More

    ಮೈಸೂರು ದಸರಾ ಆನೆಗಳಿಗೂ ಕೋವಿಡ್‌ ಟೆಸ್ಟ್‌!

    ಮೈಸೂರು: ಸಾಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವ ಕಳೆಗಟ್ಟಲು ಕೆಲ ದಿನಗಳಷ್ಟೇ ಬಾಕಿ ಇದೆ. ಕರೊನಾ ಆತಂಕದ ನಡುವೆಯೂ ನಾಡಹಬ್ಬಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೂ ಕೋವಿಡ್​ ಪರೀಕ್ಷೆ ಮಾಡಲಾಗುತ್ತದೆ.

    ಈ ಬಾರಿ ಅಭಿಮನ್ಯು ಆನೆ ಅಂಬಾರಿ ಹೊರಲಿದ್ದಾನೆ. ಕಳೆದ ಬಾರಿಯ ಕ್ಯಾಪ್ಟನ್ ಅರ್ಜುನನಿಗೆ 60 ವರ್ಷ ದಾಟಿರುವ ಹಿನ್ನೆಲೆಯಲ್ಲಿ ದಸರಾದ ಯಾವುದೇ ಜವಾಬ್ದಾರಿಯನ್ನು ಅವನಿಗೆ ಕೊಡುತ್ತಿಲ್ಲ. ಅಲ್ಲದೆ ಈ ಬಾರಿ ಜಂಬೂ ಸವಾರಿಯಲ್ಲಿ 5 ಆನೆಗಳು ಮಾತ್ರ ಭಾಗವಹಿಸಲಿದ್ದು, ಮೊದಲ ದಿನದಿಂದ ಕೊನೇ ದಿನದವರೆಗೂ ಆನೆಗಳು ಅರಮನೆ ಆವರಣದಲ್ಲೇ ವಾಸ್ತವ್ಯ ಇರಲಿವೆ ಎಂದು ಮೈಸೂರು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಅಲೆಕ್ಸಾಂಡರ್‌ ತಿಳಿಸಿದ್ದಾರೆ. ಇನ್ನು ಮಾನವರಿಂದ ಪ್ರಾಣಿಗಳಿಗೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಆನೆಗಳು ಮತ್ತು ಮಾವುತ ಕಾವಾಡಿಗಳಿಗೆ ಕೋವಿಡ್ ಟೆಸ್ಟ್‌ ಮಾಡಲಾಗುತ್ತದೆ. ಆನೆಗಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿರಿ ಈ ಬಾರಿ ಮೈಸೂರು ದಸರಾ ಸರಳ: ಜಂಬೂ ಸವಾರಿ, ಪಂಜಿನ ಕವಾಯತು ಇರಲ್ಲ

    ಇನ್ನು ಮೈಸೂರು ದಸರಾ ಸಮಯದಲ್ಲಿ ಈ ಬಾರಿ ಅರಮನೆ ಒಳಗೆ ಆನೆಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅವಕಾಶ ಇಲ್ಲ. ಮಾವುತರು ಕೂಡ ಪದೇಪದೆ ಆನೆ ಬಳಿ ತೆರಳುವಂತಿಲ್ಲ. ದಸರಾ ಮುಗಿದ ನಂತರವೂ ಆನೆಗಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಅವುಗಳಿಗೆ ಸೋಂಕು ಇಲ್ಲ ಎಂದು ದೃಢಪಟ್ಟ ಬಳಿಕವಷ್ಟೇ ಶಿಬಿರದ ಕಾಡಿಗೆ ರವಾನಿಸಲಾಗುತ್ತದೆ ಎಂದು ಅರಣ್ಯಾಧಿಕಾರಿ ಅಲೆಕ್ಸಾಂಡರ್‌ ವಿವರಿಸಿದ್ದಾರೆ.

    ದಸರಾ ಆನೆಗಳಿಂದ ಕಾಡಿಗೆ ಸೋಂಕು ಹರಡುವಂತಾಗಬಾರದು ಎಂದು ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

    ದಸರಾ ಅಂಬಾರಿ ಆನೆ ಅಭಿಮನ್ಯು!

    ರಾಜ್ಯ ಸರ್ಕಾರಕ್ಕೆ ಬಂಪರ್​ ಆಫರ್​ ಕೊಟ್ಟ ಶಾಸಕ ಜಮೀರ್​

    ನನಗೆ ಮದುವೆ ಆಗಿಲ್ಲ ಎಂದ ಬೆನ್ನಲ್ಲೇ ನಟಿ ಸಂಜನಾರ ‘ಗಂಡ-ಹೆಂಡ್ತಿ’ ರಹಸ್ಯ ಬಯಲು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts