More

    ಕೋವಿಡ್ ಯುದ್ಧ ಗೆಲ್ಲಲು ಸಮರೋಪಾದಿ ಕೆಲಸ

    ಹಾವೇರಿ: ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಹಾಗೂ ಆಕ್ಸಿಜನ್ ಬೆಡ್​ಗಳ ಹೆಚ್ಚಳ ಹಾಗೂ ಜಿಲ್ಲೆಯ ಖಾಸಗಿ ವೈದ್ಯಕೀಯ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಕೋವಿಡ್ ವಿರುದ್ಧದ ಯುದ್ಧ ಗೆಲ್ಲಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
    ನಗರದ ಜಿಲ್ಲಾಸ್ಪತ್ರೆಗೆ ಗುರುವಾರ ಭೇಟಿ ನೀಡಿ, ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮ, ಮೂಲ ಸೌಕರ್ಯಗಳ ಕುರಿತು ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ 1755 ಸಕ್ರಿಯ ಪ್ರಕರಣಗಳಿವೆ. ಜಿಲ್ಲಾ ಆಸ್ಪತ್ರೆಯಲ್ಲಿ 110, ತಾಲೂಕು ಆಸ್ಪತ್ರೆಗಳಲ್ಲಿ 221, ಕೋವಿಡ್ ಕೇರ್ ಸೆಂಟರ್​ಗಳಲ್ಲಿ 321, ಖಾಸಗಿ ಆಸ್ಪತ್ರೆಯಲ್ಲಿ 50 ಹಾಗೂ ಹೊರ ಜಿಲ್ಲೆಗಳಲ್ಲಿ 40 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 1040 ಜನ ಹೋಂ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
    ಆಕ್ಸಿಜನ್ ಕೊರತೆ ಇಲ್ಲ: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಲ್ಲ. ದಿನವೊಂದಕ್ಕೆ ಏಳು ಮೆಟ್ರಿಕ್ ಟನ್ ಆಕ್ಸಿಜನ್ ಅವಶ್ಯಕತೆಯಿದೆ. ಬೇರೆ ಬೇರೆ ಮೂಲಗಳಿಂದ ಏಳು ಮೆಟ್ರಿಕ್ ಟನ್ ಪೂರೈಕೆಯಾಗುತ್ತಿದೆ. ನೆಕ್-ಟು-ನೆಕ್ ಸಮ ಪ್ರಮಾಣದಲ್ಲಿ ದಿನಕ್ಕೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.
    ಜಿಲ್ಲಾಸ್ಪತ್ರೆಗೆ ಬೇಕಾದ ಪ್ರಮಾಣದ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಕೆ.ಎಲ್. ಮೆಡಿಕಲ್ ಆಕ್ಸಿಜನ್ ದಾಸ್ತಾನು ಪ್ಲಾಂಟ್ ಆಸ್ಪತ್ರೆ ಆವರಣದಲ್ಲಿದೆ. 2.50 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್, 1.50 ಕಂಟೇನರ್ ಮೂಲಕ ಹಾಗೂ 1.50 ಜಂಬೋ ಸಿಲಿಂಡರ್ ಮೂಲಕ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎಂದರು.
    200 ಆಮ್ಲಜನಕ ಕಾನ್ಸನ್​ಟ್ರೇಟರ್ ಖರೀದಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಸ್ಪತ್ರೆ ಮತ್ತು ಬೇರೆ ಬೇರೆ ಕೋವಿಡ್ ಆರೈಕೆ ಕೇಂದ್ರಗಳಿಗೆ
    ಕಾನ್ಸನ್​ಟ್ರೇಟರ್ ಪೂರೈಸಲು ಸೂಚಿಸಲಾಗಿದೆ. ಆಕ್ಸಿಜನ್ ಬೆಡ್​ನಲ್ಲಿರುವವರು ಹಾಗೂ ಸಾರಿ ಕೇಸ್ ರೋಗಿಗಳ ಪೈಕಿ ಮೂರ್ನಾಲ್ಕು ದಿನ ಆಕ್ಸಿಜನ್ ಕೊಟ್ಟರೆ ಸುಧಾರಿಸಿಕೊಳ್ಳುವ ರೋಗಿಗಗಳನ್ನು ಆಕ್ಸಿಜನ್ ಬೆಡ್​ಗಳಿಂದ ಸ್ಥಳಾಂತರಿಸಿ
    ಕಾನ್ಸನ್​ಟ್ರೇಟರ್ ಮೂಲಕ ಆಮ್ಲಜನಕ ಪೂರೈಸಲು ನಿರ್ಧರಿಸಲಾಗಿದೆ. ಇದರಿಂದ ಆಕ್ಸಿಜನ್ ಬೆಡ್​ಗಳು ಖಾಲಿಯಾಗಿ ಅಗತ್ಯ ಇರುವ ಮತ್ತಷ್ಟು ಜನರಿಗೆ ಲಭ್ಯವಾಗಲಿವೆ ಎಂದರು. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 483 ವೈಲ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 405 ವೈಲ್ ರೆಮ್ೆಸಿವಿರ್ ದಾಸ್ತಾನು ಲಭ್ಯವಿದ್ದು, ಇದು ಮೂರು ದಿನಗಳಿಗೆ ಸಾಕಾಗುತ್ತದೆ. ಗುರುವಾರ 380ಕ್ಕೂ ಹೆಚ್ಚುವರಿ ರೆಮ್ೆಸಿವಿರ್ ಪೂರೈಕೆಯಾಗುತ್ತಿದೆ ಎಂದರು.
    10 ಐಸಿಯು ಹಾಸಿಗೆ ಲಭ್ಯ: ಹೊಸದಾಗಿ ಪೂರೈಕೆಯಾಗಿರುವ 10 ವೆಂಟಿಲೇಟರ್​ಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸಿ ಮೂಲಸೌಕರ್ಯ ಕಲ್ಪಿಸಿ ಸೇವೆಗೆ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಇದರಿಂದ ವೆಂಟಿಲೇಟರ್ ಸಹಿತ 10 ಐ.ಸಿ.ಯು. ಬೆಡ್​ಗಳು ರೋಗಿಗಳಿಗೆ ಲಭ್ಯವಾಗಲಿವೆ. ಇದರೊಂದಿಗೆ ಹೆಚ್ಚುವರಿಯಾಗಿ 25 ಆಕ್ಸಿಜನ್ ಬೆಡ್ ರೆಡಿ ಮಾಡಲು ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳ ಆಕ್ಸಿಜನ್ ಬೆಡ್-ಐಸಿಯು ವಾರ್ಡ್, ವೆಂಟಿಲೇಟರ್​ನೊಂದಿಗೆ ವೈದ್ಯಕೀಯ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts