More

    ಕರೊನಾ ಬಾರದಿರಲಿ ಎಂದು ಆ್ಯಂಟಿ ಮಲೇರಿಯಾ ಔಷಧಿ ಸೇವಿಸಿದ ವೈದ್ಯನ ಜೀವ ಹೋಯ್ತು; ಆದ್ರೂ ಅವರ ಸಾವಿನ ಬಗ್ಗೆ ಗೊಂದಲ

    ಗುವಾಹಟಿ: ಕರೊನಾ ವೈರಸ್​ಗೆ ಇಲ್ಲಿಯವರೆಗೆ ಯಾವುದೇ ನಿರ್ದಿಷ್ಟ ಔಷಧಿಯಾಗಲಿ, ಲಸಿಕೆಯಾಗಿ ಇಲ್ಲ. ಸದ್ಯ ವೈದ್ಯರು ಸೋಂಕಿತರಿಗೆ ಆ್ಯಂಟಿ ಮಲೇರಿಯಾ, ಆ್ಯಂಟಿ ಎಚ್​ಐವಿ ಲಸಿಕೆಗಳನ್ನೇ ನೀಡಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯ ವೈದ್ಯರೋರ್ವರು ಮಾಡಿಕೊಂಡ ಅಚಾತುರ್ಯದಿಂದ ಅವರ ಜೀವವೇ ಹೋಗಿದೆ.

    ಆಸ್ಸಾಂನ ಗುವಾಹಟಿಯ ಖಾಸಗಿ ಆಸ್ಪತ್ರೆಯೊಂದರ ಹಿರಿಯ ಅರಿವಳಿಕೆ ತಜ್ಞ ಉತ್ಪಾಲ್​​ಜಿತ್​ ಬರ್ಮನ್​(44) ಅವರು ಕರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಆ್ಯಂಟಿ ಮಲೇರಿಯಾ ಔಷಧಿಯಾದ ಹೈಡ್ರಾಕ್ಸಿಕ್ಲೋರೋಕ್ವಿನ್​ನ್ನು ಸೇವಿಸಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಕರೊನಾ ಇಲ್ಲದಿದ್ದರೂ ಅದಕ್ಕೆ ಔಷಧಿ ತೆಗೆದುಕೊಂಡ ಬಳಿಕ ವೈದ್ಯರು ಸ್ವಲ್ಪ ಮಟ್ಟಿಗೆ ಅಸ್ವಸ್ಥರಾಗಿದ್ದರು. ಈ ಬಗ್ಗೆ ತಮ್ಮ ಸಹೋದ್ಯೋಗಿಯೋರ್ವರಿಗೆ ವಾಟ್ಸ್​ಆ್ಯಪ್​ ಮೆಸೇಜ್​ನಲ್ಲಿ ತಿಳಿಸಿದ್ದರು. ಆದರೆ ಮೃತಪಟ್ಟಿದ್ದು ಹೃದಯಾಘಾತದಿಂದ ಎಂದು ವರದಿ ಬಂದಿದೆ. ಔಷಧವೇ ಹೃದಯಾಘಾತಕ್ಕೆ ಕಾರಣವಾಯಿತಾ ಎಂಬ ಬಗ್ಗೆ ಸ್ಪಷ್ಟ ವರದಿ ಬಂದಿಲ್ಲ.

    ಮೃತ ಡಾ. ಬರ್ಮನ್​ ಅವರು ಯಾವುದೇ ಕರೊನಾ ಸೋಂಕಿತರಿಗೂ ಚಿಕಿತ್ಸೆ ನೀಡುತ್ತಿರಲಿಲ್ಲ. ಆಸ್ಸಾಂನಲ್ಲಿ ಇದುವರೆಗೂ ಕರೊನಾ ವೈರಸ್​ ಪತ್ತೆಯಾಗಿಲ್ಲ. ಹೀಗಿರುವಾಗ ಸುಮ್ಮನೆ ತೆಗೆದುಕೊಂಡಿದ್ದರು. ಔಷಧಿ ಸೇವನೆ ಬಳಿಕ ತೀವ್ರ ತೊಂದರೆ ಅನುಭವಿಸಿದ ಅವರು ಆತಂಕಕ್ಕೀಡಾಗಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಕೊವಿಡ್​ ಬಾರದಂತೆ ಸ್ವಯಂ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಔಷಧವನ್ನು ತೆಗೆದುಕೊಳ್ಳಬಾರದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts