More

    ಕೋವಿಡ್​ 19ಗೆ ಆಯುರ್ವೇದ ಚಿಕಿತ್ಸೆ: 29ಕ್ಕೆ ಟಾಸ್ಕ್​ ಫೋರ್ಸ್​ ಸಭೆಯಲ್ಲಿ ನಡೆಯಲಿದೆ ಚರ್ಚೆ

    ಬೆಂಗಳೂರು: ಕರೊನಾ ಕೋವಿಡ್ 19 ವೈರಸ್​ ಸೋಂಕು ಹರಡದಂತೆ ತಡೆಯುವ ಪ್ರಯತ್ನ ತೀವ್ರತರವಾಗಿ ನಡೆಯುತ್ತಿದೆ. ಈ ನಡುವೆ ಅಲೋಪಥಿ ಔಷಧ ಅಭಿವೃದ್ಧಿ ಪಡಿಸುವ ಪ್ರಯತ್ನ ಜಗತ್ತಿನ ನಾನಾ ಭಾಗದಲ್ಲಿ ನಡೆದಿದೆ. ಈ ಸಂಕಷ್ಟ ಕಾಲದಲ್ಲಿ ಭಾರತ ತನ್ನದೇ ಆದ ರೀತಿಯಲ್ಲಿ ಜಗತ್ತಿಗೆ ನೆರವಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದೆ. ಭಾರತದ ಆಯುರ್ವೇದ ಚಿಕಿತ್ಸೆಯಲ್ಲಿ ವೈರಾಣು ಸೋಂಕಿಗೆ ಔಷಧ ಇದೆ ಎಂಬುದನ್ನು ಆಯುರ್ವೇದ ಪರಿಣತರು ಈಗಾಗಲೆ ಪ್ರತಿಪಾದಿಸಿದ್ದಾರೆ. ಇದರಂತೆ ಕರ್ನಾಟಕ, ಗೋವಾ ಸೇರಿ ಕೆಲವು ರಾಜ್ಯಗಳಲ್ಲಿ ಕೋವಿಡ್19 ಸೋಂಕಿಗೆ ಆಯುರ್ವೇದ ಚಿಕಿತ್ಸೆಗೂ ಅವಕಾಶ ನೀಡಿವೆ. ಇದರ ಫಲಿತಾಂಶದ ಏನಿರಬಹುದೆಂಬ ಕುತೂಹಲ ಎಲ್ಲರನ್ನೂ ಕಾಡಿದೆ.

    ಇದನ್ನೂ ಓದಿ: ಪತಂಜಲಿಯಿಂದ “ಕರೊನಿಲ್​” ಔಷಧ ಬಿಡುಗಡೆ: ನೂರಕ್ಕೆ ನೂರು ಗುಣಪಡಿಸುವ ಭರವಸೆ!

    ರಾಜ್ಯದಲ್ಲೂ ಪ್ರಾಯೋಗಿಕವಾಗಿ ಕೋವಿಡ್ 19 ಸೋಂಕಿಗೆ ಆಯುರ್ವೇದ ಚಿಕಿತ್ಸೆ ನೀಡುವುದಕ್ಕೆ ಸರ್ಕಾರ ಅವಕಾಶ ನೀಡಿತ್ತು. ಈ ನಡುವೆ, ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ ಬುಧವಾರ ಮಧ್ಯಾಹ್ನ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದಾರೆ. ಸೋಮವಾರ ಟಾಸ್ಕ್​ ಫೋರ್ಸ್​ ಸಭೆ ನಡೆಯಲಿದ್ದು ಅಲ್ಲಿ ಆಯುರ್ವೇದ ಚಿಕಿತ್ಸೆ ಕುರಿತು ಚರ್ಚೆ ನಡೆಯಲಿದೆ ಎಂಬ ಅಂಶ ಬಹಿರಂಗವಾಗಿದೆ. ಡಾ.ಕಜೆ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ ವಿಚಾರವನ್ನು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಫೇಸ್​ಬುಕ್​ನಲ್ಲಿ ಅಪ್ಡೇಟ್ ಮಾಡಿದೆ.

    ಇದಕ್ಕೂ ಮುನ್ನ ಡಾ.ಕಜೆಯವರು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ, ಆಯುರ್ವೇದ ಚಿಕಿತ್ಸೆ ವಿಚಾರವನ್ನು ಚರ್ಚಿಸಿದ್ದಾರೆ. ಈ ಬೆಳವಣಿಗೆಗಳೊಂದಿಗೆ ಸೋಮವಾರ ನಡೆಯಲಿರುವ ಟಾಸ್ಕ್​ ಫೋರ್ಸ್ ಸಭೆಯಲ್ಲಿ ಆಯುರ್ವೇದ ಚಿಕಿತ್ಸೆಯ ಪರಿಣಾಮ ಏನೆಂಬುದು ಬಹಿರಂಗವಾಗುವ ನಿರೀಕ್ಷೆ ಇದೆ.

    ಕರೊನಾ ಸೋಂಕಿಗೆ ಆಯುರ್ವೇದದಲ್ಲಿ ರಾಮಬಾಣ: ವಿಜಯವಾಣಿ ಅಂಕಣಕಾರ ಡಾ.ಗಿರಿಧರ ಕಜೆ ಪ್ರತಿಪಾದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts