More

    ಕರೊನಾ ವೈರಸ್​ ಕುರಿತು 2 ವರ್ಷದ ಬಳಿಕ ವುಹಾನ್​ ಲ್ಯಾಬ್ ವಿಜ್ಞಾನಿಯಿಂದಲೇ​ ಕರಾಳ ಸತ್ಯ ಬಹಿರಂಗ!

    ನವದೆಹಲಿ: ಇಡೀ ಜಗತ್ತನ್ನು ಕಾಡಿದ ಮಹಾಮಾರಿ ಕರೊನಾ ವೈರಸ್​ ಕುರಿತು ಸ್ಫೋಟಕ ಸತ್ಯ ಇದೀಗ ಬಹಿರಂಗವಾಗಿದೆ. ಕೋವಿಡ್-19​ ಉಗಮ ಸ್ಥಾನ ಚೀನಾದ ವುಹಾನ್ ನಗರದಲ್ಲಿರುವ ವಿವಾದಾತ್ಮಕ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಅಮೆರಿಕ ಮೂಲದ ವಿಜ್ಞಾನಿ ತಮ್ಮ ಹೊಸ ಪುಸ್ತಕದಲ್ಲಿ ಶಾಕಿಂಗ್​ ಸಂಗತಿಯನ್ನು ಬಹಿರಂಗಪಡಿಸಿದ್ದು, ಕೋವಿಡ್​-19 ಮಾನವ ನಿರ್ಮಿತ ವೈರಸ್​ ಎಂದಿದ್ದಾರೆ.

    ಚೀನಾ ಸರ್ಕಾರ ನಡೆಸುವ ವುಹಾನ್​ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್​ನಿಂದ ಎರಡು ವರ್ಷಗಳ ಹಿಂದೆ ಕೋವಿಡ್​ 19 ವೈರಸ್​ ಸೋರಿಕೆಯಾಗಿದೆ ಎಂದು ಬ್ರಿಟಿಷ್ ಪತ್ರಿಕೆ ದಿ ಸನ್‌ನಲ್ಲಿ ಪ್ರಕಟವಾಗಿರುವ ಯುಎಸ್ ಮೂಲದ ಸಂಶೋಧಕ ಆ್ಯಂಡ್ರಿವ್​ ಹಫ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್​ ಪೊಸ್ಟ್​ ವರದಿ ಮಾಡಿದೆ.

    “ದಿ ಟ್ರೂಥ್​ ಎಬೌಟ್​ ವುಹಾನ್​” ಹೆಸರಿನ ಹೊಸ ಪುಸ್ತಕದಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆ್ಯಂಡ್ರಿವ್​ ಹಫ್ ಅವರು ಕರೊನಾ ಕುರಿತ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅಂದಹಾಗೆ ಮಿ. ಹಫ್​ ಅವರು ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆ ಇಕೋಹೆಲ್ತ್​ ಅಲಯನ್ಸ್​ನ ಮಾಜಿ ಉಪಾಧ್ಯಕ್ಷರು ಹೌದು. ಚೀನಾದಲ್ಲಿ ಕರೊನಾ ವೈರಸ್‌ಗಳಿಗೆ ಅಮೆರಿಕ ಸರ್ಕಾರ ನೀಡಿದ ಧನ ಸಹಾಯದಿಂದಲೇ ಸಾಂಕ್ರಾಮಿಕ ರೋಗವು ಉಂಟಾಗಿದೆ ಎಂದು ಹಫ್​ ಅರೋಪಿಸಿದ್ದಾರೆ. ಯುಕೆ ಮೂಲದ ಟ್ಯಾಬ್ಲಾಯ್ಡ್ ದಿ ಸನ್​, ಆ್ಯಂಡ್ರಿವ್​ ಹಫ್ ಅವರ ಹೊಸ ಪುಸ್ತಕದಲ್ಲಿ ಉಲ್ಲೇಖವಾದ ಪ್ರಮುಖ ಅಂಶಗಳನ್ನು ಪ್ರಕಟಿಸಿದೆ.

    ಚೀನಾದ ವುಹಾನ್​ ಲ್ಯಾಬ್​ನಲ್ಲಿ ನಡೆದ ಪ್ರಯೋಗಗಳನ್ನು ಅಸಮರ್ಪಕ ಭದ್ರತೆಯೊಂದಿಗೆ ನಡೆಸಲಾಯಿತು. ಇದರ ಪರಿಣಾಮವಾಗಿ ಲ್ಯಾಬ್​ನಿಂದ ವೈರಸ್​ ಸೋರಿಕೆಯಾಗಿದೆ ಎಂದು ಹಫ್ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಸರಿಯಾದ ಜೈವಿಕ ಸುರಕ್ಷತೆ ಮತ್ತು ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿದೇಶಿ ಪ್ರಯೋಗಾಲಯಗಳು ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಹೊಂದಿಲ್ಲ. ಇದರಿಂದಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್ ಕರೊನಾ ಸೋರಿಕೆಗೆ ಕಾರಣವಾಯಿತು ಎಂದು ಹಫ್ ತಿಳಿಸಿದ್ದಾರೆ.

    2014 ರಿಂದ 2016 ರವರೆಗೆ ಇಕೋಹೆಲ್ತ್ ಅಲಯನ್ಸ್‌ನಲ್ಲಿ ಕೆಲಸ ಮಾಡಿದ ಹಫ್, ಇತರ ಪ್ರಭೇದಗಳ ಮೇಲೆ ದಾಳಿ ಮಾಡಲು ಬಾವಲಿಯಲ್ಲಿನ ಕರೊನಾ ವೈರಸ್‌ಗಳನ್ನು ನಿರ್ಮಿಸುವ ಅತ್ಯುತ್ತಮ ವಿಧಾನಗಳನ್ನು ಅಭಿವೃದ್ಧಿಪಡಿಸಲು ಹಲವು ವರ್ಷಗಳವರೆಗೆ ವುಹಾನ್​ ಲ್ಯಾಬ್​ಗೆ ಇಕೋಹೆಲ್ತ್​ ಅಲಯನ್ಸ್​ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

    ಒಂದು ದಶಕಕ್ಕೂ ಹೆಚ್ಚು ಕಾಲ ಅಲಯನ್ಸ್​ ಸಂಸ್ಥೆಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್​) ನ ಧನಸಹಾಯದೊಂದಿಗೆ ಬಾವಲಿಗಳಲ್ಲಿನ ಹಲವಾರು ಕರೊನಾ ವೈರಸ್‌ಗಳನ್ನು ಅಧ್ಯಯನ ಮಾಡುತ್ತಿದೆ ಮತ್ತು ವುಹಾನ್ ಲ್ಯಾಬ್‌ನೊಂದಿಗೆ ಸಂಸ್ಥೆಯು ನಿಕಟ ಸಂಬಂಧವನ್ನು ಹೊಂದಿದೆ ಎಂದು ಹಫ್​ ತಿಳಿಸಿದ್ದಾರೆ. ಅಂದಹಾಗೆ ಎನ್​ಐಎಚ್​ ಬಯೋಮೆಡಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಗೆ ಜವಾಬ್ದಾರರಾಗಿರುವ ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಪ್ರಾಥಮಿಕ ಸಂಸ್ಥೆಯಾಗಿದೆ.

    ಚೀನಾದ ವುಹಾನ್​ ನಗರದಿಂದಲೇ ಕರೊನಾ ಹುಟ್ಟಿಕೊಂಡಿದೆ ಎಂದು ಕಳೆದ ಎರಡು ವರ್ಷಗಳಿಂದ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಆದರೆ, ಚೀನಾ ಸರ್ಕಾರ ಮತ್ತು ಲ್ಯಾಬ್​ ಕೆಲಸಗಾರರು ಮಾತ್ರ ಆರೋಪವನ್ನು ಅಲ್ಲಗೆಳೆಯುತ್ತಲೇ ಇದ್ದಾರೆ. ಆದರೆ, ಈಗ ವುಹಾನ್​ ಲ್ಯಾಬ್​ನಲ್ಲಿ ಕೆಲಸ ಮಾಡಿದ ಆ್ಯಂಡ್ರಿವ್​ ಹಫ್ ಅವರ ಹೊಸ ಪುಸ್ತಕ ಮತ್ತೊಂದು ಸುತ್ತಿನ ಚರ್ಚೆಗೆ ಗ್ರಾಸವಾಗಿದೆ. (ಏಜೆನ್ಸೀಸ್​)

    ಗೆಸ್ಟ್​ ಹೌಸ್​ನ ಹಾಸಿಗೆ, ಮಂಚ, ಯೋಗ ಮ್ಯಾಟ್… ಡಿಸಿ ನಿವಾಸಕ್ಕೆ ಶಿಫ್ಟ್​: ಹಿಂತಿರುಗಿಸುವಂತೆ ಪತ್ರ ಬರೆದರೂ ರೋಹಿಣಿ ಸಿಂಧೂರಿ ಮೌನ!

    ಹಾಸ್ಟೆಲ್​ನಲ್ಲಿದ್ದ ಮಗಳನ್ನು ನೋಡಲು ಮತ್ತೊಬ್ಬ ಮಗಳೊಂದಿಗೆ ಹೊರಟ್ಟಿದ್ದ ದಂಪತಿ ಮಾರ್ಗಮಧ್ಯೆ ದುರಂತ ಸಾವು

    ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ! ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಪುತ್ರನ ಬದುಕು ದುರಂತ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts