More

    ನಕಲಿ ಜಾತಿ ಪ್ರಮಾಣಪತ್ರಗಳಿಗೆ ಕಡಿವಾಣ ಹಾಕಿ

    ನಿಡಗುಂದಿ: ಹುಟ್ಟು ಆಕಸ್ಮಿಕ ಸಾವು ಖಚಿತ. ಇವುಗಳ ನಡುವಿನ ಬದುಕು ಜಾತಿ ಕಾರಣಕ್ಕೆ ಶ್ರೇಷ್ಠವಾಗದೇ ನೀತಿಯ ಕಾರಣಕ್ಕೆ ಶ್ರೇಷ್ಠವಾಗುವ ನಿಟ್ಟಿನಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಾಮಯಣ ಮಹಾಕಾವ್ಯ ರಚಿಸಿ ಜಗತ್ತಿಗೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.

    ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ವಾಲ್ಮೀಕಿ ಸಮಾಜದಿಂದ ಭಾನುವಾರ ಹಮ್ಮಿಕೊಂಡ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ತೋತ್ಸವ ಹಾಗೂ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

    ಮಾನವ ಕುಲಕ್ಕೆ ಮಾರ್ಗದರ್ಶನ ಮಾಡುವ ಮಹಾಕಾವ್ಯವನ್ನು ಮಹರ್ಷಿ ವಾಲ್ಮೀಕಿ ನೀಡಿದ್ದಾರೆ. ಅವರು ಜನಾಂಗದ ಮೂಲ ಪುರುಷ ಎನ್ನುವ ಹೆಮ್ಮೆ ನಮ್ಮದಾಗಿದೆ. ರಾಜಕೀಯ, ಸ್ವಾರ್ಥ, ಪ್ರತಿಷ್ಠೆ, ಪಕ್ಷ ಎಲ್ಲವನ್ನು ಬದಿಗೊತ್ತಿ ಸಂಘಟಿತರಾಗಿ ಜಾಗೃತಿಗಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಡೆಸುತ್ತಿರುವ ಕಾರ್ಯ ಮೆಚ್ಚುವಂತದ್ದಾಗಿದೆ. ಆ ಮೂಲಕ ಸಮಾಜ ಸಂಘಟಿತರಾಗಿರುವ ಸಂದೇಶವನ್ನು ಸರ್ಕಾರಕ್ಕೆ ತಿಳಿಸಬೇಕು ಎಂದರು.

    ದೇಶದಲ್ಲಿ ಶ್ರೇಣಿಕೃತ ಜಾತಿ ವ್ಯವಸ್ಥೆಯಿದೆ. ಈ ವ್ಯವಸ್ಥೆಯಲ್ಲಿ ಅನೇಕ ತಾರತಮ್ಯಗಳಿವೆ. ಅನೇಕ ಶತಮಾನಗಳಿಂದ ಜಾತಿಯ ಕಾರಣಕ್ಕಾಗಿ ಶೋಷಣೆಗೊಳಗಾಗಿದ್ದೇವೆ. ಊರಿಂದ ಹೊರಗಿಡಲ್ಪಟ್ಟಿದ್ದೇವು. ಡಾ. ಅಂಬೇಡ್ಕರ್ ಅವರು, 51 ಬುಡಕಟ್ಟು ಸಮುದಾಯಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಿ ನಮಗೆ ಸಂವಿಧಾನ ಬದ್ಧ ಹಕ್ಕು ನೀಡಿ ಸಾಮಾಜಿಕ ನ್ಯಾಯ ಕೊಟ್ಟರು. ಆದರೆ, ಆಳುವ ಸರ್ಕಾರಗಳು ಮತಕ್ಕಾಗಿ ನಮ್ಮನ್ನು ಬಳಸಿಕೊಂಡರು. ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಆದರೆ, ಕಡೆಗೆ ಪ್ರೀಢಂ ಪಾರ್ಕ್ ಬಳಿ ಹಾಗೂ ತಮ್ಮೆಲ್ಲರ ಹೋರಾಟದ ಮೂಲಕ ಮೀಸಲಾತಿ ಹೆಚ್ಚಳ ಮಾಡಿಕೊಳ್ಳಬೇಕಾಯಿತು ಎಂದರು.

    ಸರ್ಕಾರ ಮುಂದೆ ನಮ್ಮ ಬೇಡಿಕೆ ಮುಗಿದಿಲ್ಲ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಅವ್ಯಾಹತವಾಗಿ ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಒತ್ತಾಯಿಸುವ ನಿಟ್ಟಿನಲ್ಲಿ ವಾಲ್ಮೀಕಿ ಜಾತ್ರೆಯಂತಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಜಾತ್ರೆಯ ಮೂಲಕ ಜಾಗೃತರಾಗಿ ಸಮಾಜದ ಸಂದೇಶವನ್ನು ಸರ್ಕಾರಕ್ಕೆ ಮುಟ್ಟಿಸಬೇಕು. ವಾಲ್ಮೀಕಿ ಸಮುದಾಯದ ವಾಲ್ಮೀಕಿ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.

    ಸುರೇಶ ಮೊಕಾಶಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಬರೆದ ಮಹಾಕಾವ್ಯ ರಾಮಾಯಣದ ತತ್ವ ಸಂದೇಶಗಳು ಇಂದಿನ ಆಧುನಿಕ ಪ್ರಪಂಚಕ್ಕೆ ಪ್ರಸ್ತುತವಾಗಿವೆ. ಒಬ್ಬ ವ್ಯಕ್ತಿಯೂ ಜೀವಿತ ಅವಧಿಯಲ್ಲಿ ಸಮಾಜದಲ್ಲಿ ಆದರ್ಶವಾಗಿ ಹೇಗೆ ಬಾಳಬೇಕು ಎಂಬುದನ್ನು ತೋರಿಸುತ್ತದೆ ಎಂದರು.
    ಹುಚ್ಚಪ್ಪ ಮುತ್ಯಾ, ಮಲ್ಲಪ್ಪ ಕೌಲಗಿ, ಪ್ರಕಾಶ ಬಿರಾದರ, ಕಲ್ಲಪ್ಪ ಓಲೇಕಾರ, ರವಿ ನಾಯ್ಕೋಡಿ, ಭೀಮಸಿ ದಳವಾಯಿ, ಬಾಲಚಂದ್ರ ನಾಗರಾಳ, ಅರ್ಜುನ ವಾಲಿಕಾರ, ಯಲಗೂರದಪ್ಪ ನಾಯಕ, ಯಲ್ಲಪ್ಪ ಬೆಳ್ಳಕ್ಕಿ, ಮಹಾಂತೇಶ ಬೇವೂರ, ಪಪಂ ಸದಸ್ಯ ರಾಜು ಚಿತ್ರದುರ್ಗ, ಸುರೇಶ ಸಣ್ಣಮಣಿ, ಪಾಂಡು ನಾಯಕ, ಅವ್ವಪ್ಪ ನಾಯಕ, ಪರಮಾನಂದ ನಾಯಕ, ಸಿದ್ದು ಬಿರಾದರ, ಶ್ರೀಶೈಲ ಬೇವೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts