More

    ಕುಟುಂಬಕ್ಕೆ ಅಂತ್ಯಸಂಸ್ಕಾರ ಅವಕಾಶ

    ಮಂಗಳೂರು/ಉಡುಪಿ: ದ.ಕ. ಜಿಲ್ಲೆಯೊಳಗಿನ ಕರೊನಾ ಸಾವು ಪ್ರಕರಣಗಳಲ್ಲೀಗ ಜಿಲ್ಲಾಡಳಿತ ತುಸು ಸಡಿಲಿಕೆ ತೋರುತ್ತಿದ್ದು, ಮೃತದೇಹಗಳನ್ನು ಕುಟುಂಬದವರು ಅವರ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ.
    ಆದರೆ ಶವವನ್ನು ಕುಟುಂಬಸ್ಥರು ಮುಟ್ಟುವುದಕ್ಕೆ ಅವಕಾಶವಿಲ್ಲ, ಬದಲಿಗೆ ಅವರ ಜಾಗದಲ್ಲಿ ಮಾತ್ರವೇ ಸುಡುವುದು, ದಫನ ಮಾಡುವುದಕ್ಕೆ ಅನುವು ಮಾಡಿಕೊಡಲಾಗುವುದು. ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮೃತರ ಕುಟುಂಬಸ್ಥರು ಮಾಡಬೇಕಾಗುತ್ತದೆ.
    ಕೆಲವು ಕುಟುಂಬದವರಿಗೆ ತಮ್ಮ ಜಾಗದಲ್ಲೇ ಮೃತದೇಹದ ಅಂತಿಮ ಸಂಸ್ಕಾರ ಆಗಲಿ ಎಂಬ ಭಾವನಾತ್ಮಕ ಬೇಡಿಕೆ ಇರುತ್ತದೆ, ಅಂತಹವರಿಗೆ ಸೂಕ್ತ ಜಾಗವಿದ್ದರೆ ನಾವು ಅವಕಾಶ ಮಾಡಿಕೊಡುತ್ತೇವೆ. ಆದರೆ ಹೊರ ಜಿಲ್ಲೆಯವರಿಗೆ ಮೃತದೇಹ ಹೊರಗೆ ಕೊಂಡೊಯ್ಯಲು ಅವಕಾಶವಿಲ್ಲ ಎಂದು ಮಂಗಳೂರು ಎಸಿ ಮದನ್ ಮೋಹನ್ ತಿಳಿಸಿದ್ದಾರೆ.

    ಉಡುಪಿ ಜಿಲ್ಲೆಯಲ್ಲೂ ಇದೇ ರೀತಿ ಅವಕಾಶವಿದೆ. ಕುಟುಂಬಸ್ಥರು ಬಯಸಿದರೆ, ಸ್ವಂತ ಜಾಗವಿದ್ದರೆ ಮೃತದೇಹವನ್ನು ಅವರದೇ ಜಾಗದಲ್ಲಿ ದಫನ, ದಹನಕ್ಕೆ ಅವಕಾಶವಿದೆ. ಸ್ಥಳೀಯರಿಂದ ವಿರೋಧ ಇರಬಾರದು. ಕೋವಿಡ್ ಶಿಷ್ಟಾಚಾರದ ಪ್ರಕಾರವೇ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
    ಹೈಕೋರ್ಟ್ ಕೂಡ ಪ್ರಕರಣವೊಂದರಲ್ಲಿ ಕರೊನಾದಿಂದ ಮೃತಪಟ್ಟವರ ಮೃತದೇಹವನ್ನು ಕುಟುಂಬಸ್ಥರ ಒಲವಿನಂತೆ ಅವರ ಜಾಗದಲ್ಲಿ ವಿಲೇವಾರಿ ಮಾಡುವುದಕ್ಕೆ ಪೂರಕವಾದ ಹೇಳಿಕೆ ನೀಡಿದೆ. ಹಿಂದೆ ಕೆಲವೇ ಸಾವು ಪ್ರಕರಣಗಳು ಬರುತ್ತಿದ್ದಾಗ ಸರ್ಕಾರವೇ ಖುದ್ದಾಗಿ ಅಂತ್ಯಕ್ರಿಯೆ ಮಾಡುತ್ತಿತ್ತು, ಪ್ರಸ್ತುತ ಪ್ರಕರಣ ಹೆಚ್ಚಿದ್ದು, ಜನರು ಮೃತದೇಹ ಕೊಂಡೊಯ್ದರೆ ಸರ್ಕಾರಿ ವ್ಯವಸ್ಥೆ ಮೇಲೆ ಒತ್ತಡ ಕಡಿಮೆಯಾದಂತೆಯೂ ಆಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts