More

    ಕ್ರಿಮಿನಲ್ ಗ್ಯಾಂಗ್‌ಗಳ ಹೆಡೆಮುರಿ ಕಟ್ಟಿ- ಸತೀಶ ಜಾರಕಿಹೊಳಿ

    ಗೋಕಾಕ: ಸಮಾಜಕ್ಕೆ ಮಾರಕವಾದ ಟೈಗರ್‌ಗ್ಯಾಂಗ್ ಕುರಿತ ತನಿಖೆಯನ್ನು ಪೊಲೀಸರು ಶೀಘ್ರ ಪೂರ್ಣಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೂಚಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರಗೊಂದಿಗೆ ಅವರು ಮಾತನಾಡಿ, ಗ್ಯಾಂಗ್ ಹೆಡೆಮುರಿ ಕಟ್ಟಲು ಪೊಲೀಸರು ಈ ಮೊದಲೇ ಕಾರ್ಯ ಪ್ರವೃತ್ತರಾಗಬೇಕಿತ್ತು ಎಂದರು. ಹತ್ತು-ಹದಿನೈದು ವರ್ಷದ ಹಿಂದೆ ನನ್ನ ಹತ್ಯೆಗೂ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದರು. ಆದರೆ, ಈಗ ಆ ಜನ ಇಲ್ಲ. ಈಗ ಹೊಸ ಟೀಂ ಹಫ್ತಾ ವಸೂಲಿ ಮಾಡುತ್ತಿದೆ ಎಂದರು.

    ಡ್ರಗ್ಸ್‌ಗೆ ಕಡಿವಾಣ ಹಾಕಿ: ಡ್ರಗ್ಸ್ ದಂಧೆ ಎಲ್ಲ ಸರ್ಕಾರಗಳ ಕಾಲದಲ್ಲೂ ಬೆಳೆದಿದೆ. ಡ್ರಗ್ಸ್ ಕಬಂಧಬಾಹು ಇಡೀ ಸಮಾಜವನ್ನೇ ಆವರಿಸಿದೆ. ಡ್ರಗ್ಸ್ ಎಂಬುದು ಭಯೋತ್ಪಾದನೆಯಷ್ಟೇ ಅಪಾಯಕಾರಿಯಾಗಿದೆ. ಹೀಗಾಗಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು. ನಟಿ ಸಂಜನಾ ಜತೆ ಜಮೀರ್ ಅಹ್ಮದ್ ಹೆಸರು ತಳುಕು ಹಾಕಿಕೊಂಡಿದೆ. ಜಮೀರ್ ಜತೆ ಪಾರ್ಟಿಗೆ ಹೋದರೆ ಅಥವಾ ತಿರುಗಾಡಿದರೆ ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ. ಡ್ರಗ್ಸ್ ತೆಗೆದುಕೊಂಡರೆ ಅಥವಾ ಮಾರಾಟ ಮಾಡಿದರೆ ಅದು ತಪ್ಪು ಎಂದು ಸತೀಶ ಹೇಳಿದರು.

    ಕಠಿಣ ಕ್ರಮಕ್ಕೆ ಸಚಿವ ಸೂಚನೆ?: ಟೈಗರ್ ಗ್ಯಾಂಗ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಗೋಕಾಕ ನಗರದ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಲವಾರು ಜನರ ಮನೆ, ಅಂಗಡಿಗಳ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೊಲೀಸರು ಯಾರ ಒತ್ತಡಕ್ಕೂ ಮಣಿಯದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರೂ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts