More

    ಮಕ್ಕಳ ಮೇಲೆ ದಾಳಿ ಮಾಡಿದ ತೋಳ! ಹುಚ್ಚು ಹಿಡಿದಿರುವ ಶಂಕೆ…

    ಗದಗ: ಗದಗ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಮಕ್ಕಳ ಮೇಲೆ ತೋಳ ದಾಳಿ ಮಾಡುತ್ತಿದೆ. ಹೌದು! ಕಾಡಿನಿಂದ ನಾಡಿಗೆ ಬಂದಿರುವ ಈ ತೋಳ, ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದು ಮಕ್ಕಳ ಮೇಲೆ ನೇರವಾಗಿ ದಾಲಿ ಮಾಡುತ್ತಿದೆ. ಹೀಗಾಗಿ ಜನರಲ್ಲಿ ಆತಂಕ ಮುಂದುವರೆದಿದೆ.

    ಈ ತೋಳ ಎಷ್ಟು ಚಾಣಾಕ್ಷ ಅಂದರೆ ಗ್ರಾಮಸ್ಥರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೂ ಸಿಗದೇ ತಪ್ಪಿಸಿಕೊಂಡು ಹೋಗುತ್ತಿದೆ. ಈ ಘಟನೆ ನಡೆಯುತ್ತಿರುವುದು ಗದಗ ತಾಲೂಕಿನ ಕುರ್ತಕೋಟಿ ಹಾಗೂ ನೀಲಗುಂದ ಗ್ರಾಮದಲ್ಲಿ.

    ಇತ್ತೀಚೆಗೆ ಕುರ್ತಕೋಟಿ ಗ್ರಾಮದಲ್ಲಿ, ಎಂಟು ವರ್ಷದ ಬಾಲಕಿ, ಆಕಳು ಹಾಗೂ ನಾಯಿ ಮೇಲೆ ಈ ತೋಳ ದಾಳಿ ಮಾಡಿದೆ. ಸದ್ಯಕ್ಕೆ ಕುರ್ತಕೋಟಿಯಿಂದ ನೀಲಗುಂದ ಮಾರ್ಗವಾಗಿ ತೋಳ ಹೋಗಿದೆ ಎನ್ನಲಾಗಿದೆ.

    ಇದಾದ ಬಳಿಕ ನೀಲಗುಂದ ಗ್ರಾಮದಲ್ಲಿ ‌ನಿತಿನ್ ಎಂಬ ಬಾಲಕನ ಮೇಲೆ ಕೂಡ ದಾಳಿ ಮಾಡಿದೆ. ಇದೀಗ ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆ ದಾಖಲು ಮಾಡಲಾಗಿದೆ. ತೋಳದ ಹುಚ್ಚಾಟದಿಂದ ರೋಸಿ ಹೋದ ಗ್ರಾಮಸ್ಥರು, ಅದನ್ನು ಬೆನ್ನಟ್ಟಿಕೊಂಡು ಹೋಗಿದ್ದಾರೆ. ಆದರೆ ಗ್ರಾಮಸ್ಥರ ಕೈಗೂ ಸಿಗದೆ ತೋಳ ಎಸ್ಕೇಪ್ ಆಗಿದೆ.

    ತೋಳ ಓಡಾಡುತ್ತಿರುವುದನ್ನು ಕಂಡ ಕುರಿಗಾಹಿಗಳು ತಮ್ಮ ಮೊಬೈನ್ ನಲ್ಲಿ ಸೆರೆ ಅನೇಕ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಇದರ ಆಧಾರದ ಮೇಲೆ ಇಡೀ ರಾತ್ರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಈ ಸಂದರ್ಭ ತೋಳಕ್ಕೆ ಹುಚ್ಚು ಹಿಡಿದಿರುವ ಶಂಕೆ ಹುಟ್ಟಿದ್ದು, ಸದ್ಯ ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts