ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕರೊನಾ ಅಟ್ಟಹಾಸ ಮೆರೆಯುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕ್ಷಿಪ್ರಗತಿಯಲ್ಲಿ ಓಡುತ್ತಿರುವ ಮಹಾಮಾರಿ ಕೋವಿಡ್ ಅನ್ನು ನಿಯಂತ್ರಿಸಲು ಸರ್ಕಾರ ‘ಡ್ರೋನಾಸ್ತ್ರ’ ಕೈಗೆತ್ತಿಕೊಂಡಿದೆ.
ಇನ್ಮುಂದೆ ರಾಜ್ಯ ರಾಜಧಾನಿಯ ಎಲ್ಲ ವಾರ್ಡ್ಗಳಲ್ಲೂ ಡ್ರೋನ್ ಮೂಲಕ ಸ್ಯಾನಿಟೈಸರ್ ಸಿಂಪಡಿಸಲಾಗುತ್ತದೆ. ತಮಿಳುನಾಡಿನ ಚನ್ನೈನಿಂದ ಡ್ರೋನ್ಗಳನ್ನು ತರಿಸಿಕೊಳ್ಳಲಾಗುತ್ತಿದೆ. 25 ಡ್ರೋನ್ಗಳ ಮೂಲಕ ಕರೊನಾ ನಿಯಂತ್ರಣ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅತಿ ಹೆಚ್ಚು ಸೋಂಕು ಕಾಣಿಸಿಕೊಂಡ ಬೆಂಗಳೂರು ದಕ್ಷಿಣ ಭಾಗದಲ್ಲಿ ಈಗಾಗಲೇ ಡ್ರೋನ್ ಮೂಲಕ ರಾಸಾಯನಿಕ ಅಥವಾ ಸೋಂಕು ನಿವಾರಕ ಸಿಂಪಡನೆ ಕಾರ್ಯ ಆರಂಭವಾಗಿದೆ.
ಇದನ್ನೂ ಓದಿರಿ ಕೋವಿಡ್ ಆಸ್ಪತ್ರೆಗೆ ಹೋದ ದಿನವೇ ಧ್ರುವ ಸರ್ಜಾ, ಪತ್ನಿ ಪ್ರೇರಣಾ ಡಿಸ್ಚಾರ್ಜ್
ಬೆಂಗಳೂರು ದಕ್ಷಿಣ ವ್ಯಾಪ್ತಿಯ ಜಯನಗರದ 3 ನೇ ಬ್ಲಾಕ್‌ನಲ್ಲಿ ಇಂದು(ಗುರುವಾರ) ಡ್ರೋನ್ ಮೂಲಕ ಸ್ಯಾನಿಟೈಸರ್ ಸಿಂಪಡಣೆ ಕಾರ್ಯ ಆರಂಭವಾಗಿದ್ದು, ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ರವಿಸುಬ್ರಮಣ್ಯ ಚಾಲನೆ ನೀಡಿದರು.
ಒಂದು ಡ್ರೋಣ್‌ನಲ್ಲಿ ಕನಿಷ್ಠ 16 ಲೀಟರ್ ರಾಸಾಯನಿಕ ದ್ರವ ತುಂಬಿಸಿ ಸಿಂಪಡಣೆ ಮಾಡಲಾಗುತ್ತದೆ. ಒಂದು ಬಾರಿ ಡ್ರೋಣ್ ಹಾರಿಸಿದರೆ, 15 ನಿಮಿಷ ಅದರ ಶಕ್ತಿ ಇರುತ್ತದೆ. 15 ನಿಮಿಷದಲ್ಲಿ ಒಂದೂವರೆ ಎಕರೆಯಷ್ಟು ರಾಸಾಯನಿಕ ಸಿಂಪಡಣೆ ಮಾಡಬಹದು.
ಚೆನ್ನೈ, ಮುಂಬೈ, ನವದೆಹಲಿ ಸೇರಿದಂತೆ ಮತ್ತಿತರ ಕಡೆ ದ್ರೋಣ್‍ನಿಂದ ಸ್ಯಾನಿಟೈಸರ್ ಮಾಡಿದ ಪರಿಣಾಮ ಕೊಂಚ ಸೋಂಕು ಹಬ್ಬುವುದು ಇಳಿಮುಖವಾಗಿತ್ತು. ಈಗ ಬೆಂಗಳೂರಿನಲ್ಲೂ ಡ್ರೋನ್ ಮೂಲಕ ರಾಸಾಯನಿಕ ಸಿಂಪಡನೆ ಮಾಡಲಾಗುತ್ತಿದೆ.
video/ ಬೆಡ್ ಸಿಗದಿದ್ದಕ್ಕೆ ಹೆಂಡ್ತಿ, ಮಕ್ಕಳ ಜತೆ ಸಿಎಂ ಮನೆಗೆ ಬಂದ ಕರೊನಾ ಸೋಂಕಿತ!