More

    ರೊನಾಲ್ಡೊ-ಮೆಸ್ಸಿ ಒಂದೇ ತಂಡದಲ್ಲಿ ಆಡ್ತಾರಾ? ಜುವೆಂಟಸ್ ಕ್ಲಬ್​ ಹೇಳೋದೇನು?

    ಟ್ಯುರಿನ್(ಇಟಲಿ): ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಸರಿಸುಮಾರು 2 ದಶಕಗಳ ಬಳಿಕ ಬಾರ್ಸಿಲೋನಾ ಕ್ಲಬ್‌ನಿಂದ ಹೊರನಡೆಯಲು ನಿರ್ಧರಿಸಿರುವ ಬೆನ್ನಲ್ಲೇ ಅವರ ಹೊಸ ತಂಡ ಯಾವುದು ಎಂಬ ಬಗ್ಗೆ ಭಾರಿ ಕುತೂಹಲ ಹರಡಿದೆ. ಇದೇ ವೇಳೆ ಮೆಸ್ಸಿ ಅವರ ಸಮಕಾಲೀನ ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೋ ರೊನಾಲ್ಡೊ ಅವರ ತಂಡ ಜುವೆಂಟಸ್‌ಗೆ ಸೇರ್ಪಡೆಗೊಳ್ಳಬಹುದೇ ಎಂಬ ಪ್ರಶ್ನೆಯೂ ಎದ್ದಿದೆ. ಫುಟ್‌ಬಾಲ್ ಅಭಿಮಾನಿಗಳಿಗೆ ಡಬಲ್ ಧಮಾಕಾ ನೀಡುವ ಈ ಸುದ್ದಿಯ ಬಗ್ಗೆ ಜುವೆಂಟಸ್ ತಂಡ ಹೇಳುವುದು ಏನು ಗೊತ್ತೇ?

    ಮೆಸ್ಸಿ-ರೊನಾಲ್ಡೊ ಒಂದೇ ತಂಡದ ಪರ ಆಡಿದರೆ ಬಹುತೇಕ ಫುಟ್‌ಬಾಲ್ ಪ್ರೇಮಿಗಳು ಕನಸು ನನಸಾದಂತೆ ಆಗುತ್ತದೆ. ಆದರೆ ಈ ಸಾಧ್ಯತೆ ತೀರಾ ಕಮ್ಮಿ ಎನ್ನುತ್ತಿದೆ ಜುವೆಂಟಸ್ ತಂಡದ ಮೂಲಗಳು. ಇನ್ನು ಜುವೆಂಟಸ್ ತಂಡದ ಆಟಗಾರ ಜುವಾನ್ ಕ್ವಾಟ್ರಾಡೊ ಅವರಂತೂ ಈ ಸಾಧ್ಯತೆ ಇಲ್ಲವೇ ಇಲ್ಲ ಎಂದಿದ್ದಾರೆ.

    ‘ನಾನಿದನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಯಾಕೆಂದರೆ ಅದು ನಿಜವಾಗಲು ಸಾಧ್ಯವೇ ಇಲ್ಲ’ ಎಂದು ಜುವಾನ್ ಕ್ವಾಡ್ರಾಡೊ ಹೇಳಿದ್ದಾರೆ. ಇನ್ನು ಯುರೋಪಿಯನ್ ಮಾಧ್ಯಮಗಳ ಪ್ರಕಾರ, ಮೆಸ್ಸಿ ಅವರಿಗೆ ದುಬಾರಿ ವೇತನ ನೀಡುವ ಸ್ಥಿತಿಯಲ್ಲಿ ಜುವೆಂಟಸ್ ತಂಡ ಇಲ್ಲ. ಅಲ್ಲದೆ, ಸದ್ಯ ಕ್ರಿಶ್ಚಿಯಾನೊ ರೊನಾಲ್ಡೊ ಅವರ ಭಾರಿ ವೇತನವನ್ನೇ ಭರಿಸಲು ತಂಡ ಪರದಾಡುತ್ತಿದೆ. ಕರೊನಾ ವೈರಸ್‌ನಿಂದಾಗಿ ಜುವೆಂಟಸ್ ಕ್ಲಬ್‌ನ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

    ಇದನ್ನೂ ಓದಿ: ಸುಶಾಂತ್‌ಗೆ ನ್ಯಾಯ ಸಿಗಲಿದೆ, ಸುರೇಶ್ ರೈನಾ ಭಾವಪೂರ್ಣ ಸಂದೇಶ

    ಒಂದು ವೇಳೆ ಮೆಸ್ಸಿ ಉಚಿತವಾಗಿ ಜುವೆಂಟಸ್ ತಂಡ ಸೇರಿಕೊಂಡರೂ, ಅದನ್ನು ರೊನಾಲ್ಡೊ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ ಎಂದೂ ಹೇಳಲಾಗುತ್ತಿದೆ. ಯಾಕೆಂದರೆ ಇಬ್ಬರು ಸ್ಟಾರ್ ಸ್ಟ್ರೈಕರ್‌ಗಳು ಒಂದೇ ತಂಡದ ಪರ ಕಣಕ್ಕಿಳಿಯುವುದು ಅಹಂಗಳ ದೊಡ್ಡ ಸಂಘರ್ಷಕ್ಕೆ ಕಾರಣವಾಗಲಿದೆ.

    ಇನ್ನು ಮೆಸ್ಸಿ ಇಟಲಿಯ ಸೆರ‌್ರಿ ಎ ಲೀಗ್‌ನಲ್ಲಿ ಜುವೆಂಟಸ್ ತಂಡದ ಬದ್ಧ ಎದುರಾಳಿಯಾಗಿರುವ ಇಂಟರ್ ಮಿಲಾನ್‌ಗೆ ಸೇರ್ಪಡೆಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಟಲಿಯಲ್ಲಿ ತೆರಿಗೆ ಕಡಿಮೆ ಇದೆ. ಅದೇ ಕಾರಣಕ್ಕಾಗಿ ರೊನಾಲ್ಡೊ ಕೂಡ ಸ್ಪೇನ್‌ನಿಂದ ಇಟಲಿಯ ಕ್ಲಬ್‌ಗೆ ವಲಸೆ ಹೋಗಿದ್ದರು. ಮೆಸ್ಸಿ ಕೂಡ ಅದೇ ಹಾದಿಯನ್ನು ಹಿಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

    ಚಾಹಲ್-ಧನಶ್ರೀ ನಡುವೆ ಪ್ರೀತಿ ಹುಟ್ಟಲು ನೆರವಾಯಿತು ಲಾಕ್‌ಡೌನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts