More

    ಹೊಸದಾಗಿ 30 ವಿಭಾಗ, 75 ಉಪವಿಭಾಗ ರಚನೆ:ಆದೇಶ ಹೊರಡಿಸಿದ ಬಿಬಿಎಂಪಿ

    ಬೆಂಗಳೂರು:ಆಡಳಿತಾತ್ಮಕ ಕಾರ್ಯಗಳ ಹಿತದೃಷ್ಟಿಯಿಂದ ಕಂದಾಯ, ಕಾಮಗಾರಿ, ಆರೋಗ್ಯ ಸಂಬಂಧಪಟ್ಟಂತೆ ವಿಭಾಗ ಮತ್ತು ಉಪವಿಭಾಗವನ್ನು ವಿಂಗಡಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

    ಬಿಬಿಎಂಪಿಗೆ 225 ವಾರ್ಡ್ ನಿಗದಿಪಡಿಸಿ ಸರ್ಕಾರದ ಆದೇಶಿಸಿತ್ತು. ಇದನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಆಯಾ ವಲಯಗಳಲ್ಲಿ ಹೊಸದಾಗಿ ವಿಭಾಗ, ಉಪವಿಭಾಗ ವಿಂಗಡಿಸಲಾಗಿದೆ. ಹೊಸ ಉಪವಿಭಾಗ ಹಾಗೂ ವಾರ್ಡ್‌ಗಳ ಅನ್ವಯ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.

    ಹಿಂದಿನ ಬಿಜೆಪಿ ಸರ್ಕಾರವು ಬಿಬಿಎಂಪಿಗೆ 243 ವಾರ್ಡ್ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ, 243 ವಾರ್ಡ್‌ಗಳಿಂದ 225 ವಾರ್ಡ್‌ಗಳಿಗೆ ನಿಗದಿಗೊಳಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. 37,527 ಜನಸಂಖ್ಯೆಗೊಂದರಂತೆ ವಾರ್ಡ್‌ಗಳನ್ನು ರಚಿಸಲಾಗಿತ್ತು. ಬಿಜೆಪಿ ಶಾಸಕರಾಗಿರುವ ಕ್ಷೇತ್ರಗಳಲ್ಲಿ ಒಟ್ಟು 18 ವಾರ್ಡ್‌ಗಳನ್ನು ಕಡಿತಗೊಳಿಸಿ 225ಕ್ಕೆ ವಾರ್ಡ್‌ಗಳ ವಿಂಗಡಣೆ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ಶಾಸಕರ ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಬದಲಾವಣೆ ಮಾಡದೆ, ಮುಂಬರುವ ಚುನಾವಣೆಯಲ್ಲಿ ಸುಲಭವಾಗಿ ಜಯ ಸಾಧಿಸಲು ಕಾಂಗ್ರೆಸ್ ಸರ್ಕಾರ, ತಮ್ಮ ಅನುಕೂಲಕ್ಕೆ ತಕ್ಕಂತೆ ವಾರ್ಡ್‌ಗಳನ್ನು ವಿಂಗಡಿಸಿದೆ ಎಂದು ಬಿಜೆಪಿ ದೂರಿತ್ತು.

    ಬಿಜೆಪಿ ಅವಧಿಯಲ್ಲಿ ವಾರ್ಡ್‌ಗಳಿಗೆ ಛತ್ರಪತಿ ಶಿವಾಜಿ, ಚಾಣಕ್ಯ, ಕನ್ನೇಶ್ವರ ರಾಮ, ವೀರಮದಕರಿ, ರಣಧೀರ ಕಂಠೀರವ, ವೀರಸಿಂಧೂರ ಲಕ್ಷ್ಮಣ, ವಿಜಯನಗರ, ಕೃಷ್ಣದೇವರಾಯ, ಸರ್ ಎಂ. ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿ ಇತಿಹಾಸ ಹೆಸರುಗಳನ್ನು ಇಡಲಾಗಿತ್ತು. ಇದೆಲ್ಲಾವನ್ನು ತೆಗೆದು ಹಾಕಿ ಹೊಸ ಪ್ರದೇಶಕ್ಕೆ ತಕ್ಕಂತೆ ಬಡಾವಣೆಗಳಿಗೆ ಈಗಿನ ಸರ್ಕಾರ ಹೆಸರು ಇಡಲಾಗಿತ್ತು. ಕೆಲ ಕ್ಷೇತ್ರಗಳಲ್ಲಿ 2-3 ಹಳೆಯ ವಾರ್ಡ್‌ಗಳನ್ನು ತೆಗೆದು ಹಾಕಿ ಹೊಸ ವಾರ್ಡ್‌ಗಳನ್ನು ಸೇರಿಸಲಾಗಿದೆ. ಕಾಂಗ್ರೆಸ್ ಶಾಸಕರ ಕೆಲ ಕ್ಷೇತ್ರಗಳಲ್ಲಿ ಒಂದೆರೆಡು ವಾರ್ಡ್‌ಗಳನ್ನು ಕೈಬಿಟ್ಟು, ಬಿಜೆಪಿ ಪ್ರತಿನಿಧಿಸುವ ಕ್ಷೇತ್ರ ವಾರ್ಡ್‌ಗಳನ್ನು ಸೇರ್ಪಡೆ ಮಾಡಲಾಯಿತು.ಬೊಮ್ಮನಹಳ್ಳಿ, ಪದ್ಮನಾಭನಗರ, ರಾಜರಾಜೇಶ್ವರಿ ನಗರ, ಹಲಹಂಕ, ಕೆ.ಆರ್.ಪುರ, ಮಹದೇವಪುರ, ಯಶವಂತಪುರ, ಚಿಕ್ಕಪೇಟೆ ಹಾಗೂ ಸಿ.ವಿ.ರಾಮನ್‌ನಗರ ಸೇರಿ ಇತರ ಕ್ಷೇತ್ರಗಳಲ್ಲಿ ಹಳೆಯ ವಾರ್ಡ್‌ಗಳನ್ನು ತೆಗೆದು ಹೊಸ ವಾರ್ಡ್‌ಗಳನ್ನು ಸೇರಿಸಲಾಯಿತು.ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ 66,213 ಮತದಾರರು

    ವಲಯ ವಿಭಾಗ ಉಪವಿಭಾಗ
    ಬೊಮ್ಮನಹಳ್ಳಿ 3 9
    ದಾಸರಹಳ್ಳಿ 2 4
    ಪೂರ್ವ 6 13
    ಮಹದೇವಪುರ 2 9
    ರಾಜರಾಜೇಶ್ವರಿನಗರ3 7
    ದಕ್ಷಿಣ 6 14
    ಯಲಹಂಕ 2 6
    ಪಶ್ಚಿಮ 6 13
    ಒಟ್ಟು 30 75

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts