ಬೆಂಗಳೂರು: ಕರೊನಾ ವೈರಸ್ ಭೀತಿಯಿಂದಾಗಿ ಮುಂದೂಡಿಕೆಯಾಗಿದ್ದ 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್) ದೂರ ಅರಬ್ ರಾಷ್ಟ್ರದಲ್ಲಿ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭಗೊಂಡರೂ ಸಿದ್ಧತೆ ದೃಷ್ಟಿಯಿಂದ, ಜತೆಗೆ ಮೊದಲ ಒಂದು ವಾರಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು. ಕಳೆದ 6 ತಿಂಗಳಿಂದ ಕುಟುಂಬ ಸದಸ್ಯರ ಜತೆಯಲ್ಲಿದ್ದ ಕ್ರಿಕೆಟಿಗರು ಇದೀಗ ಯುಎಇಯತ್ತ ಪ್ರಯಾಣ ಬೆಳೆಸಿದ್ದಾರೆ. ಇದೀಗ ಮುಂದಿನ ಮೂರು ತಿಂಗಳ ಕಾಲ ಯುಎಇಯಲ್ಲೇ ಆಟಗಾರರು ಉಳಿಯಲಿದ್ದಾರೆ. ಹಾಗೆಯೇ ರಾಷ್ಟ್ರೀಯ ತಂಡದ ಆಟಗಾರರು ಐಪಿಎಲ್ ಮುಗಿದ ಬೆನ್ನಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಅರಬ್ ರಾಷ್ಟ್ರಕ್ಕೆ ಗುರುವಾರ ಕೆಕೆಆರ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪ್ರಯಾಣ ಬೆಳೆಸಿದವು. ಕುಟುಂಬ ಸದಸ್ಯರೊಂದಿಗೆ ಕಾಲಕೆಳೆಯುತ್ತಿದ್ದ ಆಟಗಾರಿಗೆ ಸುದೀಘ ಅವಧಿಯ ಪ್ರಯಾಣಕ್ಕೆ ಕುಟುಂಬ ಸದಸ್ಯರ ಭಾವಪೂರ್ಣವಾಗಿ ಬೀಳ್ಕೊಟ್ಟರು.
ಇದನ್ನೂ ಓದಿ: ಐಪಿಎಲ್ ಟ್ರೋಫಿ ಗೆಲ್ಲದಿದ್ದರೂ ವಿರಾಟ್ ಕೊಹ್ಲಿಯ ಆರ್‌ಸಿಬಿ ನಾಯಕತ್ವಕ್ಕೆ ಆಪತ್ತು ಇಲ್ಲ!
ಯುಎಇ ಸರ್ಕಾರ ಮಾರ್ಗಸೂಚಿಯಿಂದಾಗಿ ಸುದೀರ್ಘ ಅವಧಿವರೆಗೆ ಪತ್ನಿಯರು ಹಾಗೂ ಗೆಳತಿಯರನ್ನು ಕರೆದೊಯ್ಯುವಂತಿಲ್ಲ. ಕೇವಲ ಕ್ರಿಕೆಟಿಗರಷ್ಟೇ ಅರಬ್ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ್ದು, ಕುಟುಂಬದವರು ಅವರಿಗೆ ಭಾವನಾಕತ್ಮಕವಾಗಿ ಬೀಳ್ಕೊಟ್ಟಿದ್ದಾರೆ. ಡೆಲ್ಲಿ ತಂಡದ ಸ್ಪಿನ್ನರ್ ಆರ್.ಅಶ್ವಿನ್ ಅವರಿಗೆ ಅವರ ಇಬ್ಬರು ಹೆಣ್ಣುಮಕ್ಕಳು ಟಿಪ್ಸ್ ನೀಡುವ ವಿಡಿಯೋ ವೈರಲ್ ಆಗಿದ್ದರೆ, ಶಿಖರ್ ಧವನ್ ತಂದೆ-ತಾಯಿ ಅಪ್ಪಿಕೊಂಡ ಬಾಯ್ ಹೇಳಿದ್ದಾರೆ. ಡೆಲ್ಲಿ ಹಾಗೂ ಪಂಜಾಬ್ ತಂಡದ ಆಟಗಾರರು ಇನ್‌ಸ್ಟಾಗ್ರಾನಲ್ಲಿ ಕುಟುಂಬ ಸದಸ್ಯರ ಜತೆಗಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಡೆಲ್ಲಿ ತಂಡದ ಭಾರತೀಯ ಆಟಗಾರರು ಮುಂಬೈಗೆ ಗುರುವಾರ ಆಗಮಿಸಿದ್ದು, ವಾರಾಂತ್ಯದಲ್ಲಿ ಯುಎಇಯತ್ತ ಪ್ರಯಾಣ ಬೆಳೆಸಲಿದ್ದಾರೆ.
ಇದನ್ನೂ ಓದಿ: ಆರ್‌ಸಿಬಿ ತಂಡಕ್ಕೆ ದುಬೈ ಹೋಟೆಲ್ನಲ್ಲಿ 155 ಕೋಣೆಗಳು ಬುಕ್, ಆರೋಗ್ಯ-ಸುರಕ್ಷತೆಗೆ ಅಗ್ರ ಆದ್ಯತೆ
ಆರ್‌ಸಿಬಿ, ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಹಾಗೂ ಎಂಎಸ್ ಧೋನಿ ಸಾರಥ್ಯದ ಸಿಎಸ್‌ಕೆ ತಂಡಗಳು ಶುಕ್ರವಾರ ದುಬೈಗೆ ಪ್ರಯಾಣ ಬೆಳೆಸಲಿವೆ. ಆರ್‌ಸಿಬಿ ತಂಡ ಬೆಂಗಳೂರಿನಿಂದ ದುಬೈಗೆ ಪ್ರಯಾಣ ಕೈಗೊಳ್ಳಲಿದೆ. ಬಳಿಕ ಅಲ್ಲಿ ಆಗಸ್ಟ್ 29ರಿಂದ 3 ವಾರಗಳ ಕಾಲ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ತಂಡದ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ಮತ್ತು ಮುಖ್ಯ ಕೋಚ್ ಸೈಮನ್ ಕಾಟಿಚ್ ಶಿಬಿರದ ಮೇಲ್ವಿಚಾರಣೆ ವಹಿಸಲಿದ್ದಾರೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕೂಡ ಶುಕ್ರವಾರ ಅಥವಾ ಶನಿವಾರದೊಳಗೆ ಯುಎಇಗೆ ಪ್ರಯಾಣಿಸುವ ನಿರೀಕ್ಷೆ ಇದೆ.
https://www.instagram.com/p/CEG2Y_6nnZp/?utm_source=ig_web_copy_link
https://www.instagram.com/p/CEEKAUdFjpT/?utm_source=ig_web_copy_link