More

    ಮಕ್ಕಳಿಗೆ ಹೊಡೆದ ವಾರ್ಡ್‌ನ ಅಮಾನತು; ಕೇವಲ ಅಮಾನತು ಬೇಡ ಕರ್ತವ್ಯದಿಂದ ವಜಾಗೊಳಿಸಲು ಆಗ್ರಹ

    ರಾಣೆಬೆನ್ನೂರ: ಇಲ್ಲಿಯ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ನಗರದ ಹಳೆ ಪಿ.ಬಿ. ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿಯುತ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳ ಮೇಲೆ ವಾರ್ಡ್‌ನ ಹೊಡೆದಿರುವ ಪ್ರಕರಣಕ್ಕೆ ಸಂಬಂಧಿಸಿ ಜಿಪಂ ಸಿಇಒ ಅಕ್ಷಯ ಶ್ರೀಧರ ವಾರ್ಡ್‌ನನ್ನು ಅಮಾನತುಗೊಳಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ.
    ವಸತಿ ಶಾಲೆಯ ವಾರ್ಡ್‌ನ ಹಾಗೂ ಮುಖ್ಯಶಿಕ್ಷಕಿ ಸವಿತಾ ಬಣಕಾರ ಅಮಾನತುಗೊಂಡವರು.
    ಆದೇಶದಲ್ಲಿ ವಾರ್ಡ್‌ನ ಕರಾಳತೆ ಚಿತ್ರಣ…
    ವಾರ್ಡ್‌ನ ಹಾಗೂ ಮುಖ್ಯಶಿಕ್ಷಕಿ ಸವಿತಾ ಬಣಕಾರ ಮಕ್ಕಳ ಮೈಗೆ ಗಾಯ ಹಾಗುವ ಹಾಗೆ ಹೊಡೆದಿದ್ದಾರೆ. ಬಿಸಿ ಇರುವ ಸೊಳ್ಳೆಯ ಬತ್ತಿ ಕ್ವಾಯಿಲ್‌ಅನ್ನು ಮಕ್ಕಳ ಮೈ ಹಾಗೂ ಕೈಗೆ ಮುಟ್ಟಿಸಿ ತೊಂದರೆ ನೀಡಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಮಗು ಖೋ ಖೋ ಆಡುವಾಗ ಬಿದ್ದು ಗಾಯವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮಗುವಿಗೆ ಇವರು ಗಾಯವಾಗುವ ರೀತಿಯಲ್ಲಿ ಹೊಡೆದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
    ಅಡುಗೆ ಸಿದ್ಧಪಡಿಸುವಾಗ ತನ್ನ ಬದಲು ವಿದ್ಯಾರ್ಥಿಗಳೇ ಆಹಾರ ತಯಾರಿಸುವ ಸಾಮಗ್ರಿಗಳನ್ನು ಅಡುಗೆ ಸಹಾಯಕರಿಗೆ ಕೊಡುವಂತೆ ಮಾಡಿದ್ದಾರೆ. 6ನೇ ತರಗತಿ ಪ್ರವೇಶ ಪರೀಕ್ಷೆಯ ತರಬೇತಿ ನೀಡಲು ವಿದ್ಯಾರ್ಥಿಗಳು ಕೇಳಿಕೊಂಡಾಗ ತರಬೇತಿ ನೀಡಲು ನಿರಾಕರಿಸಿ, ವರ್ಗಾವಣೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಮಕ್ಕಳಿಗೆ ಮುಂದಿನ ಪರೀಕ್ಷೆ ಬರೆಯಲು ತರಬೇತಿಗೆ ಕಳುಹಿಸುವಲ್ಲಿ ಲೋಪ ಎಸಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಜಿಪಂ ಸಿಇಒ ಅವರಿಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿ ಆಧರಿಸಿ ಜಿಪಂ ಸಿಇಒ ಅಕ್ಷಯ ಶ್ರೀಧರ ಸವಿತಾ ಬಣಕಾರ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
    ಕರ್ತವ್ಯದಿಂದ ವಜಾಗೊಳಿಸಿ…
    ಮಕ್ಕಳ ಮೇಲೆ ಅಮಾನವೀಯವಾಗಿ ನಡೆದುಕೊಂಡಿರುವ ವಾರ್ಡ್‌ನ ಸವಿತಾ ಬಣಕಾರ ಅವರನ್ನು ಕೇವಲ ಅಮಾನತು ಮಾಡಿದರೆ ಸಾಲದು. ಕರ್ತವ್ಯದಿಂದ ವಜಾಗೊಳಿಸಬೇಕು. ಅಮಾನತು ಮಾಡುವುದರಿಂದ ಮುಂದೆ ಮತ್ತೇ ಬೇರೆ ಶಾಲೆಗೆ ತೆರಳಿದರೂ ಇದೇ ರೀತಿ ನಡೆದುಕೊಳ್ಳುವ ಸಂಭವಿರುತ್ತದೆ. ಆದ್ದರಿಂದ ಅವರನ್ನು ವಜಾಗೊಳಿಸಬೇಕು ಎಂದು ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಬಿ. ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts