More

    ಉಡುಪಿ ಜಿಲ್ಲಾಸ್ಪತ್ರೆ ಕೋವಿಡ್ ಲ್ಯಾಬ್ ರೆಡಿ

    ಉಡುಪಿ: ಐಸಿಎಂಆರ್ ಅನುಮತಿಯೊಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಕೋವಿಡ್ ಲ್ಯಾಬ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ಆರಂಭಗೊಂಡಿದೆ. ಇನ್ನೆರಡು ದಿನದಲ್ಲಿ ಲ್ಯಾಬ್ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದ್ದು, ಜಿಲ್ಲೆಗೆ ಕೆಎಂಸಿ ಬಳಿಕ 2ನೇ ಲ್ಯಾಬ್ ದೊರಕಿದಂತಾಗಿದೆ.

    ಈ ಪ್ರಯೋಗದಿಂದ ಜಿಲ್ಲೆಯ ಕೋವಿಡ್ ಶಂಕಿತರ ಗಂಟಲು ದ್ರವದ ಪರೀಕ್ಷೆಯನ್ನು ಇತರೆ ಜಿಲ್ಲೆಗಳಿಗೆ ಕಳುಹಿಸುವ ಅನಿವಾರ್ಯತೆ ದೂರವಾಗಲಿದ್ದು, ಮಾದರಿ ಪರೀಕ್ಷೆಗಳ ವರದಿ ಶೀಘ್ರದಲ್ಲಿ ಆರೋಗ್ಯ ಇಲಾಖೆ ಕೈ ಸೇರಲಿದೆ.

    ನಿಮ್ಹಾನ್ಸ್ ಮೂಲಕ 5 ಸ್ಯಾಂಪಲ್‌ಗಳನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಸರ್ಕಾರಿ ಕೋವಿಡ್ ಪ್ರಯೋಗಾಲಯಕ್ಕೆ ನೀಡಿದ್ದು, ಈ ಸ್ಯಾಂಪಲ್‌ಗಳನ್ನು ಪರೀಕ್ಷಿಸಿ, ಈಗಾಗಲೇ ವರದಿಯನ್ನು ನಿಮ್ಹಾನ್ಸ್‌ಗೆ ಕಳುಹಿಸಲಾಗಿದೆ. ನಿಮ್ಹಾನ್ಸ್ ವರದಿಯೊಂದಿಗೆ ತಾಳೆ ನೋಡಿದಾಗ ಸರಿಯಾಗಿದ್ದರೆ ಸರ್ಕಾರಿ ಪ್ರಯೋಗಾಲಯದಲ್ಲಿ ಕೋವಿಡ್-19 ಮಾದರಿ ಪರೀಕ್ಷೆ ಆರಂಭವಾಗಲಿದೆ. ಮುಂದಿನ 2 ದಿನದೊಳಗೆ ನಿಮ್ಹಾನ್ಸ್ ವರದಿ ಬರಲಿದೆ.
    ಲ್ಯಾಬ್‌ಗೆ 1 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಯಂತ್ರ ಮತ್ತು ಉಪಕರಣಗಳ ಸರಬರಾಜಾಗಿದ್ದು, ಕಟ್ಟಡದ ಕಾಮಗಾರಿಗೆ 45 ಲಕ್ಷ ರೂ.ವೆಚ್ಚವಾಗಿದೆ. ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸಲು 1 ಮೈಕ್ರೋ ಬಯೋಲಜಿಸ್ಟ್ ಹಾಗೂ 8 ಮಂದಿ ಲ್ಯಾಬ್ ಟೆಕ್ನೀಷಿಯನ್ ನೇಮಕ ಮಾಡಿಕೊಳ್ಳಲಾಗಿದೆ. ಮೈಕ್ರೋ ಬಯೋಲಾಜಿಸ್ಟ್ ಹಾಗೂ ಇಬ್ಬರು ಲ್ಯಾಬ್ ಟೆಕ್ನಿಷಿಯನ್‌ಗಳಿಗೆ ನಿಮ್ಹಾನ್ಸ್‌ನಲ್ಲಿ ತರಬೇತಿ ನೀಡಲಾಗಿದೆ.
    ಸಂಪೂರ್ಣ ಹವಾನಿಯಂತ್ರಿತವಾಗಿರುವ ಈ ಪರೀಕ್ಷಾ ಲ್ಯಾಬ್‌ನಲ್ಲಿ, ಒಮ್ಮೆಗೆ 96 ಸ್ಯಾಂಪಲ್‌ಗಳ ಪರೀಕ್ಷೆ ಮಾಡಬಹುದು. ಪರೀಕ್ಷಾ ವರದಿಗಾಗಿ 4 ರಿಂದ 6 ಗಂಟೆ ಅವಧಿ ತೆಗೆದುಕೊಳ್ಳಲಿದೆ. ಈ ಪ್ರಕಾರ ಲ್ಯಾಬ್‌ನಲ್ಲಿ ದಿನಕ್ಕೆ ಗರಿಷ್ಠ 300 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಪಡೆಯಬಹುದು ಎಂದು ಲ್ಯಾಬ್ ಮೈಕ್ರೋ ಬಯಾಲಜಿಸ್ಟ್ ಡಾ.ಆನೀಟ್ ಡಿಸೋಜ ತಿಳಿಸಿದರು.

    ಸ್ಯಾಂಪಲ್ ಸ್ವೀಕೃತಿಯಿಂದ ವರದಿಯವರೆಗೆ ಸಂಪೂರ್ಣ ಆನ್‌ಲೈನ್‌ನಲ್ಲಿ ಮಾಹಿತಿ ದಾಖಲಿಸುವುದೂ ಸೇರಿದಂತೆ ಐಸಿಎಂಆರ್ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸಲಾಗುವುದು. ಒಂದು ಸ್ಯಾಂಪಲ್ ಪರೀಕ್ಷೆಗೆ ಟೆಸ್ಟ್ ಕಿಟ್ ಮತ್ತು ಅಗತ್ಯ ಸುರಕ್ಷತಾ ವಸ್ತುಗಳ ಬಳಕೆ ವೆಚ್ಚ ಸೇರಿದಂತೆ 1600 ರೂ.ವೆಚ್ಚವಾಗಲಿದೆ. ವೆಚ್ಚವನ್ನು ಜಿಲ್ಲಾ ಪ್ರಾಕೃತಿಕ ವಿಕೋಪ ನಿಧಿಯಿಂದ ಭರಿಸಲಾಗುವುದು.
    ಡಾ. ಮಧುಸೂಧನ್ ನಾಯಕ್ ಜಿಲ್ಲಾ ಆಸ್ಪತ್ರೆಯ ಸರ್ಜನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts