More

    ಸಂಸತ್ ಅಧಿವೇಶನಕ್ಕೂ ಕಾಡುತ್ತಿದೆ ಕರೊನಾ ಸಮಸ್ಯೆ!

    ನವದೆಹಲಿ: ಸೆ. 14ರಿಂದ ಆರಂಭವಾಗಲಿರುವ ಸಂಸತ್‌ನ ಮುಂಗಾರು ಅಧಿವೇಶನಕ್ಕೆ ಕರೊನಾ ದೊಡ್ಡ ಸಮಸ್ಯೆಯಾಗಲಿದೆ ಎನ್ನಲಾಗಿದೆ.

    ಸಂಸತ್‌ನಲ್ಲೀಗ ಒಟ್ಟು 785 ಸದಸ್ಯರಿದ್ದು, ಅದರಲ್ಲಿ 200ಕ್ಕೂ ಹೆಚ್ಚು ಸದಸ್ಯರು 65 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅವರಲ್ಲಿ ಅನೇಕರು ಅಧಿವೇಶನದಿಂದ ಹೊರಗುಳಿಯುವ ಸಾಧ್ಯತೆಯಿದೆ. ರಾಜ್ಯಸಭೆಯ 240 ಸಂಸದರ ಪೈಕಿ 97 ಸಂಸದರು 65 ವರ್ಷ ಮೇಲ್ಪಟ್ಟವರಾಗಿದ್ದಾರೆ. ಮನಮೋಹನ್ ಸಿಂಗ್ ಸೇರಿದಂತೆ 20 ಸದಸ್ಯರು 80 ವರ್ಷ ಮೇಲ್ಪಟ್ಟವರಿದ್ದಾರೆ.

    ಇದನ್ನೂ ಓದಿ: ಕೋವಿಡ್ 19 ರೋಗಿಗಳಿಗೆ ಆ್ಯಂಬುಲೆನ್ಸ್ ಶುಲ್ಕ ನಿಗದಿ ಮಾಡಿ- ರಾಜ್ಯಗಳಿಗೆ ಸುಪ್ರೀಂ ನಿರ್ದೇಶನ

    ಲೋಕಸಭೆಯಲ್ಲಿ 130 ಸಂಸದರು 65 ವರ್ಷ ಮೇಲ್ಪಟ್ಟವರಿದ್ದಾರೆ. 90 ವರ್ಷ ಮೇಲ್ಪಟ್ಟ ಓರ್ವ ಸಂಸದ ಮತ್ತು 75 ವರ್ಷ ಮೇಲ್ಪಟ್ಟ 30 ಸಂಸದರಿದ್ದಾರೆ. ಹೀಗಿರುವಾಗ ಅಧಿವೇಶನದಲ್ಲಿ ಎಷ್ಟು ಸದಸ್ಯರು ಹಾಜರಾಗಲಿದ್ದಾರೆ ಇನ್ನೆಷ್ಟು ಜನರು ಸುರಕ್ಷತೆಯ ದೃಷ್ಟಿಯಿಂದ ಗೈರಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. (ಏಜೆನ್ಸೀಸ್)

    ಕಂಗನಾರನ್ನು ಕರೆದೊಯ್ದ ಇಂಡಿಗೋಗೆ ಡಿಜಿಸಿಎ ನೋಟಿಸ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts