More

    ಕ್ವಾರಂಟೈನ್ ಆಗಲ್ಲ ಎನ್ನುತ್ತಿದ್ದ ಕಾರ್ಪೋರೇಟರ್ ಕೊನೆಗೂ ಆಸ್ಪತ್ರೆಗೆ ರವಾನೆ

    ಬೆಂಗಳೂರು: ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಬಿಬಿಎಂಪಿಯ ಕಾರ್ಪೋರೇಟರ್ ಇಮ್ರಾನ್​ ಪಾಷಾ ಕ್ವಾರಂಟೈನ್ ಆಗಲು ಸತಾಯಿಸಿ ಕೊನೆಗೂ ಆಸ್ಪತ್ರೆ ಸೇರಿದ್ದಾರೆ.

    ಸೀಲ್‌ಡೌನ್ ಆಗಿರುವ ಪಾದರಾಯನಪುರ ನಿವಾಸಿಗಳ ಜತೆ ಸಂಪರ್ಕ ಹೊಂದಿದ್ದ ಅಲ್ಲಿನ ಜೆಡಿಎಸ್ ‌ಕಾರ್ಪೊರೇಟರ್ ಇವರು. ಶುಕ್ರವಾರ ರಾತ್ರಿ ಅವರಿಗೆ ಕರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಆದರೆ ಶನಿವಾರ ಮಧ್ಯಾಹ್ನದವರೆಗೂ ಅವರು ಆಸ್ಪತ್ರೆಗೆ ಹೋಗಲು ಒಪ್ಪಿರಲಿಲ್ಲ.

    ಅಧಿಕಾರಿಗಳು ಮತ್ತು ಅವರ ಹಿತೈಷಿ ರಾಜಕಾರಣಿಗಳು ಮನವೊಲಿಸಿದ ಬಳಿಕ ಅಪರಾಹ್ನದ ವೇಳೆಗೆ ಅವರು ಆಸ್ಪತ್ರೆಗೆ ಹೋಗಲು ಒಪ್ಪಿದರು. ಮನೆಯಿಂದ ಹೊರಬಂದು, ಅಲ್ಲಿ ನೆರೆದಿದ್ದ ತಮ್ಮ ಬೆಂಬಲಿಗರತ್ತ ಕೈಬೀಸಿ ಆಂಬ್ಯುಲೆನ್ಸ್ ಹತ್ತಿದರು.

    ಇದನ್ನೂ ಓದಿ:ಕೊವಿಡ್-19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸೋತಿದೆ; ರಾಜ್ಯಪಾಲರ ತೀವ್ರ ಅಸಮಾಧಾನ, ಟೀಕೆ

    ನಾಲ್ಕೈದು ದಿನಗಳಿಂದ ಅವರಿಗೆ ಉಸಿರಾಟದ ತೊಂದರೆ, ಶೀತ, ಕೆಮ್ಮು ಮುಂತಾದ ಕರೊನಾ ಲಕ್ಷಣಗಳು ಇದ್ದವು. ವೈಯಕ್ತಿಕವಾಗಿ ವೈದ್ಯರ ಬಳಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಈಗ ಅವರ ಕುಟುಂಬ ಸದಸ್ಯರನ್ನೆಲ್ಲಾ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಕಾರ್ಪೊರೇಟರ್ ಸ್ಥಳೀಯ ಜನರು ಮತ್ತು ಶಾಸಕರೊಂದಿಗೂ ಸಂಪರ್ಕದಲ್ಲಿದ್ದರು. ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾಗಿದ್ದವರಿಂದಾಗಿ ಕರೊನಾ ಸೋಂಕಿನ ಪ್ರಕರಣ ಹೆಚ್ಚಾಗಿದ್ದ ಪಾದರಾಯನಪುರ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿತ್ತು. ಈ ಪ್ರದೇಶದೊಂದಿಗೆ ಕಾರ್ಪೋರೇಟರ್ ನಿತ್ಯ ಸಂಪರ್ಕದಲ್ಲಿದ್ದರು. ಇತ್ತೀಚೆಗೆ ಅವರಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪತ್ತೆ ಹಚ್ಚುವುದೇ ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾಗಿದೆ.

    ಇದನ್ನೂ ಓದಿ:‘ಪ್ರಜ್ಞಾ ಸಿಂಗ್​ ಎಲ್ಲಿ?’- ಮಿಸ್ಸಿಂಗ್ ಪೋಸ್ಟರ್​​ಗೆ ಬಿಜೆಪಿಯಿಂದ ಉತ್ತರ; ಆಸ್ಪತ್ರೆಗೆ ದಾಖಲಾಗಿದ್ದಾರೆ ಸಂಸದೆ

    ಸಮಾಧಾನಕರ ವಿಷಯವೆಂದರೆ ಗುರುವಾರ ನಡೆದಿದ್ದ ಬಿಬಿಎಂಪಿ ಕೌನ್ಸಿಲ್ ಸಭೆಗೆ ಈ ಕಾರ್ಪೊರೇಟರ್ ಹಾಜರಾಗಿರಲಿಲ್ಲ. ಒಂದು ವೇಳೆ ಹಾಜರಾಗಿದ್ದರೆ, ಬಿಬಿಎಂಪಿಯ ಇನ್ನಷ್ಟು ಸದಸ್ಯರಿಗೂ ಸೋಂಕು ತಗಲುವ ಸಾಧ್ಯತೆಗಳಿದ್ದವು.

    ಫೇಸ್​ಬುಕ್​ನಲ್ಲಿ ಅಶ್ಲೀಲ ವಿಡಿಯೋ ಹಾಕುತ್ತಿದ್ದ ಬಾಲಕ ಏನಾದ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts