More

    ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು

    ಸಿಡ್ನಿ : ಆಸ್ಟ್ರೇಲಿಯನ್ ಕ್ರಿಕೆಟಿಗ ಸ್ಟುವರ್ಟ್​ ಮ್ಯಾಕ್​​​ಗಿಲ್​ ಅವರನ್ನು ಅಪಹರಿಸಿ, ಹಿಂಸೆ ಮಾಡಿದ ಆರೋಪದ ಮೇಲೆ ಸಿಡ್ನಿ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಸಿಡ್ನಿ ನಗರದಲ್ಲಿ ಶ್ರೀಮಂತರೇ ಹೆಚ್ಚಿರುವ ಪ್ರದೇಶವಾದ ಲೋಯರ್ ನಾರ್ತ್​ ಶೋರ್​ನಲ್ಲಿ ವಾಸಿಸುವ 50 ವರ್ಷದ ಮ್ಯಾಕ್​​​ಗಿಲ್​​​ರನ್ನು ಕಳೆದ ತಿಂಗಳು ಅಪಹರಿಸಿ ನಂತರ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ.

    ಏಪ್ರಿಲ್ 14 ರಂದು ಮೂರು ಜನರು ಮ್ಯಾಕ್​​​ಗಿಲ್​​ರನ್ನು ದಾರಿಯಲ್ಲಿ ನಿಲ್ಲಿಸಿ ಕಾರಿನೊಳಗೆ ಕೂರಿಸಿಕೊಂಡು ಅಪಹರಿಸಿದ್ದರು. ಒಂದು ಗಂಟೆ ಕಾಲ ನಗರದ ಹೊರಗಣ ಪ್ರದೇಶವೊಂದಕ್ಕೆ ಗಾಡಿ ಓಡಿಸಿಕೊಂಡು ಹೋಗಿ ಅಲ್ಲಿ ಅವರನ್ನು ಥಳಿಸಿ, ಗನ್​ನಿಂದ ಬೆದರಿಸಿ, ಬಳಿಕ ಬಿಡುಗಡೆ ಮಾಡಿದ್ದರು ಎನ್ನಲಾಗಿದೆ. “ಒಂದೇ ಗಂಟೆ ಅವರನ್ನು ಬಂಧಿಸಿಟ್ಟಿದ್ದರು. ಆದರೆ ಅದರಿಂದ ಮ್ಯಾಕ್​​​ಗಿಲ್​ ಭಾರೀ ಗಾಬರಿಗೆ ಒಳಗಾಗಿದ್ದರು” ಎಂದು ಪೊಲೀಸ್ ಸೂಪರಿಂಟೆಂಡೆಂಟ್ ಆ್ಯಂಥೋನಿ ಹೋಲ್ಟನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಇದನ್ನೂ ಓದಿ: ಭಾರತದ ಆಕ್ಸಿಜನ್ ಪೂರೈಕೆಗಾಗಿ 50 ಸಾವಿರ ಡಾಲರ್ ನೀಡಿದ ಐಪಿಎಲ್ ಆಟಗಾರ

    ಒಬ್ಬ ಅಪಹರಣಕಾರನ ಪರಿಚಯ ಮ್ಯಾಕ್​​​ಗಿಲ್​​ಗೆ ಇದ್ದು, ಸುಳಿವುಗಳನ್ನು ಆಧರಿಸಿ ಸುದೀರ್ಘ ತನಿಖೆ ನಡೆಸಿದ ನಂತರ ಇಂದು ಬೆಳಗಿನ ಜಾವ 27, 29, 42 ಮತ್ತು 46 ವರ್ಷ ವಯೋಮಾನದ ನಾಲ್ಕು ಜನರನ್ನು ಈ ಅಪರಾಧದ ಸಂಬಂಧವಾಗಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳ ಮೇಲೆ ಮೊಕದ್ದಮೆ ದಾಖಲಿಸಿ ಕೋರ್ಟ್​ ಮುಂದೆ ಹಾಜರುಪಡಿಸಲಿದ್ದಾರೆ.

    ಅಪಹರಣಕಾರರು ದುಡ್ಡಿಗಾಗಿ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಆದಾಗ್ಯೂ ಅಪರಾಧವು ಆರ್ಥಿಕ ಕಾರಣದಿಂದಲೇ ನಡೆದಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಮಾಜಿ ಟೆಸ್ಟ್​ ಬೌಲರ್ ಆದ ಸ್ಟುವರ್ಟ್​ ಮ್ಯಾಕ್​​​ಗಿಲ್​, ಆಸ್ಟ್ರೇಲಿಯಾ ಪರವಾಗಿ 44 ಟೆಸ್ಟ್​​ ಪಂದ್ಯಗಳನ್ನು ಆಡಿದ್ದಾರೆ. ಪ್ರತಿಭಾನ್ವಿತ ಆಟಗಾರರಾಗಿದ್ದ ಅವರು ಶೇನ್ ವಾರ್ನ್​ ಸಮಕಾಲೀನರು. (ಏಜೆನ್ಸೀಸ್)

    ದುರಂತದ ನಡುವೆ ಒಂದು ವಿಚಿತ್ರ ಘಟನೆ : ತಾಯಿಯ ಶವ ತರಲು ಒಳಹೋದವಗೆ ಕಾದಿತ್ತು ಆಶ್ಚರ್ಯ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts