More

    ರಾಜ್ಯದಲ್ಲಿ ಕೋವಿಡ್ ದೈನಂದಿನ ಸೋಂಕು ಪ್ರಮಾಣ ದರ ಶೇ. 7.16ಕ್ಕೆ ಏರಿಕೆ..

    ಬೆಂಗಳೂರು: ರಾಜ್ಯದಲ್ಲಿ ಬುಧವಾರ 1,287 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ದಿನದ ಸೋಂಕು ಪ್ರಮಾಣ ದರ ಶೇ. 7.16 ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 10,859 ತಲುಪಿದೆ.

    ಕಳೆದ 24 ಗಂಟೆಗಳಲ್ಲಿ ಸೋಂಕಿನ ತೀವ್ರತೆಗೆ ಕಲಬುರಗಿಯ 68 ವರ್ಷದ ವ್ಯಕ್ತಿ ಹಾಗೂ ಹಾವೇರಿಯ 45 ವರ್ಷದ ವ್ಯಕ್ತಿ ಸೇರಿ ಇಬ್ಬರು ಸಾವಗೀಡಾಗಿದ್ದಾರೆ. ಇದರೊಂದಿಗೆ ಮೃತರ ಒಟ್ಟು ಸಂಖ್ಯೆ 40,106ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿತರಲ್ಲಿ 1,531 ಮಂದಿ ಚೇತರಿಸಿಕೊಂಡಿದ್ದು, ಗುಣಮುಖರ ಒಟ್ಟ ಸಂಖ್ಯೆ 39.51 ಲಕ್ಷ ಮೀರಿದ್ದು, ಈವರೆಗೂ 40.08 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲಿದ್ದಾರೆ.

    ಬೆಂಗಳೂರು ನಗರದಲ್ಲಿ 992, ಕೊಡಗು ಮತ್ತು ಮೈಸೂರಿನಲ್ಲಿ ತಲಾ 38, ಬೆಳಗಾವಿಯಲ್ಲಿ 32, ಬಳ್ಳಾರಿಯಲ್ಲಿ 26,ಕಲಬುರಗಿಯಲ್ಲಿ 25, ಮಂಡ್ಯದಲ್ಲಿ 22, ಕೋಲಾರ ಮತ್ತು ತುಮಕೂರಿನಲ್ಲಿ ತಲಾ 19, ಚಿಕ್ಕಬಳ್ಳಾಪುರದಲ್ಲಿ 12, ದಕ್ಷಿಣ ಕನ್ನಡದಲ್ಲಿ 10 ಹಾಗೂ 13 ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಒಂದಂಕಿ ವರದಿಯಾಗಿದೆ. ಉಳಿದಂತೆ ಬಾಗಲಕೋಟೆ, ಚಿಕ್ಕಮಗಳೂರು, ಗದಗ, ಕೊಪ್ಪಳ, ರಾಮನಗರ ಮತ್ತು ವಿಜಯಪುರದಲ್ಲಿ ಪ್ರಕರಣಗಳ ಸಂಖ್ಯೆ ಶೂನ್ಯ ಇದೆ.

    ಪಿಎಸ್​ಐ ನೇಮಕಾತಿಗಾಗಿ ಶೀಘ್ರದಲ್ಲೇ ಮರುಪರೀಕ್ಷೆ: ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ..

    ರಾಜ್ಯದಲ್ಲಿ ಮುಂದಿನ 4 ದಿನ ಮಳೆ ಇನ್ನಷ್ಟು ಜೋರು; ನಾಳೆ-ನಾಡಿದ್ದು ಕರಾವಳಿ-ಮಲೆನಾಡಲ್ಲಿ ರೆಡ್ ಅಲರ್ಟ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts