More

    ಆಮೆಗಳನ್ನೇ ತಿನ್ನುತ್ತವೆ ಏಡಿಗಳು! ಏಡಿ ಹುಟ್ಟಿದ್ದು ಜೇಡದಿಂದ..! ಏಡಿ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳಿವು..

    ಮುಂದುವರಿದ ಭಾಗ…

    ಆಮೆಗಳನ್ನೇ ತಿನ್ನುತ್ತವೆ ಏಡಿಗಳು! ಏಡಿ ಹುಟ್ಟಿದ್ದು ಜೇಡದಿಂದ..! ಏಡಿ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳಿವು..ಆಮೆಗಳು ಅಷ್ಟೆಲ್ಲ ಮೊಟ್ಟೆ ಇಟ್ಟು ಮರಿ ಮಾಡುತ್ತವೆ ಎಂದರೆ ಇಷ್ಟೊತ್ತಿಗೆ ಸಮುದ್ರದ ತುಂಬೆಲ್ಲ ಆಮೆಗಳಿರಬೇಕಲ್ಲ ಅಂದುಕೊಳ್ಳಬಹುದು. ಆದರೆ ಆಮೆಗಳ ಸಂಖ್ಯೆ ಕಡಿಮೆ ಮಾಡಲು ಏಡಿಗಳಿವೆ.

    ಆಮೆ ಮರಿಗಳನ್ನು ಏಡಿ ತಿನ್ನುತ್ತದೆ ಎಂದು ಊಹೆ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ. ಅಂದರೆ ಏಡಿಯ ಗಾತ್ರ ಎಷ್ಟಿರಬಹುದು ಎನ್ನುವ ಪ್ರಶ್ನೆ ಮೂಡಬಹುದು. ಆದ್ದರಿಂದ ಏಡಿಗಳ ಪ್ರಪಂಚಕ್ಕೆ ಒಮ್ಮೆ ಹೋಗಿ ಬರೋಣ.

    ಮನುಷ್ಯ ಅಂದಾಜು 60 ಲಕ್ಷ ವರ್ಷಗಳ ಹಿಂದೆ ಚಿಂಪಾಂಜಿಯಿಂದ ವಿಭಾಗವಾಗಿ ವಿಕಾಸವಾದ ಹಾಗೆ ಏಡಿಗಳು ಅಂದಾಜು 20 ಕೋಟಿ ವರ್ಷಗಳ ಹಿಂದೆ ಜೇಡಗಳ ಸಂತತಿಯಿಂದ ವಿಭಾಗವಾಗಿ ವಿಕಾಸಗೊಂಡಿವೆ. ಏಡಿಗಳನ್ನು ನೀರಿನಲ್ಲಿ, ನೆಲದ ಮೇಲೆ ಹಾಗೂ ನೀರು ಮತ್ತು ನೆಲದ ಮೇಲೆ ವಾಸಿಸುವ ಏಡಿಗಳು ಎಂದು ಮುಖ್ಯವಾಗಿ ಮೂರು ಪಂಗಡಗಳಾಗಿ ವಿಂಗಡಿಸಬಹುದು. ಈ ವಿಂಗಡಣೆಯ ಆಧಾರದ ಮೇಲೆ ಅಂದಾಜು 6,793 ಜಾತಿಯ ಏಡಿಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಏಡಿಗಳಿಗೆ ಉಸಿರಾಡಲು ಮತ್ತು ವಾಸನೆ ನೋಡಲು ನಮ್ಮ ರೀತಿಯ ಮೂಗಿಲ್ಲ. ಆದರೆ ಇವುಗಳಿಗೆ ಶ್ವಾಸಕೋಶವಿದೆ. ಆದ್ದರಿಂದ ಅವುಗಳು ಕಾಲಿನ ಬುಡದ ಪಕ್ಕದಲ್ಲಿರುವ ಕಿವಿರುಗಳ ಮುಖಾಂತರ, ಮೀನುಗಳ ರೀತಿ ನೀರಿನಲ್ಲಿರುವ ಆಮ್ಲಜನಕವನ್ನು ತೆಗೆದುಕೊಳ್ಳುತ್ತವೆ. ನೆಲದ ಮೇಲೆ ವಾಸಿಸುವ ಏಡಿಗಳು, ಕಿವಿರುನಲ್ಲಿರುವ ತೇವಾಂಶಕ್ಕೆ ಗಾಳಿ ತಗುಲಿದಾಗ, ಗಾಳಿಯಲ್ಲಿರುವ ಆಮ್ಲಜನಕವನ್ನು ತೆಗೆದುಕೊಳ್ಳುತ್ತವೆ. ಆದ್ದರಿಂದ ಏಡಿಗಳು ಬದುಕಬೇಕೆಂದರೆ, ಗಾಳಿಯಲ್ಲಿ ತೇವಾಂಶ ಇರಲೇಬೇಕು, ಒಣಪ್ರದೇಶದಲ್ಲಿ ಏಡಿಗಳು ಬದುಕುವುದು ಕಷ್ಟ. ಆದರೂ ಕೆಲವು ಜಾತಿಯ ಏಡಿಗಳು ಮರುಭೂಮಿಯಲ್ಲಿಯೂ ಜೀವಿಸುತ್ತವೆ. ಅವುಗಳ ಜೀವನಶೈಲಿಯೇ ಬೇರೆ ಇದೆ.

    ಅಂದಾಜು ಆರೇಳು ವರ್ಷ ಬದುಕುವ ಏಡಿಗಳಲ್ಲಿ ಕೆಲವು ಮರಳಿನಲ್ಲಿ ವಾಸಿಸುತ್ತವೆ, ಕೆಲವು ಮಣ್ಣುಗೂಡಿನಲ್ಲಿ, ಕಾಡಿನಲ್ಲಿ, ಮರಗಳ ಪೊಟರೆ ಸಂದಿಯಲ್ಲಿ, ಮರುಭೂಮಿಯಲ್ಲಿ, ಸಿಹಿನೀರಿನಲ್ಲಿ, ಸಮುದ್ರದ ಉಪ್ಪುನೀರಿನಲ್ಲಿ ವಾಸಿಸುತ್ತವೆ. ಅಂದರೆ ಇವು ಎಲ್ಲ ಕಡೆಯೂ ವಾಸಿಸುತ್ತವೆ. ಸಮುದ್ರದ ದಡದ ಮರಳು ಹಲವು ಜಾತಿಯ ಏಡಿಗಳ ವಾಸಸ್ಥಾನ.

    ಆಮೆಗಳ ದಿಕ್ಕು ತಪ್ಪಿಸುವ ವಿದ್ಯುತ್ ದೀಪಗಳು! ಎಲ್ಲ ಆಮೆಗಳು ಒಂದೇ ದಿನ ಮೊಟ್ಟೆ ಇಡೋದಕ್ಕೆ ಕಾರಣವಿದು…!

    ‘ಲಕ್ಷಾಂತರ ಆಮೆಗಳು ಒಂದೇ ದಿನ ಒಂದೇ ಸ್ಥಳದಲ್ಲಿ ಮೊಟ್ಟೆ ಇಡುತ್ತವೆ’ ಇದು ಹೇಗೆ ಸಾಧ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts