More

    ಕೋವಿಡ್​ ಲಸಿಕೆಯಿಂದಾಗಿ ತಪ್ಪಿತು ಭಾರತದ 42 ಲಕ್ಷಕ್ಕೂ ಅಧಿಕ ಮಂದಿಯ ಸಾವು!; ಇಲ್ಲಿದೆ ಅಧ್ಯಯನ ವಿವರ..

    ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ಪಿಡುಗು ತೀವ್ರವಾಗಿದ್ದ ಸಂದರ್ಭದಲ್ಲಿ ವರದಾನವಾಗಿ ಬಂದ ಕೋವಿಡ್ ಲಸಿಕೆಯಿಂದಾಗಿ ಭಾರತದ 42 ಲಕ್ಷಕ್ಕೂ ಅಧಿಕ ಮಂದಿಯ ಸಾವು ತಪ್ಪಿಹೋಗಿದೆ. ಅರ್ಥಾತ್, 2021ರಲ್ಲಿ ಕೋವಿಡ್ ಲಸಿಕೆಯಿಂದಾಗಿ ಭಾರತದಲ್ಲಿನ 42 ಲಕ್ಷಕ್ಕೂ ಅಧಿಕ ಸಂಭಾವ್ಯ ಸಾವುಗಳನ್ನು ತಪ್ಪಿಸಿದಂತಾಗಿದೆ.

    ಲ್ಯಾನ್ಸೆಟ್​ ಇನ್​ಫೆಕ್ಷಿಯಸ್ ಡಿಸೀಸಸ್ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನ ವರದಿ ಈ ಸಂಗತಿಯನ್ನು ಹೊರಗೆಡಹಿದೆ. 185 ದೇಶಗಳಲ್ಲಿನ ಲಸಿಕೀಕರಣದ ಮೊದಲ ವರ್ಷದಲ್ಲಿನ ಹೆಚ್ಚುವರಿ ಸಾವುಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಅಧ್ಯಯನದ ಪ್ರಕಾರ ಜಾಗತಿಕವಾಗಿ 1.98 ಕೋಟಿ ಸಂಭಾವ್ಯ ಸಾವುಗಳು ತಪ್ಪಿಹೋಗಿವೆ.

    ಇನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದ್ದ ಗುರಿಯಂತೆ 2021ರ ಒಳಗೆ ಪ್ರತಿ ದೇಶದ ಶೇ. 40 ಮಂದಿಗೆ ಎರಡು ಅಥವಾ ಹೆಚ್ಚು ಡೋಸ್​ಗಳ ಲಸಿಕೀಕರಣ ಸಾಧ್ಯವಾಗಿದ್ದರೆ ಇನ್ನೂ 5.99 ಲಕ್ಷ ಸಾವುಗಳನ್ನು ತಪ್ಪಿಸಬಹುದಾಗಿತ್ತು ಎಂದು ಅಂದಾಜಿಸಲಾಗಿದೆ.

    ಈ ಅವಧಿಯಲ್ಲಿ ಭಾರತದಲ್ಲಿ 42 ಲಕ್ಷಕ್ಕೂ ಅಧಿಕ ಸಂಭಾವ್ಯ ಸಾವುಗಳನ್ನು ಲಸಿಕೀಕರಣದಿಂದಾಗಿ ತಪ್ಪಿಸಿದಂತಾಗಿದೆ. ಸಾಂಕ್ರಾಮಿಕದಿಂದ ಭಾರತದಲ್ಲಿ 48.2 ಲಕ್ಷದಿಂದ 56.3 ಲಕ್ಷದವರೆಗೆ ಸಾವು ಸಂಭವಿಸಬಹುದು ಎಂಬ ಅಂದಾಜಿಸಲಾಗಿದ್ದರೂ, ಇದುವರೆಗಿನ ವರದಿ ಪ್ರಕಾರ 5.24 ಲಕ್ಷ ಸಾವು ಸಂಭವಿಸಿದೆ. ಇದರ ಆಧಾರದ ಮೇಲೆ ಅಧ್ಯಯನ ನಡೆಸಿ ಈ ಅಂಕಿ-ಅಂಶಗಳನ್ನು ಕಂಡುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

    ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts