More

    ರಾಜ್ಯಕ್ಕೆ ಹನ್ನೆರಡೂವರೆ ಲಕ್ಷ ಕರೊನಾ ಲಸಿಕೆ ಪೂರೈಕೆಯ ಭರವಸೆ

    ಚಿಕ್ಕಬಳ್ಳಾಪುರ: ಕೇಂದ್ರದಿಂದ ಮುಂದಿನ ವಾರದಲ್ಲಿ ಹನ್ನೆರಡೂ ವರೆ ಲಕ್ಷ ಕರೊನಾ ಲಸಿಕೆ ಪೂರೈಕೆಯ ಭರವಸೆ ಸಿಕ್ಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ತಿಳಿಸಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕಿನ ಆವುಲನಾಗೇನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕರೊನಾ ಲಸಿಕೆಯ ಯಾವುದೇ ಕೊರತೆ ಇಲ್ಲ. ಈಗಾಗಲೇ ಕೇಂದ್ರ ಆರೋಗ್ಯ ಸಚಿವರೊಂದಿಗೆ ಸೋಂಕಿನ ನಿಯಂತ್ರಣ ಮತ್ತು ಲಸಿಕೆಯ ಬಗ್ಗೆ ಮಾತುಕತೆ ನಡೆಸಲಾಗಿದೆ. ಇದೇ ವೇಳೆ ಮುಂದಿನ ವಾರದಲ್ಲಿ ಹನ್ನೆರಡೂ ವರೆ ಲಕ್ಷ ಕರೊನಾ ಲಸಿಕೆ ಪೂರೈಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಬುಧವಾರ 4 ಲಕ್ಷ ಡೋಸ್ ವಿಮಾನದ ಮೂಲಕ ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಏ.1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಕರೊನಾ ಲಸಿಕೆ ಸಿಗಲಿದೆ. ಇದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗುತ್ತದೆ. ಇದಕ್ಕೆ ಆರೋಗ್ಯ ಸೇತು ಸೇರಿ ಇತರೆ ವಿಧಾನದ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.

    ರಾಜ್ಯದಲ್ಲಿ ಎರಡನೇ ಅಲೆ ಆತಂಕ ಕಾಡುತ್ತಿದೆ. ಇದಕ್ಕೆ ಈಗಾಗಲೇ ಬಿಗಿ ಕ್ರಮಗಳನ್ನು ಕೈಗೊಂಡಿದ್ದು ಸೋಂಕಿನ ನಿಯಂತ್ರಣಕ್ಕೆ ಶ್ರಮಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಕನಿಷ್ಠ ಎರಡು ತಿಂಗಳು ಯಾವುದೇ ಸಭೆ ಸಮಾರಂಭ, ಜನ ಸಂದಣಿಯಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts