More

    ಮಾತಾಡುವುದರಿಂದಲೂ ಹರಡುತ್ತಂತೆ ಕರೊನಾ: ಮುಚ್ಚಿದ ಪೆಟ್ಟಿಗೆಯಲ್ಲಿ ನಡೆಯಿತು ಸಂಶೋಧನೆ!

    ವಾಷಿಂಗ್ಟನ್​: ಈಗ ಎಲ್ಲೆಲ್ಲೂ ಕರೊನಾದ್ದೇ ಮಾತು, ಕರೊನಾದ್ದೇ ಸಂಶೋಧನೆ. ಈ ವೈರಸ್​ನ ಮೂಲ ಚೀನಾದ ವೆಟ್​ಮಾರ್ಕೆಟ್​ ಎನ್ನಲಾಗುತ್ತಿದ್ದರೂ ಇದರ ಹುಟ್ಟಿನ ಬಗ್ಗೆಯೇ ನೂರಾರು ಗೊಂದಲಗಳು ಇವೆ. ಅದರ ಬಗ್ಗೆ ಇನ್ನೂ ಸಂಪೂರ್ಣ ಅಧ್ಯಯನ ಹೊರಬೇಕಷ್ಟೆ.

    ಇದರ ಮೂಲ ಹುಡುಕುವುದು ಒಂದೆಡೆಯಾದರೆ, ಸೋಂಕನ್ನು ಎಲ್ಲಾ ದೇಶಗಳನ್ನು ಹೊಕ್ಕಿ ಆಗಿದೆ. ಇದೀಗ ಇರುವುದು ಅದರ ನಿಯಂತ್ರಣದ ಬಗ್ಗೆ ತೆಗೆದುಕೊಳ್ಳಬಹುದಾದ ಕ್ರಮ. ನಿಯಂತ್ರಣ ಮಾಡುವ ಮೊದಲು ವೈರಸ್​ ಹೇಗೆಲ್ಲಾ ಹರಡುತ್ತದೆ ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿದ್ದು, ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ.

    ಇದನ್ನೂ ಓದಿ: ಸಾಧುಗಳ ಬರ್ಬರ ಹತ್ಯೆಯ ರಹಸ್ಯ ಬಯಲಾಗುವ ಮೊದಲೇ ಅಪಘಾತದಲ್ಲಿ ವಕೀಲನ ನಿಗೂಢ ಸಾವು!

    ಅಂಥದ್ದೇ ಒಂದು ಹೊಸ ಸಂಶೋಧನೆಯ ವರದಿಯನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಅಂಡ್ ಕಿಡ್ನಿ ಡಿಸೀಸ್‌ನ (ಎನ್‌ಐಡಿಕೆ)  ಸಂಶೋಧಕರು ನೀಡಿದ್ದಾರೆ. ಇವರ ಅನ್ವಯ, ಮಾತಿನಿಂದಲೂ ಕರೊನಾ ಸೋಂಕು ಹರಡುವ ಸಾಧ್ಯತೆ ಇದೆ!

    ಹೌದು. ಸೀನುವಿಕೆ, ಕೆಮ್ಮುವಿಕೆಯಂತೆಯೇ ಮಾತಿನಿಂದಲೂ ಸೋಂಕು ಹರಡುವ ಸಾಧ್ಯತೆ ಇದೆ ಎಂದಿದ್ದಾರೆ ಸಂಶೋಧಕರು. ಮಾತನಾಡಿದಾಗ ಬಾಯಲ್ಲಿರುವ ಲಾಲಾರಸದಿಂದ ಉತ್ಪತ್ತಿಯಾಗುವ ಸೂಕ್ಷ್ಮ ಕಣಗಳು 10 ನಿಮಿಷಗಳಿಗಿಂತ ಹೆಚ್ಚು ಕಾಲ ಗಾಳಿಯಲ್ಲಿ ಸ್ಥಿರವಾಗಿ ಇರುತ್ತದೆ. ಆದ್ದರಿಂದ ಅದನ್ನು ಬೇರೆಯವರು ಉಸಿರಾಡಿಸಿದರೆ ಅವರಿಗೆ ಸೋಂಕು ತಗಲುವ ಸಾಧ್ಯತೆ ಇದೆ ಎಂದಿದೆ ವರದಿ. ಇದರ ಅರ್ಥ ಸೋಂಕಿತ ವ್ಯಕ್ತಿ ಮಾತನಾಡಿದ ಸಂದರ್ಭದಲ್ಲಿ ಅವರ ಬಾಯಿಯಿಂದ ಹೊರಟಿರುವ ಸೂಕ್ಷ್ಮ ಕಣಗಳು ಗಾಳಿಯಲ್ಲಿಯೇ ಸ್ಥಿರಗೊಳ್ಳುವುದರಿಂದ ಸೋಂಕು ತಗಲುವ ಸಾಧ್ಯತೆಗಳು ಇವೆ.

    ಇದನ್ನೂ ಓದಿ:  ಬೆಂಗಳೂರು ಜನರಿಗೆ ನಂ.653 ಸಂಕಟ- ದಕ್ಷಿಣ ಕನ್ನಡ, ಉಡುಪಿಗೆ ದುಬೈ ಕಂಟಕ: ಸಾವಿರದ ಗಡಿ ದಾಟಿದ ಸೋಂಕು!

    ಇದರ ಸಂಶೋಧನೆ ಕೈಗೊಳ್ಳಲು ಸಂಶೋಧಕರು ಒಂದು ಪೆಟ್ಟಿಗೆಯನ್ನು ತರಿಸಿದರು. ಅದರಲ್ಲಿ 25 ಸೆಕೆಂಡ್​ ‘ಸ್ಟೇ ಸೇಫ್​’ (ಆರೋಗ್ಯವಾಗಿರಿ) ಎಂದು ಜೋರಾಗಿ ಹೇಳಿದರು. ನಂತರ ಬಾಯಿಯ ಲಾಲಾರಸದ ಮೂಲಕ ಹೊರಡುವ ಸೂಕ್ಷ್ಮ ಕಣಗಳು ಎಷ್ಟು ಹೊತ್ತು ಗಾಳಿಯಲ್ಲಿ ಸ್ಥಿರವಾಗಿ ಇರುತ್ತದೆ ಎಂಬುದನ್ನು ನೋಡುವ ಸಂಬಂಧ ಪೆಟ್ಟಿಗೆಗೆ ಲೇಸರ್​ ಹನಿಗಳನ್ನು ಇಡಲಾಗಿತ್ತು. ಇದರ ಮೂಲಕ ಪ್ರಯೋಗ ಕೈಗೊಳ್ಳಲಾಗಿತ್ತು. ಆಗ ನಡೆಸಿದ ಅಧ್ಯಯನದಿಂದ ಸೂಕ್ಷ್ಮ ಕಣಗಳು 12 ನಿಮಿಷ ಗಾಳಿಯಲ್ಲಿಯೇ ನಾಶವಾಗದೇ ಇದ್ದವು.

    ಲಾಲಾರಸದಲ್ಲಿರುವ ಕರೊನಾವೈರಸ್ ಸಾಂದ್ರತೆಯನ್ನು ಗಣನೆಗೆ ತೆಗೆದುಕೊಂಡಿರುವ ವಿಜ್ಞಾನಿಗಳು, ‘ ಪ್ರತಿ ನಿಮಿಷವೂ ಜೋರಾಗಿ ಮಾತನಾಡುವುದರಿಂದ ಒಂದು ಸಾವಿರಕ್ಕೂ ಹೆಚ್ಚು ವೈರಸ್-ಒಳಗೊಂಡಿರುವ ಹನಿಗಳು ಗಾಳಿಯಲ್ಲಿ ಸ್ಥಿರವಾಗಿ ಇರುತ್ತವೆ’ ಎಂದಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ನಾಳೆಯಿಂದ ಕೆಲಸಕ್ಕೆ ಬರಬೇಡಿ: ಝೂಮ್​ ಆ್ಯಪ್ ನೋಡಿದ 3700 ಉದ್ಯೋಗಿಗಳು ಕಕ್ಕಾಬಿಕ್ಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts