ ಪ್ರದೇಶಕ್ಕೆ ರವಾನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts