More

    4 ತಿಂಗಳ ಬಳಿಕ ಕ್ರಿಕೆಟ್​ ಶುರು, ಬುಕ್ಕಿಗಳ ಮೇಲೆ ಸಿಸಿಬಿ ‘ಐ’ ಅಲರ್ಟ್​

    ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಸುಮಾರು 4 ತಿಂಗಳ ಕಾಲ ಸ್ಥಗಿತವಾಗಿದ್ದ ಕ್ರಿಕೆಟ್​ ಪಂದ್ಯಾವಳಿಗಳು ಇಂದಿನಿಂದ ಪುನರ್​ ಆರಂಭಗೊಂಡಿವೆ. ಇದರ ಜತೆಗೆ ಬೆಟ್ಟಿಂಗ್​ ಚಟುವಟಿಕೆಯೂ ಚುರುಕು ಪಡೆಯುವ ಸಾಧ್ಯತೆಯಿದ್ದು, ಬುಕ್ಕಿಗಳ ಮೇಲೆ ಸಿಸಿಬಿ ಕಣ್ಣಿಟ್ಟಿದೆ.

    4 ತಿಂಗಳ ನಂತರ ಇಂಗ್ಲೆಂಡ್​ ಮತ್ತು ವೆಸ್ಟ್​ಇಂಡೀಸ್​ ತಂಡಗಳ ನಡುವಿನ ಮೂರು ಪಂದ್ಯದ ಟೆಸ್ಟ್​ ಸರಣಿ ಆರಂಭಗೊಂಡಿದೆ. ಈ ಪಂದ್ಯಾವಳಿ ಇಂಗ್ಲೆಂಡ್​​ನ ಸೌತಾಂಪ್ಟನ್​ನ ಎಜಿಸ್​ಬೋಲ್​ ಮೈದಾನದಲ್ಲಿ ನಡೆಯುತ್ತಿದ್ದು, ಬಹಳ ದಿನಗಳ ಬಳಿಕ ಟಿವಿಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ನೇರ ಪ್ರಸಾರವಾಗಲಿದೆ. ಕ್ರಿಕೆಟ್​ ಪಂದ್ಯಗಳಿಲ್ಲದೆ ಸ್ತಬ್ಧವಾಗಿದ್ದ ಬೆಟ್ಟಿಂಗ್​ ಜಾಲದ ಚಟುವಟಿಕೆಗಳು ಗರಿಗೆದರಲಿವೆ. ಹೀಗಾಗಿ ಹಳೇ ಬುಕ್ಕಿಗಳ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ. ಇದನ್ನೂ ಓದಿರಿ ಬೆಂಗಳೂರಲ್ಲಿ 1928ರಲ್ಲೇ ಕಾಣಿಸಿಕೊಂಡಿತ್ತೊಂದು ರೋಗ… ಆಗಿನ ಕೌನ್ಸಿಲ್ ಆಡಳಿತ ಹೊರಡಿಸಿದ್ದ ಆದೇಶ ಪ್ರತಿ ಈಗ ವೈರಲ್

    ಕರೊನಾ ಆತಂಕದ ನಡುವೆಯೇ ಕ್ರಿಕೆಟ್​ ಪಂದ್ಯಾವಳಿ ಶುರುವಾಗುತ್ತಿದೆ. ಈ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡು ಬೆಟ್ಟಿಂಗ್​ ಶುರು ಮಾಡಿದರೆ ಕ್ರಮ ತೆಗೆದುಕೊಳ್ಳುವುದಾಗಿ ಬೆಂಗಳೂರು ನಗರ ಜಂಟಿ ಪೊಲೀಸ್​ ಆಯುಕ್ತ (ಅಪರಾಧ) ಸಂದೀಪ್​ ಪಾಟೀಲ್​ ಎಚ್ಚರಿಕೆ ನೀಡಿದ್ದಾರೆ.

    ಕ್ರಿಕೆಟ್​ ಪುನಾರ್​ ಆರಂಭ ಆಗುತ್ತಿರುವುದು ಕ್ರಿಕೆಟ್​ ಅಭಿಮಾನಿಗಳಲ್ಲಿ ಅತ್ಯುತ್ಸಾಹ ತಂದಿದೆ. ಮತ್ತೊಂದೆಡೆ ಬೆಟ್ಟಿಂಗ್​ ಶುರು ಮಾಡಲು ಬೆಂಗಳೂರು ಸೇರಿ ವಿಶ್ವದೆಲ್ಲೆಡೆ ಕೆಲವರು ಎದುರು ನೋಡುತ್ತಿದ್ದಾರೆ. ಕ್ರಿಕೆಟ್​ ಪಂದ್ಯಾವಳಿ ಮೇಲೆ ಸಿಸಿಬಿ ನಿಗಾವಹಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ನಡುವೆ ಕಳೆದ ಮಾರ್ಚ್​ 13ರಂದು ಸಿಡ್ನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವೇ ಕೊನೆಯದಾಗಿತ್ತು. 117 ದಿನದ ಬಳಿಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯಾವಳಿ ಆರಂಭಗೊಂಡಿದೆ.

    ವೈದ್ಯೆಗೆ ಒಂದೂವರೆ ವರ್ಷ ಜೈಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts