More

    ಗ್ಲೆನ್ ಮ್ಯಾಕ್ಸ್‌ವೆಲ್ ಐತಿಹಾಸಿಕ ದ್ವಿಶತಕ; ಒನ್‌ ಮ್ಯಾನ್ ಶೋ ಅಲ್ಲ, ಒನ್‌ ಲೆಗ್ ಶೋ…ಕ್ರಿಕೆಟ್​ ದಿಗ್ಗಜರಿಂದ ಮೆಚ್ಚುಗೆ

    ನವದೆಹಲಿ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ವಿಶ್ವಕಪ್‌ನಲ್ಲಿ ದ್ವಿಶತಕ ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದನ್ನು ಸಾರ್ವಕಾಲಿಕ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದು ಎಂದು ಹೇಳಲಾಗಿದೆ. ಈ ಕುರಿತಾಗಿ ಕ್ರಿಕೆಟ್​ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    2023 ರ 39ನೇ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಅವರು ಅಫ್ಘಾನಿಸ್ತಾನ ವಿರುದ್ಧ ಕ್ರಿಕೆಟ್ ವಿಶ್ವಕಪ್​​ನಲ್ಲಿ 201 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ. ಕಾಲು ನೋವು ಶುರುವಾದರೂ, ಓಡಲು ಕಷ್ಟ ಪಡುತ್ತಿದ್ದ ಮ್ಯಾಕ್ಸ್‌ವೆಲ್ ಬೌಂಡರಿ, ಸಿಕ್ಸರ್ ಗಳಲ್ಲಿಯೇ ರನ್ ಗಳಿಸಿದರು.

    ಕೇವಲ 128 ಎಸೆತಗಳಲ್ಲಿ 21 ಬೌಂಡರಿಗಳು ಮತ್ತು 10 ಸಿಕ್ಸರ್‌ ಸಹಿತ ಅಜೇಯ 201 ರನ್ ಗಳಿಸಿದ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾವನ್ನು ಗೆಲುವಿನ ದಡ ತಲುಪಿಸಿದರು. ಒನ್‌ ಮ್ಯಾನ್‌ ಶೋ, ಅಲ್ಲ ಅಲ್ಲ ಒನ್ ಲೆಗ್‌ ಶೋ. ನಿನ್ನೆ ಪಂದ್ಯವನ್ನು ಮಿಸ್‌ ಮಾಡಿಕೊಂಡವರು ರಿಯಲ್ ಕ್ರಿಕೆಟ್‌ನ ಮಿಸ್ ಮಾಡಿಕೊಂಡತೆ ಎಂದು ನೆಟ್ಟಿಗರು ಹೇಳುತ್ತಿದ್ದರೆ ಇತ್ತು ಕ್ರಿಕೆಟ್​ ದಿಗ್ಗಜರು ಮ್ಯಾಕ್ಸ್‌ವೆಲ್ ಆಟದ ವೈಕರಿಗೆ ಮೆಚ್ಚುಗೆಯ ಸುರಿಮಳೆ ಗೈದಿದ್ದಾರೆ.

    ಮ್ಯಾಕ್ಸ್‌ವೆಲ್ ಸಂತಸಗೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು “ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು, ” ಎಂದು ಹೇಳಿದ್ದಾರೆ.

    ಸಚಿನ್ ತೆಂಡೂಲ್ಕರ್ ಟ್ವೀಟ್​​ ಮಾಡಿ, ಅಫ್ಘಾನಿಸ್ತಾನವನ್ನು ಉತ್ತಮ ಸ್ಥಿತಿಯಲ್ಲಿಡಲು @IZadran18 ಅವರ ಅದ್ಭುತವಾದ ನಾಕ್. 2 ನೇ ಅರ್ಧದಲ್ಲಿ ಉತ್ತಮವಾಗಿ ಪ್ರಾರಂಭಿಸಿದರು ಮತ್ತು 70 ಓವರ್‌ಗಳವರೆಗೆ ಉತ್ತಮ ಕ್ರಿಕೆಟ್ ಆಡಿದರು. ಆದರೆ @Gmaxi_32 ಅವರ ಕೊನೆಯ 25 ಓವರ್‌ಗಳು ಅವರ ಅದೃಷ್ಟವನ್ನು ಬದಲಾಯಿಸಿತು. ಮ್ಯಾಕ್ಸ್‌ಗೆ ಪ್ರದರ್ಶನ! ಇದು ನನ್ನ ಜೀವನದಲ್ಲಿ ನಾನು ನೋಡಿದ ಅತ್ಯುತ್ತಮ ODI ನಾಕ್ ಆಗಿದೆ. ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.

    ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್​​ ಮಾಡಿ, ಮ್ಯಾಕ್ಸ್‌ವೆಲ್  ಬ್ಯಾಟಿಂಗ್ ನೋಡಿದೆ,  ಮ್ಯಾಕ್ಸ್‌ವೆಲ್‌ನಿಂದ ಸಾರ್ವಕಾಲಿಕ ಶ್ರೇಷ್ಠ ಏಕದಿನ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ದೀರ್ಘಾವಧಿಯವರೆಗೆ ನೆನಪಿಡುವ ಇನ್ನಿಂಗ್ಸ್ ಎಂದು ಶ್ಲಾಘಿಸಿದ್ದಾರೆ.

    ಪಾಕಿಸ್ತಾನದ ದಂತಕಥೆ ವೇಗಿ ಶೋಯೆಬ್ ಅಖ್ತರ್, ಮ್ಯಾಕ್ಸ್‌ವೆಲ್ ಅವರ ಆಟ ಮಾನಸಿಕ ಮತ್ತು ದೈಹಿಕ ಪ್ರತಿಭೆಗೆ ಸಾಕ್ಷಿಯಾಗಿರುವುದು ಗೌರವವಾಗಿದೆ. ಇದು ಸಾರ್ವಕಾಲಿಕ ಶ್ರೇಷ್ಠ ODI ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ ಎಂದು ದೈಹಿಕ ಮತ್ತು ಮಾನಸಿಕ ಪ್ರತಿಭೆ ಯನ್ನು ಶ್ಲಾಘಿಸಿದ್ದಾರೆ.

    ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಕೂಡ “ಅನ್ ಫ್ರೀಕಿನ್-ಬಿಲೀವಬಲ್! #ಮ್ಯಾಕ್ಸ್‌ವೆಲ್” ಎಂದು ಟ್ವೀಟ್ ಮಾಡಿದ್ದಾರೆ.

    ದಕ್ಷಿಣ ಆಫ್ರಿಕಾದ ಬ್ಯಾಟರ್ ರಿಲೀ ರೊಸ್ಸೌವ್ ಕೂಡ ಟ್ವೀಟ್ ಮಾಡಿದ್ದಾರೆ, “ಸಾರ್ವಕಾಲಿಕ ಅತ್ಯುತ್ತಮ ಇನಿಂಗ್ಸ್!!!! ವಾಹ್.”ಎಂದು ಟ್ವೀಟ್ ಮಾಡಿದ್ದಾರೆ.

    ಯುವತಿಯರು ಸೀರೆಯಲ್ಲೇ ಬರಬೇಕು!; ವಿವಾದ ನಂತರ ಸ್ಪಷ್ಟನೆ ನೀಡಿದ ಐಐಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts