More

    ಹೆಚ್ಚಿದ ಮಳೆಗೆ ಕಳೆಗುಂದಿದ ಬೆಳೆ

    ಮೆಣಸಗಿ: ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಳೆಯೆಲ್ಲ ನಿರಂತರವಾಗಿ ಸುರಿಯು ತ್ತಿರುವ ಮಳೆಯಿಂದಾಗಿ ಕಳೆಗುಂದು ತ್ತಿವೆ. ಶೇಂಗಾ, ಉಳ್ಳಾಗಡ್ಡಿ, ಮೆಣಸಿನ ಕಾಯಿ ಗಿಡ, ಎಳ್ಳು, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ಕೈಗೆ ಬಂದಿದ್ದರೂ ಬಾಯಿಗೆ ಬರದಂತಾಗಿವೆ.

    ಗ್ರಾಮ ಸೇರಿ ಕರಕಿಕಟ್ಟಿ, ಗುಳಗಂದಿ, ಮೇಗೂರ, ಬೋಪಳಾ ಪುರ, ಅಸೂಟಿ, ಮಾಳವಾಡ, ಕರಮುಡಿ ಗ್ರಾಮಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದ ಬೆಳೆಗಳೆಲ್ಲ ಹಳದಿಬಣ್ಣಕ್ಕೆ ತಿರುಗುತ್ತಿವೆ. ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕಕ್ಕೆಂದು ಸಾಲಸೋಲ ಮಾಡಿ ಬೆಳೆ ಬೆಳೆದರೆ ವರುಣನ ಆರ್ಭಟಕ್ಕೆ ಹಾನಿಗೊಳಗಾಗಿವೆ. ಬಂಪರ್ ಇಳುವರಿಯ ಕನಸು ಮಳೆಯಿಂದಾಗಿ ಹುಸಿಯಾಗಿದೆ.

    ಶೇಂಗಾ, ಉಳ್ಳಾಗಡ್ಡಿ ಮೊಳಕೆಯೊಡೆಯುತ್ತಿದ್ದು, ಹಳದಿರೋಗ ಬಾಧೆ ತಗುಲಿದೆ. ಗೋವಿನಜೋಳದ ತೆನೆಗಳಲ್ಲಿಯೇ ಕಾಳು ಮೊಳಕೆಯೊಡೆ ಯುತ್ತಿವೆ. ಇದರಿಂದಾಗಿ ರೈತರಲ್ಲಿ ಆತಂಕ ಹೆಚ್ಚಾಗಿದೆ. ಮೂರು ತಿಂಗಳಿನಿಂದ ಹೋಬಳಿ ಯಾದ್ಯಂತ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಅಲ್ಲದೆ, ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಬೆಳೆದ ಬೆಳೆಗಳೆಲ್ಲ ನೀರು ಪಾಲಾಗುವ ಹಂತ ತಲುಪಿವೆ.

    ನಿರಂತರ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿದೆ. ಉಳ್ಳಾಗಡ್ಡಿ ಬೆಳೆಗೆ ಹಳದಿ ಸುಳಿ ರೋಗ ತಗುಲಿದ್ದು, ಫಸಲು ನೆಲಕಚ್ಚುತ್ತಿದೆ. ಹೊಲದಲ್ಲಿರುವ ಬೆಳೆಯನ್ನು ಮಳೆ ಹಾಗೂ ರೋಗಬಾಧೆಯಿಂದ ರಕ್ಷಿಸುವುದು ಹೇಗೆಂಬ ಆತಂಕ ರೈತರಲ್ಲಿ ಮನೆ ಮಾಡಿದೆ.

    ತೇವಾಂಶ ಹೆಚ್ಚಿ ಬೆಳೆ ಹಳದಿಯಾಗುತ್ತಿರುವುದನ್ನು ತಪ್ಪಿಸಲು ಯೂರಿಯಾ ಗೊಬ್ಬರ ಹಾಗೂ ಕ್ರಿಮಿನಾಶಕ ಸಿಂಪಡಿಸಿದರೂ ರೋಗ ಹತೋಟಿಗೆ ಬಂದಿಲ್ಲ.

    ಹೆಮ್ಮಾರಿ ಕರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಮನೆಮಂದಿಯೆಲ್ಲಾ ಖಾಲಿ ಕುಳಿತು ಕೊಳ್ಳುವಂತಾಗಿದೆ. ಇದರಿಂದಾಗಿ ಜೀವನ ನಿರ್ವಹಣೆಗೆ ಸಾಲ ಮಾಡುವಂತಾಗಿದೆ. ಜೊತೆ ಕೃಷಿ ಸಾಲ ಮಾಡಿದ್ದು, ಇದನ್ನು ತೀರಿಸುವುದು ಹೇಗೆ ಎಂಬ ಚಿಂತೆ ರೈತರನ್ನು ಕಾಣುತ್ತಿದೆ. ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಎಲ್ಲ ರೈತರಿಗೂ ಸರ್ಕಾರ ನೆರವು ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.

    ನೀರಲ್ಲಿ ನಿಂತ ಬೆಳೆ

    ಗಜೇಂದ್ರಗಡ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಭಾನುವಾರ ಧಾರಾಕಾರ ಮಳೆ ಸುರಿಯಿತು. ವರ್ಷಧಾರೆಯ ಅಬ್ಬರಕ್ಕೆ ಸಮೀಪದ ಕೊಡಗಾನೂರ, ಸೂಡಿ, ಮುಶಿಗೇರಿ, ನೆಲ್ಲೂರ, ಕುಂಟೋಜಿ ಮುಂತಾದ ಗ್ರಾಮಗಳಲ್ಲಿ ಬೆಳೆದು ನಿಂತ ಗೋವಿನ ಜೋಳ, ಕಬ್ಬು ಇತ್ಯಾದಿ ಬೆಳೆಗಳು ನೆಲಕ್ಕುರುಳಿವೆ. ಹೊಸರಾಂಪುರ, ಕೊಡಗಾನೂರ, ದ್ಯಾಮಣಸಿ, ಸೂಡಿ ಹಳ್ಳಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts