More

    ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ: ಸಚಿವ ಎಚ್​. ಕೆ. ಪಾಟೀಲ

    ವಿಜಯವಾಣಿ ಸುದ್ದಿಜಾಲ ಗದಗ
    ಆರೋಗ್ಯ ಇಲಾಖೆಯ ಎಲ್ಲ ನೌಕರರನ್ನು ಒಗ್ಗೂಡಿಸಿ ಹೆಲ್ತ್​ ಕಪ್​ ಕ್ರಿಕೆಟ್​ ಪಂದ್ಯಾವಳಿಯನ್ನು ಏರ್ಪಡಿಸಿ ನೌಕರರನ್ನು ದೈಹಿಕವಾಗಿ, ಮಾಸಿಕವಾಗಿ ಆರೋಗ್ಯವಂತರನ್ನಾಗಿಸುವ ಯೋಜನೆ ಸುದುದ್ದೇಶದಿಂದ ಕೂಡಿದೆ ಎಂದು ಸಚಿವ ಎಚ್​.ಕೆ. ಪಾಟೀಲ ಹೇಳೀದರು.
    ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂದಿಂದ ಪ್ರಜಾರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ಪ್ರಜಾರಾಜ್ಯೋತ್ಸವ ಹೆಲ್ತ್​ ಕಪ್​ ಕ್ರಿಕೆಟ್​ ಲೀಗ್​ ಟೂರ್ನಮೆಂಟ್​ದ &2 ಕಾರ್ಯಕ್ರಮ ಉದ್ಘಾಟಿಸಿ, ಸಮವಸ್ತ್ರ ವಿತರಣಾ ಹಾಗೂ ಪಾರಿತೋಷಕ ಅನಾವರಣಗೊಳಿಸಿ ಮಾತನಾಡಿದ ಅವರು, ಸಮುದಾಯಕ್ಕೆ ಒಳ್ಳೆಯ ಆರೋಗ್ಯ ಸೇವೆಗಳನ್ನು ನೀಡುವುದಕ್ಕೆ ನೌಕರರು ಕ್ರೀಡೆಗಳಲ್ಲಿ ಆಸಕ್ತಿ ಹೊಂದುವಂತೆ ಕ್ರಿಕೆಟ್​ ಟೂನಿರ್ಯನ್ನು ಆಯೋಜಿಸಿದ್ದು ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಆರೋಗ್ಯ ನಿರೀಣಾಧಿಕಾರಿಗಳ ಸಂವು ಕ್ರಿಕೆಟ್​ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಮತ್ತು ಎಲ್ಲರು ಉತ್ತಮವಾಗಿ ಆಟವನ್ನು ಪ್ರದಶಿರ್ಸಿರಿ ಎಂದರು.
    ವಿಧಾನ ಪರಿಷತ್​ ಸದಸ್ಯ ಎಸ್​. ವಿ. ಸಂಕನೂರ ಸಮವಸ್ತ್ರ ಮತ್ತು ಪಾರಿತೋಷಕ ಅನಾವರಣಗೊಳಿಸಿದರು. ಸಂದ ಯಪಾಧ್ಯ ಸಿದ್ದಪ್ಪ ಲಿಂಗದಾಳ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧುಕಾರಿ ಡಾ. ಎಸ್​.ಎಸ್​ ನೀಲಗುಂದ ಅಧ್ಯಕ್ಷತೆ ವಹಿಸಿದ್ದರು.
    ಜಿಲ್ಲಾ ಸಮೀಣಾಧಿರಿ ಡಾ. ವೆಂಕಟೇಶ ರಾಠೋಡ, ಸತೀಶ್​ ಕಟ್ಟಿಮನಿ, ಸಂಗದ ಅಧ್ಯಕ್ಷ ರವಿ ಗುಂಜೀಕರ, ಡಾ. ಆರ್​. ಸಿ. ಬಸರಿಗಿಡದ. ಡಾ. ರಾಜೇಶ ಟಿ.ಎಸ್​. ಮಲ್ಲಿಕಾರ್ಜುನ ಕಲಕಂಬಿ, ಅಜಯಕುಮಾರ ಕಲಾಲ, ಕೆ. ವಿ. ಬಡಿಗೇರ, ಪ್ರಭು ಹೊನಗುಡಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts