More

    ಸಿಪಿಎಲ್​ : ಟಿಕೆಆರ್​ ತಂಡಕ್ಕೆ ಹ್ಯಾಟ್ರಿಕ್​ ಜಯ

    ತರೌಬ: ಟ್ರಿನ್​ಬಾಗೊ ನೈಟ್​ ರೈಡರ್ಸ್​ ತಂಡ (ಟಿಕೆಆರ್​) ಹೀರೋ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ (ಸಿಪಿಎಲ್​) ಹ್ಯಾಟ್ರಿಕ್​ ಜಯ ದಾಖಲಿಸಿತು. ಭಾನುವಾರ ನಡೆದ ಪಂದ್ಯದಲ್ಲಿ ಟಿಕೆಆರ್​ ತಂಡ 19 ರನ್​ಗಳಿಂದ ಬಾರ್ಬಡೊಸ್​ ಟ್ರಿಡೆಂಟ್ಸ್​ ತಂಡವನ್ನು ಮಣಿಸಿತು. ದಿನದ ಮತ್ತೊಂದು ಪಂದ್ಯದಲ್ಲಿ ದಿನದ ಮತ್ತೊಂದು ಪಂದ್ಯದಲ್ಲಿ ಸೇಂಟ್​ ಲೂಸಿಯಾ ಜೌಕ್ಸ್​ ತಂಡ 10 ರನ್​ಗಳಿಂದ ಗಯಾನ ಅಮೆಜಾನ್​ ವಾರಿಯರ್ಸ್​ ತಂಡವನ್ನು ಮಣಿಸಿ ಲೀಗ್​ನಲ್ಲಿ 3ನೇ ಜಯ ದಾಖಲಿಸಿತು.

    ಇದನ್ನೂ ಓದಿ: ಧ್ಯಾನ್‌ಚಂದ್‌ಗೆ ಭಾರತರತ್ನ ನೀಡಿ, ಹಾಕಿ ವಲಯ ಮತ್ತೊಮ್ಮೆ ಆಗ್ರಹ

    ಸಿಪಿಎಲ್​ : ಟಿಕೆಆರ್​ ತಂಡಕ್ಕೆ ಹ್ಯಾಟ್ರಿಕ್​ ಜಯಬ್ರಿಯಾನ್​ ಲಾರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಟಿಕೆಆರ್​ ತಂಡ, ಡರೇನ್​ ಬ್ರಾವೊ (54ರನ್​, 36 ಎಸೆತ, 4 ಬೌಂಡರಿ, 4 ಸಿಕ್ಸರ್​), ಕಾಲಿನ್​ ಮುನ್ರೊ (50ರನ್​, 30 ಎಸೆತ, 7 ಬೌಂಡರಿ, 2 ಸಿಕ್ಸರ್​) ಹಾಗೂ ನಾಯಕ ಕೈರಾನ್​ ಪೊಲ್ಲಾರ್ಡ್​ (41ರನ್​, 17 ಎಸೆತ, 1 ಬೌಂಡರಿ, 4 ಸಿಕ್ಸರ್​) ತ್ರಿಮೂತಿರ್ಗಳ ಅಬ್ಬರದ ಲವಾಗಿ 3 ವಿಕೆಟ್​ಗೆ 185 ರನ್​ ಪೇರಿಸಿತು. ಪ್ರತಿಯಾಗಿ ಬಾರ್ಬಡೊಸ್​ ಟ್ರಿಡೆಂಟ್ಸ್​ ತಂಡ 6 ವಿಕೆಟ್​ಗೆ 166 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಟಿಕೆಆರ್​ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆರಿತು. ಮತ್ತೊಂದೆಡೆ, ಇದುವರೆಗೂ ಆಡಿದ 4 ಪಂದ್ಯಗಳಿಂದ 3ನೇ ಜಯ ದಾಖಲಿಸಿದ ಸೇಂಟ್​ ಲೂಸಿಯಾ ಜೌಕ್​ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

    ಟ್ರಿನ್​ಬಾಗೊ ಹಾಗೂ ನೈಟ್​ ರೈಡರ್ಸ್​: 3 ವಿಕೆಟ್​ಗೆ 185 (ಕಾಲಿನ್​ ಮನ್ರೊ 50, ಬ್ರಾವೊ 54 ಅಜೇಯ, ಕೈರಾನ್​ ಪೊಲ್ಲಾರ್ಡ್​ 41 ಅಜೇಯ, ಜೇಸನ್​ ಹೋಲ್ಡರ್​ 37ಕ್ಕೆ 1, ನರ್ಸ್​ 20ಕ್ಕೆ 1), ಬಾರ್ಬಡೊಸ್​ ಟ್ರಿಡೆಂಟ್ಸ್​: 6 ವಿಕೆಟ್​ಗೆ 166 (ಚಾರ್ಲ್ಸ್​ 52, ಶೈ ಹೋಪ್​ 36, ಹೋಲ್ಡರ್​ 34 ಅಜೇಯ, ಅಲಿ ಖಾನ್​ 32ಕ್ಕೆ 1, ಪೈರೆ 19ಕ್ಕೆ 1, ಸೀಲ್ಸ್​ 34ಕ್ಕೆ 1, ಸುನೀಲ್​ ನಾರಾಯಣ್​ 17ಕ್ಕೆ 1).

    ಯುಎಇಯಲ್ಲಿ ಐಪಿಎಲ್ ತಂಡಗಳು ಕ್ವಾರಂಟೈನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts