More

    ತಂದೆಯಾದ ಅಂಬಟಿ ರಾಯುಡು! ಖುಷಿಯೋ ಖುಷಿ..

    ಹೈದರಾಬಾದ್​: ಭಾರತ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ತಂಡದ ಬ್ಯಾಟ್ಸ್​ಮನ್​ ಅಂಬಟಿ ರಾಯುಡು ಪತ್ನಿ ಚೆನ್ನುಪಲ್ಲಿ ವಿದ್ಯಾ ಭಾನುವಾರ ಹೆಣ್ಣುಮಗುವಿಗೆ ಜನ್ಮನೀಡಿದ್ದಾರೆ. ತಂದೆಯಾದ ಸಂಭ್ರಮವನ್ನು ರಾಯುಡು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. 34 ವರ್ಷದ ರಾಯುಡು ಹಾಗೂ ಸಿ.ವಿದ್ಯಾ 2009ರ ಫೆಬ್ರವರಿ 14 ರಂದು ಮದುವೆಯಾಗಿದ್ದರು. ಪತ್ನಿ, ಪುತ್ರಿಯ ಫೋಟೋವನ್ನು ಟ್ವಿಟರ್​ನಲ್ಲಿ ಪ್ರಕಟಿಸಿದ ಬೆನ್ನಲ್ಲೆ ಐಪಿಎಲ್​ ಫ್ರಾಂಚೈಸಿ ಸಿಎಸ್​ಕೆ, ಸಹ ಆಟಗಾರ ಸುರೇಶ್​ ರೈನಾ ಸೇರಿದಂತೆ ಹಲವು ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಅಭಿನಂದನೆ ಸಲ್ಲಿಸಿದ್ದಾರೆ.

    ಇದನ್ನೂ ಓದಿ: VIDEO: ಲಾರ್ಡ್ಸ್​ ಅಂಗಳದಲ್ಲಿ ನಾಟ್​ವೆಸ್ಟ್​ ಸರಣಿ ವಿಕ್ರಮಕ್ಕೆ 18ರ ನೆನಪು…..

    ಹೈದರಾಬಾದ್​ನಲ್ಲಿ ನೆಲೆಸಿರುವ ರಾಯುಡು, 2019ರ ನವೆಂಬರ್​ ತಿಂಗಳಿಂದ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಐಪಿಎಲ್​ನಲ್ಲಿ ಸಿಎಸ್​ಕೆ ಪರ 3ನೇ ಆವೃತ್ತಿಯಲ್ಲಿ ಆಡಬೇಕಿತ್ತು. ಆದರೆ, ಕರೊನಾ ವೈರಸ್​ ಭೀತಿಯಿಂದಾಗಿ ಲೀಗ್​ ಅನಿರ್ದಿಷ್ಟಾವಧಿವರೆಗೆ ಮುಂದೂಡಿಕೆಯಾಗಿದೆ. 2019ರ ಏಕದಿನ ವಿಶ್ವಕಪ್​ ಟೂರ್ನಿಯ ಅಂತಿಮ 15ರೊಳಗೆ ಸ್ಥಾನ ಪಡೆಯಲು ವಿಫಲರಾಗಿದ್ದರು. ಈ ವೇಳೆ ರಾಯುಡು ಆಯ್ಕೆ ಸಮಿತಿ ಮುಖ್ಯಸ್ಥರ ಮೇಲೆ ಆಕ್ರೋಶ ಹೊರಹಾಕಿದ್ದರು. ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್​ಗೆ ರಾಯುಡು ನಿವೃತ್ತಿ ಘೋಷಿಸಿದ್ದರು. ಎರಡು ತಿಂಗಳ ಬಳಿಕ ಮನಸು ಬದಲಿಸಿಕೊಂಡ ರಾಯುಡು, ನಿಗದಿತ ಓವರ್​ಗಳ ಟೂರ್ನಿಯಲ್ಲಿ ಹೈದರಾಬಾದ್​ ತಂಡ ಪ್ರತಿನಿಧಿಸಿದರು. 2018ರಲ್ಲೇ ರಣಜಿ ಟೂರ್ನಿಗೆ ವಿದಾಯ ಹೇಳಿದ್ದರೂ ಇದೀಗ ರಣಜಿಗೂ ಲಭ್ಯವಿರುವುದಾಗಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ವೆಸ್ಟ್ ಇಂಡೀಸ್ ತಂಡಕ್ಕೆ ಐತಿಹಾಸಿಕ ಜಯ

    2004ರ 19 ವಯೋಮಿತಿ ವಿಶ್ವಕಪ್​ ಟೂನಿರ್ಯಲ್ಲಿ ಭಾರತ ತಂಡ ಮುನ್ನಡೆಸಿದ್ದ ರಾಯುಡು, ಇದುವರೆಗೂ 55 ಏಕದಿನ ಪಂದ್ಯಗಳಿಂದ 1694 ರನ್​ ಪೇರಿಸಿದ್ದಾರೆ. ಬಲಗೈ ಬ್ಯಾಟ್ಸ್​ಮನ್​ ರಾಯುಡು, 2014 ರಿಂದ 2016 ರವರೆಗೆ 6 ಟಿ20 ಪಂದ್ಯಗಳನ್ನಾಡಿದ್ದಾರೆ. 2015ರ ಏಕದಿನ ವಿಶ್ವಕಪ್​ ತಂಡದಲ್ಲಿದ್ದರೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts