More

    ಭಾರತೀಯ ಮೂಲದ ಹೃದ್ರೋಗ ತಜ್ಞ ಲಂಡನ್‌ನಲ್ಲಿ ಕರೊನಾಗೆ ಬಲಿ

    ಲಂಡನ್: ಭಾರತದ ಮೂಲದ ಖ್ಯಾತ ಹೃದ್ರೋಗ ತಜ್ಞ ಡಾ. ಜೀತೇಂದ್ರ ಕುಮಾರ್‌ ರಾಠೋಡ್‌ ಲಂಡನ್‌ ಆಸ್ಪತ್ರೆಯಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

    ಅವರು ಹೃದ್ರೋಗಿಗಳ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ರೋಗಿಗಳ ಸೇವೆಯಲ್ಲಿ ನಿರಂತರ ತೊಡಗಿಸಿಕೊಳ್ಳುವ ಮೂಲಕ ಮನೆ ಮಾತಾಗಿದ್ದರು. ಅವರಿಗೆ 58 ವರ್ಷ ವಯಸ್ಸಾಗಿತ್ತು. ಬ್ರಿಟನ್‌ನ ಯೂನಿರ್ವಸಿಟಿ ಆಫ್ ವೇಲ್ಸ್(ಯುಎಚ್ ಡಬ್ಲ್ಯು)ನಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ಅಸೋಸಿಯೇಟ್ ಸ್ಪೆಷಲಿಸ್ಟ್ ಆಗಿದ್ದ ಇವರ ಸಾವಿನಿಂದ ದೊಡ್ಡ ನಷ್ಟವುಂಟಾಗಿದೆ ಎಂದು ಲಂಡನ್‌ನ ವೈದ್ಯಕೀಯ ಮಂಡಳಿ ವಿಷಾದ ವ್ಯಕ್ತಪಡಿಸಿದೆ.

    ಭಾರತದಲ್ಲಿ ವೈದ್ಯ ಪದವಿ ಪಡೆದಿದ್ದ ಜೀತೇಂದ್ರ ಅವರು, 1990ರಿಂದ ಲಂಡನ್‌ನ ಕಾರ್ಡಿಯೋ ಸರ್ಜರಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹೃದ್ರೋಗಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದ ಇವರು, ಎಲ್ಲರನ್ನೂ ತುಂಬಾ ಗೌರವದಿಂದ ನೋಡುತ್ತಿದ್ದರು. ಮಾನವೀಯ ಅಂತಃಕರಣವುಳ್ಳ ವ್ಯಕ್ತಿ ಇವರಾಗಿದ್ದರು ಎಂದು ಮಂಡಳಿ ಹೇಳಿದೆ. ಇವರಿಗೆ ಸೋಂಕು ಹೇಗೆ ತಗುಲಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

    ಲಂಡನ್‌ನಲ್ಲಿ ಇಲ್ಲಿಯವರೆಗೆ ಕರೊನಾ ವೈರಸ್‌ನಿಂದಾಗಿ 5,373 ಮಂದಿ ಮೃತಪಟ್ಟಿದ್ದಾರೆ. ಇಲ್ಲಿ ಸುಮಾರು 1.5 ದಶಲಕ್ಷದಷ್ಟು ಭಾರತೀಯ ಮೂಲದವರಿದ್ದಾರೆ. (ಏಜನ್ಸೀಸ್‌)

    ಅಮೆರಿಕದಲ್ಲಿ ಏರುತ್ತಲೇ ಇದೆ ಮೃತರ ಸಂಖ್ಯೆ: ಒಂದೇ ದಿನ 1850 ಸಾವು, ನ್ಯೂಯಾರ್ಕ್‌ನಲ್ಲಿ 800 ಬಲಿ

    ಮುಂಬೈ, ಪುಣೆಯಲ್ಲಿ ಲಾಕ್​ಡೌನ್​ ವಿಸ್ತರಣೆ: ಮಾಸ್ಕ್​ ಧರಿಸದೇ ಹೊರಬಂದ್ರೆ ಶಿಕ್ಷೆ ಕಾದಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts