More

    ಮಾಸ್ಕ್​ ಕಡ್ಡಾಯ ಮಾಡುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ: ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ನೆರೆಯ ರಾಜ್ಯವಾದ ಕೇರಳದಲ್ಲಿ ಕಾಣಿಸಿಕೊಂಡಿದ್ದ ಕರೊನಾ ಸೋಂಕುನ ಉಪತಳಿ JN.1  ತಳಿ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ ಕರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು  ಆರೋಗ್ಯ ​​ತಜ್ಞರು ಜತೆ ಸಭೆ ನಡೆಸಿದ್ದಾರೆ.

    ಆರೋಗ್ಯ ​​ತಜ್ಞರು ಜತೆಗಿನ  ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ನಾವು ಈ ವೈರಸ್​ಗೆ  ಭಯಪಡುವ ಹಾಗೂ ಆತಂಕ ಪಡುವ ಅಗತ್ಯ ಸದ್ಯಕ್ಕೆ ಇಲ್ಲ. ಆದರೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ನ್ಯೂ ಇಯರ್​ಗೆ ಹೆಚ್ಚು ಜನರು ಸೇರುತ್ತಾರೆ. ಹೆಚ್ಚು ಜನರು ಸೇರುವ ಕಡೆ ಮಾಸ್ಕ್​ ಕಡ್ಡಾಯವಾಗಿದೆ ಎಂದಿದ್ದಾರೆ.

    ಹೊಸ ವರ್ಷ ಹಾಗೂ ಕ್ರಿಸ್‌ಮಸ್‌ ಹಬ್ಬಕ್ಕೆ ಯಾವುದೇ ನಿಯಮ ಇಲ್ಲ. ಆದರೆ, ಜನಸಂದಣಿಯಲ್ಲಿ ಮಾಸ್ಕ್ ಹಾಕಿಕೊಳ್ಳಿ. ಕರೊನಾಗೆ ಯಾವುದೇ ಭಯ ಪಡುವ ಅಗತ್ಯವಿಲ್ಲ. 60 ವರ್ಷಕ್ಕಿಂತ ಮೇಲೆ ಪಟ್ಟವರು ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಆದರೆ ಮಾಸ್ಕ್​ ಧರಿಸಿ ಎಂದು ನಾವು ಸಲಹೆ ನೀಡುತ್ತೇವೆ. ಆದರೆ ಮಾಸ್ಕ್​ ಕಡ್ಡಾಯ ಎನ್ನುವ ಪರಿಸ್ಥಿತಿ ಸದ್ಯಕ್ಕೆ ಇಲ್ಲ ಎಂದು ತಿಳಿಸಿದ್ದಾರೆ.

    ಪ್ರತಿದಿನ 5 ಸಾವಿರಕ್ಕಿಂತ ಹೆಚ್ಚಿನ ಟೆಸ್ಟಿಂಗ್​ ಮಾಡಲು ಈಗಾಗಲೇ ಮಾಹಿತಿ ನೀಡಲಾಗಿದೆ. ರ‍್ಯಾಪಿಡ್ ಮತ್ತು ಆರ್ಟಿ ಆರ್​​ಟಿಪಿಸಿಆರ್​​ ಟೆಸ್ಟ್​​ ಮಾಡಲಾಗುತ್ತದೆ. ವೆಂಟಿಲೇಟರ್​, ಆಕ್ಸಿಜನ್​ಗೆ ಯಾವುದೇ ಕೊರತೆ ಆಗಬಾರದು. ಎಲ್ಲಾ ಆಸ್ಪತ್ರೆಯಲ್ಲಿಯೂ ಕರೊನಾ ಕುರಿತಾಗಿ ಸಿದ್ಧತೆ ಮಾಡಿಕೊಳ್ಳಿ. ಅಗತ್ಯ ವಿದ್ದರೆ ವ್ಯಾಕ್ಸಿನೇಷನ್​ ಪ್ರಾರಂಭಿಸಲಾಗುತ್ತದೆ. ಇಂದು ತಜ್ಞರ ಸಲಹೆಗಳನ್ನು ಪಡೆದಿದ್ದೇವೆ. ಈ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನೆ ಎಂದಿದ್ದಾರೆ.

    KMF ಹಾಲು ಒಕ್ಕೂಟದ ನಂದಿನ ಬ್ರಾಂಡ್‌ನ ಹೊಸ ಉತ್ಪನ್ನಗಳ ಲೋಕಾರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts