More

    ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ಗೆ ಇಂದು 51ನೇ ಜನ್ಮದಿನದ ಸಂಭ್ರಮ; ಇಲ್ಲಿವೆ ಅವರ 51 ದಾಖಲೆಗಳ ಮೆಲುಕು…

    ಬೆಂಗಳೂರು: ಶತ ಶತಕಗಳ ಸರದಾರ ಮತ್ತು 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನದಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ದಿಗ್ಗಜ ಸಚಿನ್​ ತೆಂಡುಲ್ಕರ್​ ಬುಧವಾರ 51ನೇ ಜನ್ಮದಿನದ ಸಂಭ್ರಮ ಆಚರಿಸುತ್ತಿದ್ದಾರೆ. ಅಭಿಮಾನಿಗಳ ಪಾಲಿಗೆ “ಕ್ರಿಕೆಟ್​ ದೇವರು’ ಎನಿಸಿರುವ ಸಚಿನ್​, ಯುವ ಕ್ರಿಕೆಟಿಗರ ಪಾಲಿಗೆ ಸದಾ ಸ್ಫೂರ್ತಿಯ ಚಿಲುಮೆ ಎನಿಸಿದ್ದಾರೆ. ಕ್ರಿಕೆಟ್​ನಿಂದ ನಿವೃತ್ತಿ ಹೊಂದಿ 11 ವರ್ಷಗಳೇ ಕಳೆದರೂ ಇನ್ನೂ ಅವರ ಹೆಸರಿನಲ್ಲಿರುವ 50 ಪ್ರಮುಖ ದಾಖಲೆಗಳ ಸಂಕ್ಷಿಪ್ತ ಮೆಲುಕು ಇಲ್ಲಿದೆ.

    1. ಭಾರತರತ್ನ ಪ್ರಶಸ್ತಿ ಪುರಸ್ಕೃತ ಏಕೈಕ ಕ್ರೀಡಾಪಟು.
    2. ಖೇಲ್​ರತ್ನ, ಅರ್ಜುನ, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳನ್ನೆಲ್ಲ ಪಡೆದ ಏಕೈಕ ಕ್ರಿಕೆಟಿಗ.
    3. ಟೆಸ್ಟ್​ (15,921) ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಸಾಧನೆ.
    4. ಏಕದಿನ (18,426) ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಗಳಿಕೆ.
    5. ಅತಿ ಹೆಚ್ಚು ಟೆಸ್ಟ್​ ಪಂದ್ಯ (200) ಆಡಿದ ಆಟಗಾರ.
    6. ಅತಿ ಹೆಚ್ಚು ಏಕದಿನ ಪಂದ್ಯ (463) ಆಡಿರುವ ಆಟಗಾರ.
    7. ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು (51) ಶತಕ ಸಿಡಿಸಿರುವ ಬ್ಯಾಟರ್​.
    8. ಏಕದಿನ (49) ಕ್ರಿಕೆಟ್​ನಲ್ಲಿ 2ನೇ ಅತಿ ಹೆಚ್ಚು ಶತಕ ದಾಖಲಿಸಿರುವ ಬ್ಯಾಟ್ಸ್​ಮನ್​.
    9. ಅತಿ ಹೆಚ್ಚು ಮೈದಾನಗಳಲ್ಲಿ ಟೆಸ್ಟ್​ (59) ಮತ್ತು ಏಕದಿನ (96) ಪಂದ್ಯ ಆಡಿದ ಸಾಧನೆ.
    10. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ (34,347) ಗಳಿಸಿರುವ ಬ್ಯಾಟರ್​.

    11. ಸತತವಾಗಿ ಅತಿ ಹೆಚ್ಚು ಏಕದಿನ (185) ಮತ್ತು ಟೆಸ್ಟ್​ (85) ಪಂದ್ಯ ಆಡಿದ ಸಾಧನೆ.
    12. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬೌಂಡರಿ (4,074) ಸಿಡಿಸಿರುವ ಬ್ಯಾಟರ್​.
    13. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ (72) ಪಡೆದ ಆಟಗಾರ.
    14. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕ ಸಿಡಿಸಿರುವ ಏಕಮಾತ್ರ ಬ್ಯಾಟರ್​.
    15. ಏಕದಿನ (15) ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ.
    16. ನಾಲ್ಕು ಬಾರಿ ಒಂದೇ ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 2 ಸಾವಿರಕ್ಕಿಂತ ಹೆಚ್ಚು ರನ್​ ಗಳಿಕೆ.
    17. ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್​ಮನ್​.
    18. ಒಂದೇ ದೇಶದ ವಿರುದ್ಧ (ಆಸ್ಟ್ರೆಲಿಯಾ) ಅತಿ ಹೆಚ್ಚು 6,707 ರನ್​ ಗಳಿಕೆ.
    19. ಒಂದೇ ದೇಶದ ವಿರುದ್ಧ (ಆಸ್ಟ್ರೆಲಿಯಾ) ಅತಿ ಹೆಚ್ಚು 20 ಶತಕ ಸಾಧನೆ.
    20. ಭಾರತ ಪರ ಟೆಸ್ಟ್​ ಮತ್ತು ಏಕದಿನ (16 ವರ್ಷ) ಪಂದ್ಯ ಆಡಿದ ಅತಿ ಕಿರಿಯ ಆಟಗಾರ.

    21. ವಿದೇಶಿ ಟೆಸ್ಟ್​ ಪಂದ್ಯಗಳಲ್ಲಿ ಅತಿ ಹೆಚ್ಚು ರನ್​ (8,705) ಗಳಿಸಿದ ಬ್ಯಾಟರ್​.
    22. ಏಕದಿನದಲ್ಲಿ ಆರಂಭಿಕನಾಗಿ ಅತಿ ಹೆಚ್ಚು (15,310) ರನ್​, ಶತಕ (45), ಅರ್ಧಶತಕ (75) ಸಿಡಿಸಿದ ಬ್ಯಾಟರ್​.
    23. ಟೆಸ್ಟ್​ನಲ್ಲಿ ಒಂದೇ (4) ಕ್ರಮಾಂಕದಲ್ಲಿ ಅತಿಹೆಚ್ಚು (13,482) ರನ್​, ಶತಕ (44), ಅರ್ಧಶತಕದ (58) ಸಾಧನೆ.
    24. 20 ವರ್ಷ ವಯಸ್ಸಿಗೆ ಮುನ್ನವೇ ಟೆಸ್ಟ್​ ಕ್ರಿಕೆಟ್​ನಲ್ಲಿ 5 ಶತಕ ಸಾಧನೆ.
    25. 1990ರಿಂದ 1998ರ ನಡುವೆ ಸತತವಾಗಿ 239 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಣಕ್ಕಿಳಿದ ಸಾಧಕ.
    26. ಟೆಸ್ಟ್​ನಲ್ಲಿ ಅತಿ ಹೆಚ್ಚು 50 ಪ್ಲಸ್​ (51 ಶತಕ+ 68 ಅರ್ಧಶತಕ=119) ಗಳಿಕೆ.
    27. ಟೆಸ್ಟ್​ನಲ್ಲಿ ಔಟಾಗುವ ನಡುವೆ ಅತಿ ಹೆಚ್ಚು 497 ರನ್​ (241*, 60*, 194*, 2) ಗಳಿಸಿದ ಸಾಧನೆ.
    28. ಏಕದಿನದಲ್ಲಿ 3 ಬಾರಿ 175 ಪ್ಲಸ್​ ರನ್​ ಇನಿಂಗ್ಸ್​ ಆಟ.
    29. ರಣಜಿ ಟ್ರೋಫಿ, ಇರಾನಿ ಟ್ರೋಫಿ ಮತ್ತು ದುಲೀಪ್​ ಟ್ರೋಫಿ ದೇಶೀಯ ಕ್ರಿಕೆಟ್​ ಟೂರ್ನಿಗಳಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ ಏಕೈಕ ಆಟಗಾರ.
    30. ಭಾರತ ಪರ ಅತಿ ಹೆಚ್ಚು ಟೆಸ್ಟ್​ ಗೆಲುವು (70) ಮತ್ತು ಸೋಲು (56) ಕಂಡ ಆಟಗಾರ.

    31. ಜಿಂಬಾಬ್ವೆ ಮತ್ತು ಬಾಂಗ್ಲಾ ಹೊರತಾಗಿ ಟೆಸ್ಟ್​ ಆಡುವ ಉಳಿದ 7 ರಾಷ್ಟ್ರಗಳ ವಿರುದ್ಧ ಕನಿಷ್ಠ ಒಂದು ಸಾವಿರ ರನ್​ ಸಾಧನೆ.
    32. ಟೆಸ್ಟ್​ನಲ್ಲಿ ಪೂರ್ಣಗೊಂಡ ಇನಿಂಗ್ಸ್​ಗಳ ಪೈಕಿ 53 ಬಾರಿ ತಂಡದ ಗರಿಷ್ಠ ರನ್​ ಸ್ಕೋರರ್​.
    33. ಟೆಸ್ಟ್​ ಆಡುವ ಎಲ್ಲ 9 ದೇಶಗಳ ವಿರುದ್ಧ ಕನಿಷ್ಠ 2 ಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್​ಮನ್​.
    34. ಆರಂಭಿಕನಾಗಿ ಸೌರವ್​ ಗಂಗೂಲಿ ಜತೆ ಅತಿ ಹೆಚ್ಚು ರನ್​ (6,609), ಶತಕದ (21) ಜತೆಯಾಟ.
    35. ಏಕದಿನದಲ್ಲಿ ಶ್ರೀಲಂಕಾ (3,113) ಮತ್ತು ಆಸ್ಟ್ರೆಲಿಯಾ ವಿರುದ್ಧ (3,077) 3 ಸಾವಿರಕ್ಕಿಂತ ಹೆಚ್ಚು ರನ್​ ಗಳಿಸಿದ ಸಾಧನೆ.
    36. ಕ್ಯಾಲೆಂಡರ್​ ವರ್ಷವೊಂದರಲ್ಲಿ (1998) ಅತಿ ಹೆಚ್ಚು 9 ಏಕದಿನ ಶತಕ ಸಾಧನೆ.
    37. ಅತಿ ಹೆಚ್ಚು 6 ವಿಶ್ವಕಪ್​ಗಳಲ್ಲಿ (1992ರಿಂದ 2011) ಆಡಿದ ದಾಖಲೆಯಲ್ಲಿ ಪಾಕಿಸ್ತಾನದ ಜಾವೇದ್​ ಮಿಯಾಂದಾದ್​ ಜತೆ ಸಮಬಲ.
    38. ಏಕದಿನ ವಿಶ್ವಕಪ್​ನಲ್ಲಿ ಅತಿ ಹೆಚ್ಚು ರನ್​ (2,278), ಶತಕ (6), ಅರ್ಧಶತಕ (15) ಸಿಡಿಸಿರುವ ಬ್ಯಾಟರ್​.
    39. ಒಂದೇ ವಿಶ್ವಕಪ್​ನಲ್ಲಿ (2003) 2ನೇ ಗರಿಷ್ಠ 673 ರನ್​ ಗಳಿಸಿದ ಸಾಧನೆ.
    40. ಟೆಸ್ಟ್​ನಲ್ಲಿ 20 ಬಾರಿ 150 ಪ್ಲಸ್​ ಇನಿಂಗ್ಸ್​ ಆಡಿದ ಸಾಧಕ.

    41. ಏಕದಿನದಲ್ಲಿ 15 ಸಾವಿರಕ್ಕಿಂತ ಹೆಚ್ಚು ರನ್​ ಮತ್ತು 150 ವಿಕೆಟ್​ ಗಳಿಸಿದ ಏಕೈಕ ಕ್ರಿಕೆಟಿಗ.
    42. ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅತಿ ಕಿರಿಯ (16 ವರ್ಷ, 238 ದಿನ) ಭಾರತೀಯ.
    43. ಏಕದಿನದಲ್ಲಿ ಅತಿ ಹೆಚ್ಚು 50 ಪ್ಲಸ್​ (49 ಶತಕ+96 ಅರ್ಧಶತಕ) ಇನಿಂಗ್ಸ್​.
    44. ಟೆಸ್ಟ್​ ಕ್ರಿಕೆಟ್​ನಲ್ಲಿ 12, 13, 14, 15 ಸಾವಿರ ರನ್​ ಪೂರೈಸಿದ ಮೊದಲ ಬ್ಯಾಟ್ಸ್​ಮನ್​.
    45. ಐಸಿಸಿ ಟೆಸ್ಟ್​ ಬ್ಯಾಟಿಂಗ್​ ರ್ಯಾಂಕಿಂಗ್​ನಲ್ಲಿ 10 ವರ್ಷಗಳ ಕಾಲ ಅಗ್ರ 10ರಲ್ಲಿ ಸ್ಥಾನ ಪಡೆದ ಸಾಧನೆ.
    46. ಏಕದಿನದಲ್ಲಿ 21 ಆಟಗಾರರೊಂದಿಗೆ 99 ಬಾರಿ 100 ಪ್ಲಸ್​ ರನ್​ ಜತೆಯಾಟದಲ್ಲಿ ಭಾಗಿ.
    47. 129 ಬಾರಿ ಭಾರತ ಪರ ಗರಿಷ್ಠ ರನ್​ ಸ್ಕೋರರ್​ ಎನಿಸಿದ್ದು ಜಾಗತಿಕ ಏಕದಿನ ಕ್ರಿಕೆಟ್​ನಲ್ಲಿ ವಿಶ್ವದಾಖಲೆ.
    48. ಭಾರತ ತಂಡ ಗೆದ್ದ ಏಕದಿನ ಪಂದ್ಯದಲ್ಲಿ (234) ಅತಿಹೆಚ್ಚು 11,157 ರನ್​, 33 ಶತಕ ಬಾರಿಸಿದ ಹೆಗ್ಗಳಿಕೆ.
    49. ಟೆಸ್ಟ್​ನಲ್ಲಿ 593 (108 ಸಹ, 485 ಎದುರಾಳಿ), ಏಕದಿನದಲ್ಲಿ 866 (123 ಸಹ, 743 ಎದುರಾಳಿ) ಆಟಗಾರರೊಂದಿಗೆ ಆಟ.
    50. ವಿವಿಧ ಕ್ರಿಕೆಟ್​ ಪ್ರಕಾರಗಳಲ್ಲಿ (ಟೆಸ್ಟ್​, ಏಕದಿನ, ಟಿ20, ಐಪಿಎಲ್​, ಚಾಂಪಿಯನ್ಸ್​ ಲೀಗ್​ ಟಿ20, ವಿಶ್ವಕಪ್​, ರಣಜಿ ಟ್ರೋಫಿ) ಗೆಲುವಿನೊಂದಿಗೆ ವಿದಾಯ.
    51. ಐಸಿಸಿ ಹಾಲ್​ ಆಫ್​ ಫೇಮ್​ಗೆ ಸೇರ್ಪಡೆಗೊಂಡಿರುವ ಭಾರತದ 6ನೇ ಕ್ರಿಕೆಟಿಗ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts