More

    ಪೊಲೀಸರ ಹತ್ಯೆಗೆ ಗೋ ಕಳ್ಳರ ಯತ್ನ

    ಕಾರ್ಕಳ: ಮುಡಾರು ಗ್ರಾಮದ ಹೆಪೆಜಾರು ಎಂಬಲ್ಲಿ ಕರ್ತವ್ಯ ನಿರತ ಕಾರ್ಕಳ ಗ್ರಾಮಾಂತರ ಎಸೈ ತೇಜಸ್ವಿ ಹಾಗೂ ಸಿಬ್ಬಂದಿ ಮೇಲೆ ಗೋಕಳ್ಳರು ಕಾರನ್ನು ಚಲಾಯಿಸಿ ಹತ್ಯೆಗೈಯ್ಯಲು ಯತ್ನಿಸಿದ್ದು. ಘಟನೆ ಬಳಿಕ ಪರಾರಿಯಾಗುತ್ತಿದ್ದ ಆರೋಪಿಗಳಿದ್ದ ಕಾರನ್ನು ಬೆನ್ನಟ್ಟಿದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಇತರ ಮೂವರು ತಪ್ಪಿಸಿಕೊಂಡಿದ್ದಾರೆ.
    ಮೂಡುಬಿದಿರೆ ತಾಲೂಕಿನ ಮಿಜಾರು ಹಂಡೇಲು ನಿವಾಸಿ ಸಯ್ಯದ್ ಜುಹಾದ್(31)ಸೆರೆಸಿಕ್ಕ ಆರೋಪಿ. ಈತ ಗೋ ಕಳ್ಳರಿಗೆ ಜಾನುವಾರುಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಫಿರೋಜ್, ಮೈಯದ್ದಿ, ಸುರೇಶ್ ಎಂಬುವರು ತಪ್ಪಿಸಿಕೊಂಡಿದ್ದಾರೆ.

    ಘಟನೆ ವಿವರ: ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ಕಾನ್‌ಸ್ಟೇಬಲ್ ರಂಜಿತ್ ಕುಮಾರ್ ಹಾಗೂ ಇತರ ಸಿಬ್ಬಂದಿ ಶನಿವಾರ ರಾತ್ರಿ ಬಜಗೊಳಿ ವ್ಯಾಪ್ತಿಯಲ್ಲಿ ವಾಹನಗಳ ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದರು. ಭಾನುವಾರ ಬೆಳಗಿನ ಜಾವ 3.15ರ ವೇಳೆಗೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಹೆಪೆಜಾರು ಎಂಬಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬಜಗೊಳಿ ಕಡೆಯಿಂದ ಬೈಕ್ ಹಾಗೂ ಕಾರು ಅತೀ ವೇಗದಿಂದ ಆಗಮಿಸಿದೆ. ವಾಹನಗಳನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದರೂ ಅದರಲ್ಲಿದ್ದವರು ಕಾರನ್ನು ಅತಿವೇಗದಿಂದ ಚಲಾಯಿಸಿಕೊಂಡು ಬ್ಯಾರಿಕೇಡ್‌ಗಳಿಗೆ ಗುದ್ದಿ ಅದನ್ನು ಬೀಳಿಸಿದ್ದಲ್ಲದೆ ಪೊಲೀಸರ ಮೇಲೆಯೇ ವಾಹನ ಚಲಾಯಿಸಲು ಯತ್ನಿಸಿದ್ದಾರೆ.
    ಅಪಾಯ ಅರಿತ ಪೊಲೀಸರು ಪಕ್ಕಕ್ಕೆ ಜಿಗಿದು ತಪ್ಪಿಸಿಕೊಂಡಿದ್ದಾರೆ. ಕಾರು ಮುಂದಕ್ಕೆ ಸಾಗುತ್ತಿದ್ದಂತೆ ಅದರಲ್ಲಿ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿದ್ದನ್ನು ಗಮನಿಸಿದ ಪೊಲೀಸರು, ಇಲಾಖಾ ಜೀಪಿನಲ್ಲಿ ಕಾರನ್ನು ಬೆನ್ನಟ್ಟಿದ್ದಾರೆ. ಈ ಸಂದರ್ಭ ಕಾರು ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾದರೆ, ಬೈಕ್ ಸವಾರ ಸಯ್ಯದ್ ಜುಹಾದ್ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್ ಸಹಿತ ಚರಂಡಿಗೆ ಬಿದ್ದಿದ್ದು, ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    ಮಾಳ ಚೌಕಿಯ ಸುರೇಶ್ ಎಂಬಾತ ನಲ್ಲೂರು, ಬಜಗೊಳಿ, ಮಾಳ ವ್ಯಾಪ್ತಿಯ ರಸ್ತೆಗಳಲ್ಲಿ ಮಲಗುತ್ತಿದ್ದ ಜಾನುವಾರುಗಳ ಬಗ್ಗೆ ಸಯ್ಯದ್ ಜುಹಾದ್‌ಗೆ ಮಾಹಿತಿ ನೀಡುತ್ತಿದ್ದ. ಜುಹಾದ್ ತನ್ನ ಸಂಬಂಧಿ ಫಿರೋಜ್ ಹಾಗೂ ಮೈಯದ್ದಿ ಜತೆ ಸೇರಿ ಈ ಜಾನುವಾರುಗಳನ್ನು ಕದ್ದು ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts