More

    ಮೊಸಳೆ ಭಯದಿಂದ ನದಿಗಿಳಿಯದ ಜನ!

    ಹೊಳೆಆಲೂರ: ಮೆಣಸಗಿ ಗ್ರಾಮದ ಮಲಪ್ರಭೆ ನದಿ ದಡದಲ್ಲಿ ಕೆಲದಿನಗಳ ಹಿಂದೆ ಮೊಸಳೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನರು ಸಂಕ್ರಾಂತಿಯ ಪುಣ್ಯಸ್ನಾನ ಮಾಡಲು ಜನರು ಹಿಂದೇಟು ಹಾಕಿದರು. ನದಿಯಲ್ಲಿ ಮೊಸಳೆ ಕಾಣಿಸಿಕೊಂಡರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಭಯದಿಂದಾಗಿ ಜನರು ನದಿಗಿಳಿಯಲಿಲ್ಲ. ಬದಲಾಗಿ, ಅಸೂಟಿ ರಸ್ತೆಯ ಬೆಣ್ಣೆ ಹಳ್ಳದಲ್ಲಿ ಪುಣ್ಯ ಸ್ನಾನ ಮಾಡಿದರು.

    ಮೊಸಳೆ ಕಾಣಿಸಿಕೊಂಡ ಮರುದಿನ ಗ್ರಾಮಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿ ಅನ್ವರ ಕೋಲ್ಹಾರ ಹಾಗೂ ಪೊಲೀಸರು ಸ್ಥಳ ಪರೀಶೀಲಿಸಿ, ರೈತರೊಂದಿಗೆ ರ್ಚಚಿಸಿದ್ದರು. ಧಾರವಾಡದಿಂದ ಅಗತ್ಯ ಸಿಬ್ಬಂದಿ ಕರೆಸಿಕೊಂಡು ಒಂದರೆಡು ದಿನದಲ್ಲಿ ಮೊಸಳೆಯನ್ನು ಜೀವಂತವಾಗಿ ಹಿಡಿಲಾಗುವುದು. ಅಲ್ಲಿಯವರೆಗೆ ಆ ಕಡೆ ಯಾರೂ ತೆರಳಬಾರದು ಎಂದು ಹೇಳಿದ್ದರು. ಗ್ರಾಮದಲ್ಲಿ ಡಂಗುರ ಸಾರಿ ಸಾರ್ವಜನಿಕರು ಹೊಲಕ್ಕೆ ನೀರು ಹಾಯಿಸಲು ಅಥವಾ ಇನ್ನಾವುದೇ ಕೆಲಸಕ್ಕಾಗಿ ಮೊಸಳೆ ಕಂಡ ಪ್ರದೇಶಕ್ಕೆ ಹೋಗಬಾರದು ಎಂದು ಎಚ್ಚರಿಕೆ ನೀಡಿದ್ದರು.

    ಬೆಳೆದು ನಿಂತ ಪೈರು ಒಣಗುತ್ತಿದ್ದರೂ ರೈತ ಸಮುದಾಯ ಜೀವ ಭಯದಿಂದ ಆ ಕಡೆ ಸುಳಿದಿಲ್ಲ. ಇಷ್ಟಾದರೂ, ಅಧಿಕಾರಿಗಳು ಮೊಸಳೆ ಹಿಡಿಯಲು ಕನಿಷ್ಠ ಪ್ರಯತ್ನಕ್ಕೂ ಮುಂದಾಗದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

    ಮೊಸಳೆ ಕಾಣಿಸಿಕೊಂಡ ಮರುದಿನ ಅರಣ್ಯ ಇಲಾಖೆ ಸಿಬ್ಬಂದಿ ಬಂದು ನೋಡಿದರು. ಆ ಪ್ರದೇಶ ಬಾದಾಮಿ ತಾಲೂಕು ವ್ಯಾಪ್ತಿಗೆ ಬರುತ್ತದೆ. ನಾವೇಕೆ ರಿಸ್ಕ್ ತೆಗೆದುಕೊಳ್ಳಬೇಕು ಎಂದು ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳುತ್ತಿದ್ದರು. ಬಹುಶಃ ಇದೇ ಕಾರಣದಿಂದ ಮೊಸಳೆ ಹಿಡಿಯಲು ಪ್ರಯತ್ನ ಮಾಡಿಲ್ಲ. ಅದರೆ, ನಾವು ಮಾತ್ರ ಜೀವ ಭಯದಲ್ಲಿ ಕಾಲ ಕಳೆಯುವಂತಾಗಿದೆ.

    | ಕೇದಾರಗೌಡ ಮಣ್ಣೂರ, ರೈತ

    ಹೊಳೆಆಲೂರು ಸಮೀಪ ಮಲಪ್ರಭೆ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಆದರೆ, ಮೊಸಳೆ ಕಾಣಿಸಿಕೊಂಡ ಪ್ರದೇಶ ಬಾದಾಮಿ ತಾಲೂಕು ವ್ಯಾಪ್ತಿಗೆ ಬಗ್ಗೆ ಬರುತ್ತದೆ. ಈ ವಿಷಯವನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಶೀಘ್ರ ಮೊಸಳೆ ಹಿಡಿಯುವ ಕಾರ್ಯಾಚರಣೆ ಆರಂಭಿಸಬಹುದು.

    ಎ.ಬಿ. ಕೋಲಾರ, ಆರ್​ಎಫ್​ಒ, ರೋಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts