More

    ಭಾರತೀಯರ ನಿದ್ದೆ ಕಸಿಯುತ್ತಿರೋದು ಕರೊನಾ ವೈರಸ್​ Covid19 ಅಲ್ಲ; ಮತ್ತೇನು?

    ನವದೆಹಲಿ: ಕರೊನಾ ವೈರಸ್ Covid19 ಸೋಂಕು ದೇಶಾದ್ಯಂತ ಹರಡುತ್ತಿದ್ದು, ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಕರ್ನಾಟಕವೂ ಸೇರಿ ಹಲವು ರಾಜ್ಯಗಳು ಲಾಕ್​ಡೌನ್​ ಮುಂದುವರಿಸುವ ಚಿಂತನೆಯಲ್ಲಿವೆ. ಇದೆಲ್ಲವೂ ಸಾರ್ವಜನಿಕರ ನಿದ್ದೆಗೆಡಿಸುವ ವಿಚಾರಗಳೇ ಆದರೂ, ಭಾರತೀಯರ ನಿದ್ದೆಗೆಡಿಸುವ ವಿಚಾರ ಇದಲ್ಲವೇ ಅಲ್ಲ ಅಂದಿದೆ ಒಂದು ಅಧ್ಯಯನ.

    ಭಾರತದಲ್ಲಿ ಶೇಕಡ 92 ಜನ ಇಂತಹ ಸಮಸ್ಯೆಗೆ ಒಳಗಾಗಿದ್ದಾರೆ. ಎಲ್ಲರೂ ಒಂದೇ ಕಾರಣಕ್ಕೆ ನಿದ್ದೆಗೆಡುತ್ತಿದ್ದಾರೆ. ವೇಕ್​ಫಿಟ್ ಎಂಬ ಸಂಸ್ಥೆಯೊಂದು ಈ ಸಮೀಕ್ಷೆಯನ್ನು ಮಾಡಿಸಿ ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್​ಕಾರ್ಡ್​ 2020 ಎಂಬ ವರದಿಯನ್ನು ಪ್ರಕಟಿಸಿದೆ. ಈ ವರದಿ ಪ್ರಕಾರ ಶೇಕಡ 92 ಜನ ಮಲಗುವ ಮುನ್ನ ಫೋನ್​ಗಳನ್ನು ಹಿಡಿದಿರುತ್ತಾರೆ. ಓವರ್​ ದ ಟಾಪ್​(ಒಟಿಟಿ) ಪ್ಲಾಟ್​ಫಾರಂನಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ತಮಗಿಷ್ಟವಾದ ವಿಡಿಯೋಗಳನ್ನು ನೋಡುತ್ತ ತಡರಾತ್ರಿವರೆಗೆ ಹಾಸಿಗೆಯಲ್ಲಿ ಹೊರಳಾಡುತ್ತಿರುತ್ತಾರೆ. ಕಳೇದ ವರ್ಷದಿಂದೀಚೆಗೆ ಇಂಥವರ ಪ್ರಮಾಣ 2 ಪಟ್ಟು ಹೆಚ್ಚಾಗಿದೆಯಂತೆ!

    ಈ ಅಧ್ಯಯನಕ್ಕಾಗಿ ಸಂಸ್ಥೆ 50,000 ಜನರ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ. ಇದರಲ್ಲಿ ಶೇಕಡ 54 ಜನ ಮೊಬೈಲ್ ಬಗ್ಗೆ ಅತಿಯಾದ ಒಲವು ಹೊಂದಿದ್ದಾರೆ. ಶೇಕಡ 33 ಜನ ಕೆಲಸದ ಒತ್ತಡದಿಂದ ಬಳಲುತ್ತಿದ್ದಾರೆ. ನಿದ್ದೆಗೆಡುವ ಪರಿಣಾಮ ಆರೋಗ್ಯದ ಮೇಲಾಗುತ್ತದೆ. ಶರೀರದ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಮತ್ತು ಮನಸ್ಸು ಆರೋಗ್ಯಪೂರ್ಣವಾಗಿರುವುದಿಲ್ಲ. ಮಧುಮೇಹ, ಬೊಜ್ಜು ಇತ್ಯಾದಿಗಳಿಗೂ ನಿದ್ದೆಗಡುವುದು ಕಾರಣವಾಗುತ್ತದೆ ಎಂಬಿತ್ಯಾದಿ ಅಂಶಗಳತ್ತ ಅಧ್ಯಯನ ವರದಿ ಗಮನಸೆಳೆದಿದೆ. (ಏಜೆನ್ಸೀಸ್)

    ಕರೊನಾ ಎಚ್ಚರ ಜರೂರು ಬೇಕು, ಆದರೆ ಭೀತಿ ಬೇಡವೇ ಬೇಡ!: ಮನೆಮದ್ದುಗಳ ಕಡೆಗೂ ಗಮನಹರಿಸೋಣ

    ಅಜೀರ್ಣಕ್ಕೆ ರಾಮಬಾಣ ಪಪ್ಪಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts