More

    ಅಕ್ರಮ ಮದ್ಯ, ಕಳ್ಳಭಟ್ಟಿ ಮಾರಾಟ ಮಾಡಿದರೆ ಬೀಳುತ್ತೆ ಕ್ರಿಮಿನಲ್ ಕೇಸ್

    ಬೆಂಗಳೂರು: ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುವ ಜತೆಗೆ ನೂರಾರು ಕುಟುಂಬಗಳನ್ನು ಬೀದಿಗೆ ತಳ್ಳುವ ಅಕ್ರಮ ಮದ್ಯ ಹಾಗೂ ಕಳ್ಳಭಟ್ಟಿ ಮಾರಾಟ ಮಾಡಿದರೆ ಹುಷಾರ್! ಅಕ್ರಮ ಮದ್ಯ ಮಾರಾಟ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಅಬಕಾರಿ ಇಲಾಖೆ ದಾಳಿ ವೇಳೆಯಲ್ಲಿ ಅಪಾರ ಪ್ರಮಾಣದಲ್ಲಿ ಮದ್ಯ ಸಿಕ್ಕರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ಜಡಿಯಲಿದೆ.

    ರಾಜ್ಯಾದ್ಯಂತ ಅಕ್ರಮ ಮದ್ಯ ಮಾರಾಟ ಕೇಂದ್ರಗಳ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ. ಈಗಾಗಲೇ ಸಾವಿರಾರು ಪ್ರಕರಣಗಳನ್ನು ದಾಖಲಿಸಿ ನೂರಾರು ಜನರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅನಧಿಕೃತವಾಗಿ ಕಳ್ಳಭಟ್ಟಿ ತಯಾರಿಕೆ ಹಾಗೂ ಮದ್ಯ ಮಾರಾಟ ಕೇಂದ್ರಗಳ ಮೇಲೆ ದಾಳಿ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಪತ್ತೆಯಾದರೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಅಬಕಾರಿ ಇಲಾಖೆ ಆಯುಕ್ತ ಡಾ. ಲೋಕೇಶ್ ಎಚ್ಚರಿಕೆ ನೀಡಿದ್ದಾರೆ.

    19,406 ಪ್ರಕರಣ ದಾಖಲು: 2020ರ ಜುಲೈನಿಂದ ಡಿಸೆಂಬರ್‌ವರೆಗೆ ಅಕ್ರಮ ಮದ್ಯ ಹಾಗೂ ಕಳ್ಳಭಟ್ಟಿ ಮಾರಾಟ ಕೇಂದ್ರಗಳಲ್ಲಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನೂರಾರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಪ್ರಕರಣದಡಿ ನೂರಾರು ಮಂದಿಯನ್ನು ಬಂಧಿಸಿ ಸಾವಿರಾರು ಲೀಟರ್ ಮದ್ಯವನ್ನು ಜಪ್ತಿ ಮಾಡಿದ್ದಾರೆ. 2020ರ ಜುಲೈನಿಂದ ಡಿಸೆಂಬರ್‌ವರೆಗೆ ಅಕ್ರಮ ಮದ್ಯ ಮಾರಾಟ ಕೇಂದ್ರಗಳ ಮೇಲೆ ಒಟ್ಟು 37,950 ಬಾರಿ ದಾಳಿ ನಡೆಸಿರುವ ಇಲಾಖೆ ಅಧಿಕಾರಿಗಳು, 1,708 ಘೋರ ಪ್ರಕರಣ, 11,961 ಅನಧಿಕೃತ ಮದ್ಯ ಮಾರಾಟ ಪ್ರಕರಣ, 5,562 ಪರವಾನಗಿ ಉಲ್ಲಂಘನೆ ಪ್ರಕರಣ, 175 ನಾರ್ಕೋಟಿಕ್ ಡ್ರಗ್ಸ್ ಪ್ರಕರಣ ಸೇರಿ ಒಟ್ಟು 19,406 ಪ್ರಕರಣಗಳನ್ನು ದಾಖಲಿಸಿಕೊಂಡು 12,239 ಮಂದಿಯನ್ನು ಬಂಧಿಸಿ 928 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಅದೇ ರೀತಿ ಅನಧಿಕೃತವಾಗಿ ಕಳ್ಳಭಟ್ಟಿ ತಯಾರಿಕೆ ಹಾಗೂ ಮಾರಾಟ ಕೇಂದ್ರಗಳ ಮೇಲೆ 11,310 ಬಾರಿ ದಾಳಿ ನಡೆದಿದ್ದು, 339 ಪ್ರಕರಣಗಳು ದಾಖಲಾಗಿವೆ. ಜತೆಗೆ, 96 ಮಂದಿಯನ್ನು ಬಂಧಿಸಿ 2,432 ಲೀ. ಕಳ್ಳಭಟ್ಟಿ, 8,728 ಲೀ. ಬೆಲ್ಲದ ಕೊಳೆ ಹಾಗೂ 261 ಕೆಜಿ ಬೆಲ್ಲವನ್ನು ವಶಪಡಿಸಿಕೊಳ್ಳಲಾಗಿದೆ. ಬಾಗಲಕೋಟೆ, ಬೆಳಗಾವಿ, ಕಲಬುರಗಿ, ವಿಜಯಪುರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಬಳ್ಳಾರಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

    ಮೋಜು-ಮೃತ್ಯು.. ಶುರುವಾಯ್ತಾ ಬೇಸಿಗೆ ದುರಂತ?; ಬೆಂಗಳೂರಿನಲ್ಲಿ ಟೆಕ್ಕಿಯಾಗಿದ್ದವ ಶೆಟ್ಟಿಕೆರೆಯಲ್ಲಿ ಸಾವು

    ಬಿಗ್​ಬಾಸ್​ನಿಂದ ಹೊರಬರುತ್ತಿದ್ದಂತೆಯೇ ಧನುಶ್ರೀಗೆ ಸಿಗ್ತು ಬಿಗ್​ ಚಾನ್ಸ್​! ಮತ್ತೆ ಮೋಡಿ ಮಾಡ್ತಾರಾ ಈ ಟಿಕ್​ಟಾಕ್​ ಸ್ಟಾರ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts