More

    ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ

    ಶೃಂಗೇರಿ: ರಸ್ತೆ ಅಪಘಾತಗಳು, ಪ್ರಾಕೃತಿಕ ವಿಕೋಪ, ಅನಾರೋಗ್ಯ ಮುಂತಾದ ತುರ್ತು ಸಂದರ್ಭದಲ್ಲಿ ವ್ಯಕ್ತಿಗಳ ಜೀವ ರಕ್ಷಣೆಯಲ್ಲಿ ರಕ್ತ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ರಕ್ತದಾನದ ಬಗ್ಗೆ ಜಾಗೃತಿ ಅಗತ್ಯ ಎಂದು ಅಭಿನವ ವಿದ್ಯಾತೀರ್ಥ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಲಕ್ಷ್ಮೀನಾರಾಯಣ್ ಹೇಳಿದರು.
    ಶೃಂಗೇರಿ ಜೆಸಿಬಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್, ಯುವ ರೆಡ್‌ಕ್ರಾಸ್ ಘಟಕ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಯುವ ಸಪ್ತಾಹದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಕ್ಯಾನ್ಸರ್, ಕುಸುಮ ಕಾಯಿಲೆ, ರಕ್ತಹೀನತೆ ಮುಂತಾದ ಸಂದರ್ಭಗಳಲ್ಲಿ ರಕ್ತ ನೀಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ವಿದ್ಯಾರ್ಥಿಗಳು ರಕ್ತಹೀನತೆಗೆ ತುತ್ತಾಗುತ್ತಿದ್ದಾರೆ. ಉತ್ತಮ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮಾಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
    18-60 ವರ್ಷ ವಯೋಮಾನದ ಆರೋಗ್ಯವಂತರು ರಕ್ತದಾನ ಮಾಡಬಹುದು. ರಕ್ತದಾನದಿಂದ 3 ಜನ ಪ್ರಾಣ ಕಾಪಾಡಿದ ಪುಣ್ಯ, ಆತ್ಮತೃಪ್ತಿ ಲಭಿಸುತ್ತದೆ. ರಕ್ತದಾನ ಮಾಡಿದ ವ್ಯಕ್ತಿಗಳಲ್ಲಿ ಒಂದು ದಿನದ ಒಳಗಾಗಿ ರಕ್ತ ಮರು ಉತ್ಪತ್ತಿಯಾಗುತ್ತದೆ. ಅಲ್ಲದೆ ಹೊಸ ತೇಜಸ್ಸು, ಉತ್ಸಾಹ ಬರುತ್ತದೆ. ಆರೋಗ್ಯವಂತ 40 ಕೆ.ಜಿ ತೂಕ ಇರುವ ವ್ಯಕ್ತಿಗಳಿಗೆ 3-4 ತಿಂಗಳಿಗೊಮ್ಮೆ ರಕ್ತ ನೀಡಬಹುದು
    ಕಾಲೇಜಿನ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಸಿಬ್ಬಂದಿ ಸೇರಿ 45 ಜನ ರಕ್ತದಾನ ಮಾಡಿದರು. ಪ್ರಾಚಾರ್ಯ ಡಾ.ಎಂ.ಸ್ವಾಮಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಪ್ರಶಾಂತ್, ಸಂತೋಷ್ ಕುಮಾರ್, ರೆಡ್‌ಕ್ರಾಸ್ ಅಧಿಕಾರಿ ಸಂದೇಶ್, ನಾಗಭೂಷಣ್, ಕುಮಾರಸ್ವಾಮಿ ಉಡುಪ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts