More

    ದಸರಾ ಅಂಬಾರಿ ಆನೆ ಅಭಿಮನ್ಯು!

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಆನೆ ಈ ಬಾರಿ ಬದಲಾಣೆಯಾಗುವ ಸಾಧ್ಯತೆ ಇದೆ. 8 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿದ್ದ ‘ಅರ್ಜುನ’ ಬದಲಿಗೆ ‘ಅಭಿಮನ್ಯು’ ಆಯ್ಕೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

    ಅರ್ಜುನನಿಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಬೇಕೋ ಅಥವಾ ವಿಶ್ರಾಂತಿ ನೀಡಬೇಕೋ ಎಂಬುದರ ಬಗ್ಗೆ ಚರ್ಚೆ ನಡೆದಿದ್ದು, ಈಗಾಗಲೇ ಕಾನೂನು ತಜ್ಞರಿಂದಲೂ ಅರಣ್ಯ ಇಲಾಖೆ ಅಭಿಪ್ರಾಯ ಪಡೆದಿದೆ. 60 ವರ್ಷ ದಾಟಿದ ಆನೆಗೆ ಹೆಚ್ಚು ಭಾರ ಹೊರಿಸದಂತೆ 8 ವರ್ಷಗಳ ಹಿಂದೆ ನ್ಯಾಯಾಲಯ ಆದೇಶ ಹೊರಡಿಸಿದೆ. ಆ ಪ್ರಕಾರ, 2012ರ ದಸರಾದಲ್ಲಿ ಬಲರಾಮನಿಂದ ಅಂಬಾರಿ ಹೊರುವ ಜವಾಬ್ದಾರಿ ಅರ್ಜುನನಿಗೆ ವರ್ಗಾವಣೆಗೊಂಡಿತ್ತು. 60 ವರ್ಷ ಮೀರಿರುವ ಅರ್ಜುನನ ವಿಷಯದಲ್ಲೂ ಇದು ಪಾಲನೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಖೆಡ್ಡಾ ವಿಧಾನದಲ್ಲಿ ಸೆರೆ ಸಿಕ್ಕ ಅರ್ಜುನ, ಈವರೆಗೂ 20 ವರ್ಷ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಹಿರಿಮೆ ಗಳಿಸಿದ್ದಾನೆ. 53 ವರ್ಷದ ಅಭಿಮನ್ಯು ಜಂಬೂ ಸವಾರಿಯಲ್ಲಿ ಕರ್ನಾಟಕ ವಾದ್ಯಗೋಷ್ಠಿ ತಂಡ ಇರುತ್ತಿದ್ದ ಆನೆಗಾಡಿಯನ್ನು ಸರಾಗವಾಗಿ ಎಳೆದೊಯ್ದು, ತನ್ನ ಭುಜಬಲದಿಂದಲೇ ಗಮನ ಸೆಳೆದಿದ್ದ. 2015ರಿಂದ ನೌಪತ್ ಆನೆಯಾಗಿ ಹೆಜ್ಜೆ ಹಾಕುತ್ತಿದ್ದಾನೆ.

    ಇದೇ ವಾರ ಸಾರ್ವತ್ರಿಕ ಬಳಕೆಗೆ ಸಿಗಲಿದೆ ರಷ್ಯಾ ಲಸಿಕೆ; ಸ್ಪುಟ್ನಿಕ್​-ವಿಗೆ ಸಿಕ್ತು ಆರೋಗ್ಯ ಇಲಾಖೆ ಸಮ್ಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts